Darshan Thoogudeepa: ರೇಣಕಾಸ್ವಾಮಿ ರೀತಿಯೇ ಪವಿತ್ರಾ ಗೌಡಗೆ ಕಮೆಂಟ್‌ಗಳನ್ನ ಹಾಕುತ್ತಿರುವ ಡಿ-ಬಾಸ್ ಅಭಿಮಾನಿ!
ದರ್ಶನ್ ತೂಗುದೀಪ್ & ಗ್ಯಾಂಗ್ ಈಗಾಗಲೇ ಕೊಲೆ ಆರೋಪದಲ್ಲಿ ಜೈಲು ಸೇರಿದೆ ಅಂತಾ ಹೇಳುತ್ತಿದ್ದಾರೆ ನಟ ದರ್ಶನ್ ವಿರೋಧಿಗಳು. ಆದರೆ ನಮ್ಮ ಬಾಸ್ ಸರಿಯಾಗೇ ಮಾಡಿದ್ದಾರೆ ಅಂತಾ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ ದರ್ಶನ್ ತೂಗುದೀಪ್ ಅಭಿಮಾನಿಗಳು. ಹೀಗೆಲ್ಲಾ ಕಿರಿಕ್ ಬಲು ಜೋರಾಗಿರುವ ಸಮಯದಲ್ಲೇ, ಸೋಷಿಯಲ್ ಮೀಡಿಯಾದಲ್ಲಿ ರೇಣುಕಾಸ್ವಾಮಿ ರೀತಿಯಲ್ಲೇ ವ್ಯಕ್ತಿಯೊಬ್ಬ ಪವಿತ್ರಾ ಗೌಡ ವಿರುದ್ಧ ಕಮೆಂಟ್ಸ್ ಹಾಕುತ್ತಿದ್ದಾನೆ. ಹಾಗಾದ್ರೆ ಈ ವ್ಯಕ್ತಿಗೆ ದರ್ಶನ್ ತೂಗುದೀಪ್ ಅಭಿಮಾನಿಗಳು ಏನು ಹೇಳುತ್ತಿದ್ದಾರೆ ಗೊತ್ತೆ?
ಪವಿತ್ರಾ ಗೌಡಗೆ ಕೆಟ್ಟ ಕಮೆಂಟ್ ಹಾಕುತ್ತಿದ್ದ & ಪವಿತ್ರಾ ಗೌಡಗೆ ಸೋಷಿಯಲ್ ಮೀಡಿಯಾ ಮೂಲಕ ಅಶ್ಲೀಲ ಮೆಸೇಜ್ ಕಳುಹಿಸಿದ್ದ ಎಂಬ ಕಾರಣಕ್ಕೆ ರೇಣುಕಾ ಸ್ವಾಮಿಯನ್ನ ಭೀಕರ ಕೊಲೆ ಮಾಡಲಾಗಿದೆ ಎಂಬ ಆರೋಪ ಇದೆ. ಅದರಲ್ಲೂ ದರ್ಶನ್ ತೂಗುದೀಪ್ & ಗ್ಯಾಂಗ್ ಸೇರಿಕೊಂಡು ಈ ಕೃತ್ಯ ನಡೆಸಿದ್ದು, ಇದರಲ್ಲಿ ಪವಿತ್ರಾ ಗೌಡ ಪಾತ್ರ ಕೂಡ ಪ್ರಮುಖವಾಗಿದೆ ಎಂಬ ಆರೋಪ ಮಾಡಲಾಗುತ್ತಿದೆ. ಪರಿಸ್ಥಿತಿ ಹೀಗಿದ್ದಾಗಲೇ ಮತ್ತೊಬ್ಬ ವ್ಯಕ್ತಿ ಪದೇ ಪದೇ ಪವಿತ್ರಾ ಗೌಡ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ, ಕೆಟ್ಟ ಕೆಟ್ಟ ಕಮೆಂಟ್ಸ್ ಹಾಕುತ್ತಿದ್ದಾನೆ. ಹೀಗಾಗಿ ದರ್ಶನ್ ತೂಗುದೀಪ್ ಅಭಿಮಾನಿಗಳು & ಕನ್ನಡಿಗರು ಏನೆಂದು ಎಚ್ಚರಿಕೆ ನೀಡ್ತಾ ಇದ್ದಾರೆ ಗೊತ್ತಾ? ಮುಂದೆ ಓದಿ.

'ಶೆಡ್' ಗ್ಯಾರಂಟಿ ಅಂತಾ ಎಚ್ಚರಿಕೆ!
ದರ್ಶನ್ ತೂಗುದೀಪ್ & ಗ್ಯಾಂಗ್ ಸೇರಿಕೊಂಡು ರೇಣುಕಾಸ್ವಾಮಿ ಎಂಬ ವ್ಯಕ್ತಿಯನ್ನ ತೀವ್ರ ರೀತಿಯಲ್ಲಿ ಹಲ್ಲೆ ಮಾಡಿ, ಎತ್ತಿ ಎತ್ತಿ ಬಿಸಾಡಿ, ಮರ್ಮಾಂಗದ ಸಿಪ್ಪೆ ಸುಲಿದು, ಸಿಗರೇಟ್ & ಇತರ ವಸ್ತುಗಳಿಂದ ಬರೆ ಹಾಕಿ, ತಲೆಯ ಮೇಲೆ ತೂತು ಮಾಡಿ, ಮರ್ಮಾಂಗಕ್ಕೆ ಜಾಡಿಸಿ ಒದ್ದು, ಕರೆಂಟ್ ಶಾಕ್ ಕೊಟ್ಟು ಕೊಲೆಯನ್ನ ಮಾಡಿದೆ ಎಂಬ ಆರೋಪ ಇದೆ. ಹೀಗಿದ್ದಾಗ ರೇಣುಕಾಸ್ವಾಮಿ ರೀತಿಯಲ್ಲೇ ಮತ್ತೊಬ್ಬ ವ್ಯಕ್ತಿ ಕೊಲೆ ಆರೋಪದ ಕಿಂಗ್‌ಪಿನ್ ಮತ್ತು ದರ್ಶನ್ ತೂಗುದೀಪ್ ಆಪ್ತ ಗೆಳತಿ ಪವಿತ್ರಾ ಗೌಡ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾನಂತೆ.
ತಾನು ದರ್ಶನ್ ತೂಗುದೀಪ ಅಭಿಮಾನಿ ಎಂದು ಹೇಳಿಕೊಳ್ಳುತ್ತಿರುವ ಈ ವ್ಯಕ್ತಿ, ದರ್ಶನ್ ತೂಗುದೀಪ್ ಅವರ ಬಾಳು ಹಾಳು ಮಾಡಿದ್ದು ಪವಿತ್ರಾ ಗೌಡ ಎಂದು ಆರೋಪ ಮಾಡ್ತಿದ್ದಾನೆ. ಅಲ್ಲದೆ ದರ್ಶನ್ ತೂಗುದೀಪ್ ತಕ್ಷಣ ಪವಿತ್ರಾ ಗೌಡ ಸಹವಾಸ ಬಿಡಬೇಕು ಅಂತಿದ್ದಾನೆ ಈತ. ಹೀಗಾಗಿ ಜನ ಆತನನ್ನ ಎಚ್ಚರಿಸುತ್ತಿದ್ದು, ನಿನ್ನ ಕೂಡ ರೇಣುಕಾಸ್ವಾಮಿ ಪರಿಸ್ಥಿತಿಗೆ ತರುತ್ತಾರೆ ಇದೆಲ್ಲಾ ಬೇಕಾ? ಅಂತಿದ್ದಾರೆ. ಅಲ್ಲದೆ, ಶೆಡ್ ಗ್ಯಾರಂಟಿ ಅಂತಾ ಭಯ ಹುಟ್ಟಿಸುತ್ತಿದ್ದಾರೆ.












Click it and Unblock the Notifications