ಕನ್ನಡ ಬಾರದ 'ಹೆಸರ' ನಟ ದರ್ಶನ್‌ ಅಂಧಾಭಿಮಾನಿಗಳು-ಯಾವೋ ಇವೆಲ್ಲ?, ನೆಟ್ಟಿಗರ ಹಿಗ್ಗಾಮುಗ್ಗಾ ವಾಗ್ದಾಳಿ

Actor Darshan Thoogudeepa: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ & ಗ್ಯಾಂಗ್‌ ಜೈಲು ಸೇರಿದ್ದಾರೆ. ಇನ್ನು ಅಭಿಮಾನಿಗಳು ತಮ್ಮ ನೆಚ್ಚಿನ ನಟ ಹೊರಬರಲೆಂದು ವಿಶೇಷ ಪೂಜೆಗಳನ್ನು ಮಾಡಿಸುತ್ತಿದ್ದರೆ, ಇನ್ನು ಕೆಲವು ಅಂಧಾಭಿಮಾನಿಗಳನ್ನು ಹುಚ್ಚಾಟ ಮೆರೆಯುವ ಮೂಲಕ ಪ್ರಚೋದನೆ ನೀಡುವಂತಹ ಕೆಸಲಗಳನ್ನು ಮಾಡುತ್ತಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ ದರ್ಶನ್‌ನನ್ನು ಹೊರತರಲು ಪತ್ನಿ ವಿಜಯಲಕ್ಷ್ಮಿ ಹಾಗೂ ಕುಟುಂಬಸ್ಥರು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಆದರೆ, ಈಗಾಗಲೇ ಹಲವು ಕಾರಣಗಳಿಂದ ಹಲವು ಬಾರಿ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆಯಾಗುತ್ತಲೇ ಬಂದಿದೆ. ಇನ್ನು ಇಂದು (ಅಕ್ಟೋಬರ್‌ 08) ಮತ್ತೆ ಬೆಂಗಳೂರಿನ 57ನೇ ಸಿಸಿಎಚ್‌ ಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ ನಡೆಯಲಿದ್ದು, ಜಾಮೀನು ಸಿಗುವ ಭರವಸೆಯಲ್ಲಿ ಅಭಿಮಾನಿಗಳು ಇದ್ದಾರೆ.

Actor Darshan Fans Disrespect To Kannada in Dasara banner at Hesaralli village viral

ಆದರೆ ಇನ್ನೂ ಕೆಲವರು ಪ್ರಚೋದನೆ ನೋಡುವಂತಹ ವಿಚಿತ್ರ ಬ್ಯಾನರ್‌ ಹಾಕುವ ಮೂಲಕ ಅಂಧಾಭಿಮಾನ ಮೆರೆಯುತ್ತಿದ್ದಾರೆ. ಇಂತಹದ್ದೆ ಘಟನೆ ಹೆಸರಳ್ಳಿ ಎಂಬ ಗ್ರಾಮದಲ್ಲಿ ನಡೆದಿದೆ. ಇದೀಗ ರಾಜ್ಯಾದ್ಯಂತ ಮಹನವಮಿ ಹಾಗೂ ಆಯುಧ ಪೂಜಾ ನಡೆಯುತ್ತಿದ್ದು, ಈ ವೇಳೆಯೇ ಕೆಲವರು ಇಂತಹ ಬ್ಯಾನರ್‌ ಹಾಕಿಸುವ ಮೂಲಕ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಕೆಲವು ದರ್ಶನ್‌ ಅಭಿಮಾನಿಗಳು ಬ್ಯಾನರ್‌ನಲ್ಲಿ "ಮಾಹನವಮಿ ಹಾಗೂ ಆಯುಧ ಪೂಜಾ ಹಬ್ಬದ ಶುಭಾಷಯಗಳು ಎಂದು ಕೋರುವವರು ಹೆಸರಹಳ್ಳಿ ಡಿ ಬಾಸ್‌ ಅಭಿಮಾನಿಗಳ ಬಳಗ ಎಂದು ಬರೆಸುವ ಮೂಲಕ ಕನ್ನಡಕ್ಕೆ ಅಪಮಾನ ಮಾಡಿದ್ದಾರೆ. ಅಲ್ಲದೆ, ನೋಡಿ ಉರ್‌ಕೋಬೇಕು ಅಷ್ಟೇ..!, ಏನು ಕಿತ್ಕೋಳಕ್ಕೆ ಆಗಲ್ಲ..!," ಎಂದು ಬರೆಸುವ ಮೂಲಕ ದರ್ಪ ಮೆರೆದಿದ್ದಾರೆ.

ಇನ್ನು ಈ ಪೋಸ್ಟರ್‌ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದ್ದು, ನೆಟ್ಟಿಗರು ಹೀಗೆ ಬರೆಸಿದ ಅಂಧಾಭಿಮಾನಿಗಳ ವಿರುದ್ಧ ಕಿಡಿಕಾರುತ್ತಿದ್ದಾರೆ. "ಅಭಿಮಾನ ಇರಬೇಕು.. ಅಂಧಾಮಿಮಾನ ಇರಬಾರದು. ಅಂಧಾಭಿಮಾನ ಮೆರೆಯುವ ಮೂಲಕ ಕನ್ನಡ ಭಾಷೆಗೆ ಅವಮಾನ ಮಾಡಿದ್ದಾರೆ ಮತ್ತು ಪ್ರಚೋದನೆ ನೀಡುವಂತಹ ಕೆಲಸವನ್ನು ಮಾಡುತ್ತಿದ್ದಾರೆ. ಇವರೆಲ್ಲ ಸಮಾಜಕ್ಕೆ ಏನು ಸಂದೇಶ ಕೊಡಲು ಹೊರಟಿದ್ದಾರೆ," ಅಂತಲೂ ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.

ಈಗಾಗಲೇ ಅಂಧಾಮಿಮಾನ ಮೆರೆದವರನ್ನು ಪೊಲೀಸರು ಹೆಡೆಮುರಿ ಕಟ್ಟುವ ಕೆಲಸವನ್ನು ಕೂಡ ಮಾಡಿದ್ದಾರೆ. ಇಷ್ಟಾದರೂ ಎಚ್ಚೆತ್ತುಕೊಳ್ಳದ ಕೆಲವರು ಬ್ಯಾನರ್‌ಗಳಲ್ಲಿ ಪ್ರಚೋದನೆ ಹಾಗೂ ಸಮಾಜಕ್ಕೆ ಮಾರಕ ಆಗುವಂತಹ ಬರಹಗಳನ್ನು ಬರೆಸುವ ಮೂಲಕ ದರ್ಪ ಮುಂದುವರೆಸಿದ್ದಾರೆ.

ಈಗಾಗಲೇ ಕೆಲವು ಅಂಧಾಭಿಮಾನಿಗಳು ಆಟೋ, ಬೈಕ್‌ ಸೇರಿದಂತೆ ತಮ್ಮ ಮೈಮೇಲೆ ನಟ ದರ್ಶನ್‌ಗೆ ನೀಡಲಾಗಿದ್ದ ಕೈದಿ ನಂಬರ್‌ ಬರೆಸಿದ್ದರು. ಆದರೆ ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ಶಿಫ್ಟ್‌ ಮಾಡಿದಾಗ ಮತ್ತೆ ಆ ನಂಬರ್‌ ಚೇಂಜ್‌ ಆಗಿದೆ. ಇದಾದ ಮೇಲೂ ಮತ್ತೆ ಬಳ್ಳಾರಿ ಜೈಲಿನಲ್ಲಿ ನೀಡಲಾದ ನಂಬರ್‌ ಅನ್ನು ಸಹ ಹಾಕಿಸಿಕೊಂಡು ಹುಚ್ಚಾಟ ಮೆರೆದಿದ್ದರು.

ರೇಣುಕಾಸ್ವಾಮಿ ಕೊಲೆ ಪ್ರಕರದಣದ ಆರೋಪಿ ನಟ ದರ್ಶನ್‌ ಮೊದಲಿಗೆ ಪರಪ್ಪನ ಅಗ್ರಹಾದಲ್ಲಿವಾಗ ಅಲ್ಲಿ ರೌಡಿಶೀಟರ್‌ ವಿಲ್ಸನ್‌ ಗಾರ್ಡನ್‌ ನಾಗನ ಜೊತೆ ಕುಳಿತು ರೆಸಾರ್ಟ್‌ ರೀತಿಯಲ್ಲಿ ಪಾರ್ಟಿ ಮಾಡಿದ್ದರು. ಅಲ್ಲದೆ, ಇದೇ ವೇಳೆ ಒಂದು ಕೈಯಲ್ಲಿ ಸಿಗರೇಟ್‌ ಮತ್ತೊಂದು ಕೈಯಲ್ಲಿ ಕಾಫಿ ಮಗ್‌ ಹಿಡಿದು ಹರಟೆ ಹೊಡೆದಿದ್ದರು. ಇನ್ನೂ ಈ ಫೋಟೋ ಎಲ್ಲಡೆ ವೈರಲ್‌ ಆಗಿತ್ತು.

ಇದರ ಬೆನ್ನಲ್ಲೇ ನಟ ದರ್ಶನ್‌ ವಿಐಪಿ ಸೆಲ್‌ನಿಂದಲೇ ವಿಡಿಯೋ ಕಾಲ್‌ ಮಾಡಿ ರೌಡಿ ಶೀಟರ್‌ಗಳ ಜೊತೆ ಮಾತನಾಡಿರುವ ವಿಡಿಯೋ ಕೂಡ ವೈರಲ್‌ ಆಗಿದ್ದು, ಇದಕ್ಕೆ ವ್ಯಾಪಕ ಆಕ್ರೋಶಗಳು ಭುಗಿಲೆದ್ದಿದ್ದವು. ಬಳಿಕ ಎಚ್ಚೆತ್ತ ಸರ್ಕಾರ ಅಲ್ಲಿನ 9 ಮಂದಿ ಜೈಲಾಧಿಕಾರಿಗಳನ್ನು ಅಮಾನತು ಮಾಡಿತ್ತು. ಇನ್ನು ಪೊಲೀಸರು ಕೋರ್ಟ್‌ ಆದೇಶದ ಮೇರೆಗೆ ನಟ ದರ್ಶನ್‌ನನ್ನು ಬಳ್ಳಾರಿ ಜೈಲಿಗೆ ಶಿಫ್ಟ್‌ ಮಾಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+