ಖ್ಯಾತ ಹಾಸ್ಯನಟ ಮದನ್ ಬಾಬ್ ನಿಧನ
Actor Madhan Bob passes away: ತಮಿಳು ಚಿತ್ರರಂಗದ ಖ್ಯಾತ ಹಾಸ್ಯನಟ ಮದನ್ ಬಾಬ್ (71) ಆಗಸ್ಟ್ 2ರ ಶನಿವಾರ ಸಂಜೆ ನಿಧನರಾಗಿದ್ದಾರೆ.
ಕ್ಯಾನ್ಸರ್‌ನಿಂದ ಬಳಲುತ್ತಿದ್ದ ನಟ ಶನಿವಾರ ಸಂಜೆ ಅಡ್ಯಾರ್ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಹಾಗಾದ್ರೆ ಇವರು ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ್ದು ಯಾವಾಗ ಹಾಗೂ ಯಾರೆಲ್ಲಾ ಪ್ರಮುಖ ನಟರ ಜೊತೆ ಸಿನಿಮಾ ಮಾಡಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

1984ರಲ್ಲಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ನಟ ಮಧನ್ ಬಾಬ್ ಅವರು ಸ್ಟಾರ್ ನಟರಾದ ಕಮಲ್ ಹಾಸನ್, ರಜನಿಕಾಂತ್, ಅಜಿತ್ ಕುಮಾರ್, ಸೂರ್ಯ ಮತ್ತು ವಿಜಯ್ ಅವರೊಂದಿಗೆ ಸಿನಿಮಾಗಳನ್ನು ಮಾಡಿದ್ದಾರೆ. ಹಾಸ್ಯ, ಖಳನಾಯಕ ಸೇರಿದಂತೆ ಪ್ರಮುಖ ಪಾತ್ರಗಳಲ್ಲಿ ನಟಿಸಿ ಜನರನ್ನ ರಂಜಿಸುವ ಮೂಲಕ ಪ್ರಸಿದ್ಧಿ ಪಡೆದವರಾಗಿದ್ದರು.
ಸಿನಿರಂಗದಲ್ಲಿ ಸುದೀರ್ಘ ವೃತ್ತಿ ಜೀವನದಲ್ಲಿ, ಅವರು 150ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಬಣ್ಣಹಚ್ಚಿದ್ದಾರೆ. ತಮಿಳು ಅಷ್ಟೇ ಅಲ್ಲದೆ, ಮಲಯಾಳಂ, ಹಿಂದಿ, ತೆಲುಗು ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ. ತಮಿಳಿನ ತೆನಾಲಿ ಚಿತ್ರದಲ್ಲಿ ಡೈಮಂಡ್ ಬಾಬು, ಫ್ರೆಂಡ್ಸ್ ಚಿತ್ರದಲ್ಲಿ ಮ್ಯಾನೇಜರ್ ಸುಂದರೇಶನ್ ಪಾತ್ರಗಳಂತೂ ಈಗಲೂ ಅಚ್ಚಳಿಯದೇ ಪ್ರೇಕ್ಷಕರ ಮನಸಿನಲ್ಲಿ ಉಳಿದುಬಿಟ್ಟಿವೆ. ಅಷ್ಟರ ಮಟ್ಟಿಗೆ ಈ ಚಿತ್ರಗಳಲ್ಲಿ ನಟನೆ ಮಾಡಿ ರಂಜಿಸಿದ್ದಾರೆ. ಅವರು ಕಳೆದ ಕೆಲವು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರಲಿಲ್ಲ.
ಮದನ್ ಬಾಬ್ ಕೇವಲ ನಟರಾಗಿರಲಿಲ್ಲ. ಇದರ ಹೊರತಾಗಿಯೂ ಅವರು ಸಂಗೀತ ಸಂಯೋಜಕರೂ ಆಗಿ ಗುರುತಿಸಿಕೊಂಡಿದ್ದಾರೆ. ಅವರ ನಿಜವಾದ ಹೆಸರು ಮದನ್ ಆಗಿದ್ದು, ಅವರು ತಮ್ಮ ಸಹೋದರನ ಹೆಸರಾದ ಬಾಬುವನ್ನು ಸೇರಿಸಿ ಮದನ್ ಬಾಬ್ ಎಂಬ ಹೆಸರನ್ನು ಪಡೆದರು.
ಕೆ.ಬಾಲಚಂದರ್ ಅವರ ಚಿತ್ರದ ಮೂಲಕ ಚಿಂತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಅವರು 150ಕ್ಕೂ ಅಧಿಕ ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ ಹಾಗೂ ಉತ್ತಮ ಕಥೆಗಾರರೂ ಕೂಡ ಆಗಿದ್ದಾರೆ. ತಮ್ಮ ಮಾತು ಮತ್ತು ನಡೆಗಳಿಂದ ಪ್ರೇಕ್ಷಕರನ್ನು ರಂಜಿಸಿದವರಾಗಿದ್ದಾರೆ.












Click it and Unblock the Notifications