ಮುಖ್ಯಪುಟ
 » 
ಲೋಕಸಭೆ ಚುನಾವಣೆ
 » 
ಬಿ ಜೆ ಪಿ vs ಐ ಎನ್ ಸಿ ಪ್ರಣಾಳಿಕೆ

ಲೋಕಸಭೆ ಚುನಾವಣೆಗೆ ಬಿ ಜೆ ಪಿ vs ಐ ಎನ್ ಸಿ ಪ್ರಣಾಳಿಕೆ

ಲೋಕಸಭೆ ಚುನಾವಣೆಯಲ್ಲಿ ಸೆಣಸುತ್ತಿರುವ ಎಲ್ಲ ಪ್ರಮುಖ ಪಕ್ಷಗಳು ಹಲವಾರು ಆಮಿಷ, ಘೋಷಣೆ, ಭರವಸೆಗಳೊಂದಿಗೆ ಪ್ರಣಾಳಿಕೆ ಬಿಡುಗಡೆ ಮಾಡಿವೆ. ಒಂದು ವೇಳೆ ತಮ್ಮ ಪಕ್ಷ ಗೆದ್ದರೆ ಮತಹಾಕಿದ ಪ್ರಭುಗಳಿಗೆ ಏನೇನು ನೀಡಲಿವೆ ಎಂಬುದರ ಅಸ್ಪಷ್ಟ ನೋಟ ಈ ಪ್ರಣಾಳಿಕೆಯಲ್ಲಿ ಸಿಗುತ್ತದೆ. ಮೂಲಭೂತ ಸೌಕರ್ಯ, ಶಿಕ್ಷಣ, ಕೃಷಿ, ಆರೋಗ್ಯ, ಆರ್ಥಿಕತೆ ಮುಂತಾದ ಕ್ಷೇತ್ರಗಳಲ್ಲಿ ಏನೇನು ಅನುಕೂಲತೆ ಮಾಡಲಿದ್ದೇವೆ ಎಂಬುದನ್ನು ಹಲವಾರು ಪಕ್ಷಗಳು ವಿವರಿಸಿವೆ. ವಿವಿಧ ಪಕ್ಷಗಳ ಪ್ರಣಾಳಿಕೆಯ ತುಲನಾತ್ಮಕ ಅಧ್ಯಯನ ಇಲ್ಲಿದೆ. ಪಕ್ಷ ಮತ್ತು ಕ್ಷೇತ್ರಗಳನ್ನು ಆಯ್ಕೆ ಮಾಡಿ, ಯಾವ ಪಕ್ಷದ ಭರವಸೆಗಳು ಕಾಳಾಗಿವೆಯಾ, ಜೊಳ್ಳಾಗಿದೆಯಾ ನೀವೇ ನಿರ್ಧರಿಸಿ.

ಬಿ ಜೆ ಪಿ
ಐ ಎನ್ ಸಿ
--3ನೇ ಪಕ್ಷ ಆಯ್ಕೆ ಮಾಡಿ--
ಶಿಕ್ಷಣ
ಶಿಕ್ಷಣ
ಬಿ ಜೆ ಪಿ
ಶಿಕ್ಷಣ:
  • ಕಲಿಕೆಯಲ್ಲಿ ಪ್ರಗತಿ ಸಾಧಿಸಲು ಶಿಕ್ಷಕರ ಸಾಮರ್ಥ್ಯ ಹೆಚ್ಚಿಸಲು ಶಿಕ್ಷಕರಿಗಾಗಿ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಇದಕ್ಕಾಗಿ ರಾಷ್ಟ್ರೀಯ ಶಿಕ್ಷಕರ ತರಬೇತಿ ಸಂಸ್ಥೆಯನ್ನು ಸ್ಥಾಪಿಸಲಾಗುವುದು. ನಮ್ಮ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಈ ಸಂಸ್ಥೆಗಳು ನಾಲ್ಕು ವರ್ಷಗಳ ಇಂಟಿಗ್ರೇಟೆಡ್ ಕೋರ್ಸ್ ಆರಂಭಿಸಲಿವೆ. ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಶಾಲೆಗಳಲ್ಲಿ ತಂತ್ರಜ್ಞಾನವನ್ನು ಅಳವಡಿಸಲಿದ್ದೇವೆ. ನಮ್ಮ ಶಾಲಾ ಮಕ್ಕಳಿಗೆ ಸ್ಮಾರ್ಟ್ ತರಗತಿಗಳು ಸಿಗುವಂತೆ ನೋಡಿಕೊಳ್ಳಲಿದ್ದೇವೆ. ಮುಂದಿನ ವರ್ಷಗಳಲ್ಲಿ 200 ಕೇಂದ್ರೀಯ ವಿದ್ಯಾಲಯ ಮತ್ತು ನವೋದಯ ವಿದ್ಯಾಲಯಗಳನ್ನು ತೆರೆಯಲಿದ್ದೇವೆ. 2024ರೊಳಗಡೆ 50 ಹೊಸ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಲಿದ್ದೇವೆ.
ಐ ಎನ್ ಸಿ
ಶಿಕ್ಷಣ:
  • ಮುಂದಿನ 5 ವರ್ಷಗಳಲ್ಲಿ, 2012-24ರೊಳಗೆ ಶಿಕ್ಷಣ ಕ್ಷೇತ್ರಕ್ಕೆ ಅನುದಾನವನ್ನು ಜಿಡಿಪಿಯ ಶೇ.6ರಷ್ಟು ಹೆಚ್ಚಿಸುವುದಾಗಿ ಕಾಂಗ್ರೆಸ್ ವಾಗ್ದಾನ ನೀಡಿದೆ. 1ರಿಂದ 12ನೇ ತರಗತಿಯವರೆಗೆ ಪಬ್ಲಿಕ್ ಶಾಲೆಗಳಲ್ಲಿ ಶಿಕ್ಷಣ ಕಡ್ಡಾಯ ಮತ್ತು ಉಚಿತವಾಗಿ ನೀಡಲಾಗುವುದು. ಕೇಂದ್ರೀಯ ವಿದ್ಯಾಲಯ ಮತ್ತು ನವೋದಯ ವಿದ್ಯಾಲಯಗಳನ್ನು ಹೆಚ್ಚಿಸಲಾಗುವುದು. ವೈದ್ಯಕೀಯ, ಇಂಜಿನಿಯರಿಂಗ್, ವಾಣಿಜ್ಯ, ಮ್ಯಾನೇಜ್ಮೆಂಟ್ ಮತ್ತು ವಿಜ್ಞಾನ ಕ್ಷೇತ್ರಗಳಿಗಾಗಿ ಉನ್ನತ ಕಲಿಕೆಗಾಗಿ ಹೆಚ್ಚಿನ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲಾಗುವುದು. ಕಾಲೇಜುಗಳಲ್ಲಿ ಮತ್ತು ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿ ಹಕ್ಕು ಕಾಯ್ದೆಯನ್ನು ಜಾರಿಗೆ ತರಲಾಗುವುದು.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X