Darshan: ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ, ವಿಡಿಯೋ ವೈರಲ್
ನಟ ದರ್ಶನ್ ತೂಗುದೀಪ್ ಹಾಗೂ ನಟ ಸುದೀಪ್ ಅವರ ನಡುವೆ ಮುಸುಕಿನ ಗುದ್ದಾಟ ನಡೆದಿದೆ ಎನ್ನುವ ವಿಚಾರವು ಹಲವು ದಿನಗಳಿಂದ ಚರ್ಚೆ ಆಗುತ್ತಲ್ಲೇ ಇದೆ. ಒಂದು ಕಾಲದಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ಆತ್ಮೀಯರು ಎಂದೇ ಗುರುತಿಸಿಕೊಂಡಿರುವ ಇಬ್ಬರು ನಟರು ಕಳೆದ ಕೆಲವು ವರ್ಷಗಳಿಂದ ದೂರವಾಗಿದ್ದಾರೆ. ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಹಲವು ವರ್ಷಗಳೇ ಆಗಿವೆ. ಆದರೆ, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿದ ಮೇಲೆ ನಟ ದರ್ಶನ್ ಹಾಗೂ ಸುದೀಪ್ ಅವರ ಫ್ಯಾನ್ಸ್‌ಗಳ ನಡುವೆ ಫ್ಯಾನ್ಸ್ ವಾರ್ ಜೋರಾಗಿದೆ.
ಕಳೆದ ಕೆಲವು ದಿನಗಳ ಹಿಂದಷ್ಟೇ ಸುದೀಪ್ ಅವರು ಮ್ಯಾಕ್ಸ್ ಸಿನಿಮಾ ಸಂಭ್ರಮಾಚರಣೆಯ ಸಂದರ್ಭದಲ್ಲಿ ನಟ ಸುದೀಪ್ ಅವರು ಕತ್ತರಿಸಿದ ಕೇಕ್‌ನ ಮೇಲೆ "ಬಾಸಿಸಂ ಕಾಲ ಮುಗಿಯಿತು, ಮ್ಯಾಕ್ಸಿಮಮ್ ಮಾಸ್ ಕಾಲ ಶುರುವಾಯ್ತು" ಎಂದು ಬರೆಯಲಾಗಿತ್ತು. ಇದು ಡಿ ಬಾಸ್ ಅವರನ್ನು ಗುರಿಯಾಗಿಸಿಕೊಂಡೇ ಬರೆಯಲಾಗಿದೆ ಎಂದು ಕೆಲವರು ದೂರಿದ್ದರು. ಆದರೆ ಅದು ಮ್ಯಾಕ್ಸ್‌ನ ಸಂಭ್ರಮಾಚರಣೆ ಮಾತ್ರ ಎಂದು ಚಿತ್ರ ತಂಡವು ಸ್ಪಷ್ಟನೆ ನೀಡಿತ್ತು. ಇದೀಗ ನಟ ದರ್ಶನ್ ಅವರ ಪತ್ನಿ ವಿಜಯ ಲಕ್ಷ್ಮಿ ಅವರೇ ಪರೋಕ್ಷವಾಗಿ ಸುದೀಪ್‌ಗೆ ಟಾಂಗ್ ಕೊಟ್ಟಿದ್ದಾರೆ.

ನಟ ಸುದೀಪ್ ಅವರು ನಟಿಸಿರುವ ಮಾರ್ಕ್ ಸಿನಿಮಾ ಬಿಡುಗಡೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಈ ಸಿನಿಮಾದ ಪ್ರಚಾರದ ಸಂದರ್ಭದಲ್ಲಿ ಸುದೀಪ್ ಅವರು ಮಾತನಾಡಿರುವುದು ಹೊಸ ಚರ್ಚೆಗೆ ಕಾರಣವಾಗಿದೆ. ಸುದೀಪ್ ಅವರ ಹೇಳಿಕೆಗೆ ನಟ ದರ್ಶನ್ ಅವರ ಪತ್ನಿ ಪರೋಕ್ಷ ಟಾಂಗ್ ಕೊಟ್ಟಿದ್ದು, ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ನಟ ಸುದೀಪ್ ಅವರು ಸಿನಿಮಾದ ಪ್ರಚಾರದ ಭಾಗವಾಗಿ ಡಿಸೆಂಬರ್ 20ರಂದು ಹುಬ್ಬಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ್ದರು.
ಫ್ಯಾನ್ಸ್ ಪರವಾಗಿ ಮಾತನಾಡಿದ್ದ ಸುದೀಪ್
ಇನ್ನು ಶನಿವಾರ ನಟ ಸುದೀಪ್ ಅವರು ಫ್ಯಾನ್ಸ್ ಪರವಾಗಿ ಮಾತನಾಡಿದ್ದರು. ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಿರುವ ಫ್ಯಾನ್ಸ್ ವಾರ್ ವಿಚಾರವಾಗಿ ಮಾತನಾಡಿದ್ದ ಸುದೀಪ್ ಅವರು, ತಮ್ಮ ಸಿನಿಮಾದ ವಿರುದ್ಧ ನೆಗೆಟಿವ್ ಪ್ರಚಾರ ಮಾಡುತ್ತಿರುವ ದರ್ಶನ್ ಅಭಿಮಾನಿಗಳಿಗೆ ಪರೋಕ್ಷವಾಗಿ ಎಚ್ಚರಿಕೆ ಕೊಟ್ಟಿದ್ದರು.
ಪರೋಕ್ಷ ಟಾಂಗ್ ಕೊಟ್ಟ ವಿಜಯಲಕ್ಷ್ಮಿ
ಇನ್ನು ನೆನ್ನೆ ಸುದೀಪ್ ಅವರು ಮಾತನಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರು ದಾವಣಗೆರೆಯಲ್ಲಿ ಮಾತನಾಡಿದ್ದು, ಸುದೀಪ್ ಅವರಿಗೆ ಟಾಂಗ್ ಕೊಟ್ಟಿದ್ದಾರೆ. ದರ್ಶನ್ ಜೈಲಿನಲ್ಲಿರುವಾಗಲೇ ಕೆಲವರು ಅವರ ಬಗ್ಗೆ, ಅವರ ಫ್ಯಾನ್ಸ್ ಬಗ್ಗೆ ಮಾತನಾಡುತ್ತಿದ್ದಾರೆ. ಹೊರಗಡೆ ಹಾಗೂ ಮಾಧ್ಯಮಗಳಿಗೆ ಹೇಳಿಕೆ ನೀಡುತ್ತಾರೆ. ವೇದಿಕೆಗಳ ಮೇಲೆ ಮಾತನಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾಗಳಲ್ಲೂ ಮಾತನಾಡುತ್ತಿದ್ದಾರೆ. ಆದರೆ ಇವರೆಲ್ಲರೂ ದರ್ಶನ್ ಅವರು ಇದ್ದಾಗ ಮಾತ್ರ ಅವರು ಗೊತ್ತೇ ಆಗದಂತೆ ಇರುತ್ತಾರೆ. ಬೆಂಗಳೂರಿನಲ್ಲಿ ಇದ್ದಾರೋ ಇಲ್ವೋ ಅಂತನೂ ಗೊತ್ತೇ ಆಗದಂತೆ ಇರುತ್ತಾರೆ.
ದರ್ಶನ್ ಫ್ಯಾನ್ಸ್‌ಗೆ ನನ್ನದೊಂದು ಮಾತು ಯಾವುದೇ ಕಾರಣಕ್ಕೂ ದರ್ಶನ್ ಟೀಕಿಸುವವರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ನಾನೂ ತಲೆ ಕೆಡಿಸಿಕೊಳ್ಳುವುದಿಲ್ಲ, ಬೇಜಾರು ಮಾಡಿಕೊಳ್ಳುವುದಿಲ್ಲ. ದರ್ಶನ್ ಅಭಿಮಾನಿಗಳಾದ ನೀವೂ ತಲೆಕೆಡಿಸಿಕೊಳ್ಳಬೇಡಿ ಆರಾಮಾಗಿ ಇರಿ ಎಂದು ವಿಜಯಲಕ್ಷ್ಮಿ ಅವರು ಹೇಳಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಇದೀಗ ವೈರಲ್ ಆಗುತ್ತಿದೆ.
Vijaylakshmi Darshan Attige Speech 🔥
— Worldwide DBoss Die Hard Fans - R (@DBoss_Celebrity) December 21, 2025
#DBoss #TheDevil @dasadarshan pic.twitter.com/bsnFJOJHGR
ಮೊದಲ ಬಾರಿ ಮೌನ ಮುರಿದ ವಿಜಯಲಕ್ಷ್ಮಿ
ಇನ್ನು ದರ್ಶನ್ ಅವರ ಪತ್ನಿ ವಿಜಯ ಲಕ್ಷ್ಮಿ ಅವರು ಇದೇ ಮೊದಲ ಬಾರಿ ಮೌನ ಮುರಿದಿದ್ದಾರೆ. ವೇದಿಕೆಗಳಲ್ಲಿ ಎಂದಿಗೂ ನೇರವಾಗಿ ಮಾತನಾಡದೆ ಇದ್ದಂತಹ ವಿಜಯಲಕ್ಷ್ಮಿ ಅವರು ಇದೀಗ ಮೊದಲ ಬಾರಿ ಮೌನ ಮುರಿದಿದ್ದಾರೆ. ಇವರು ಮಾತನಾಡಿರುವ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ನಟ ದರ್ಶನ್ ಅವರ ಫ್ಯಾನ್ಸ್ ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ.












Click it and Unblock the Notifications