ರಾಶಿಯಷ್ಟೇ ಅಲ್ಲ, ದಿಕ್ಕು ಕೂಡಾ ಮುಖ್ಯ: ರಾಶಿಗನುಗುಣವಾಗಿ ನಿಮ್ಮ ಅದೃಷ್ಟ ದಿಕ್ಕು ಯಾವುದು ಗೊತ್ತಾ?
ವಾಸ್ತು ಶಾಸ್ತ್ರ ಎಂದರೆ ಪ್ರಾಚೀನ ಭಾರತೀಯ ವಾಸ್ತುಶಿಲ್ಪ ವಿಜ್ಞಾನ.ಜ್ಯೋತಿಷ್ಯ ಶಾಸ್ತ್ರ ನಮ್ಮ ಜೀವನದಲ್ಲಿ ಎಷ್ಟು ಮುಖ್ಯ ಪಾತ್ರ ವಹಿಸುತ್ತದೆಯೋ ವಾಸ್ತುಶಾಸ್ತ್ರ ಕೂಡಾ ಅಷ್ಟೇ ಪ್ರಾಮುಖ್ಯತೆಯನ್ನು ಹೊಂದಿದೆ. ಜೋತಿಷ್ಯದ ಪ್ರಕಾರ ದ್ವಾದಶ ರಾಶಿಗಳು ನಮ್ಮ ಭವಿಷ್ಯದ ಮೇಲೆ ಪರಿಣಾಮ ಬೀರುತ್ತವೆ.ಜೋತಿಷ್ಯದ ರಾಶಿಯನ್ನು ವಾಸ್ತು ಶಾಸ್ತ್ರದ ಜೊತೆಗೆ ಸೇರಿಸಿದಾಗ ಬದುಕನ್ನು ಯಶಸ್ಸಿನ ದಿಕ್ಕಿನತ್ತ ಸಾಗಿಸಲು ಮತ್ತಷ್ಟು ಸಹಾಯವಾಗಬಹುದು. ಹೌದು, ವಾಸ್ತುಶಾಸ್ತ್ರದ ಪ್ರಕಾರ ರಾಶಿಗನುಗುಣವಾಗಿ ದಿಕ್ಕನ್ನು ನಿರ್ಧರಿಸಲಾಗಿದೆ.ಇದರ ಪ್ರಕಾರ ಆಯಾ ರಾಶಿಗಳು ತಮಗೆ ಸಂಬಂಧಪಟ್ಟ ದಿಕ್ಕಿಗೆ ಪ್ರಾಧಾನ್ಯತೆ ನೀಡಿದರೆ ಯಶಸ್ಸಿನ ಹಾದಿ ಬಲು ಸುಲಭ ಎನ್ನುತ್ತದೆ ವಾಸ್ತು.
ಹಾಗಿದ್ದರೆ ಯಾವ ರಾಶಿಯವಾರಿಗೆ ಯಾವ ದಿಕ್ಕು ಅದೃಷ್ಟ?:
ಮೇಷ ರಾಶಿ:
ಮೇಷ ರಾಶಿಯು ಪೂರ್ವ ದಿಕ್ಕಿನೊಂದಿಗೆ ಸಂಬಂಧಿಸಿದೆ. ಪೂರ್ವ ಅಂದರೆ ಸೂರ್ಯ ಉದಯಿಸುವ ದಿಕ್ಕು.ಇದು ಹೊಸ ಆರಂಭ, ಹೊಸ ಚೈತನ್ಯ ಮತ್ತು ಶಕ್ತಿಯ ಸಂಕೇತ. ಪ್ರೇರಣೆಯ ಶಕ್ತಿ ಕೇಂದ್ರವನ್ನು ರಚಿಸಲು, ಮೇಷ ರಾಶಿಯವರು ತಮ್ಮ ಕೆಲಸದ ಸ್ಥಳ ಅಥವಾ ವೈಯಕ್ತಿಕ ಜಿಮ್ ಅನ್ನು ಪೂರ್ವ ದಿಕ್ಕಿನಲ್ಲಿಯೆ ಇರಿಸುವುದು ಸೂಕ್ತ. ಈ ಮೂಲಕ ಬೆಳಗಿನ ಎನರ್ಜಿಯನ್ನು ಬಳಸಿಕೊಂಡು ಸಾಹಸಮಯ ಮನೋಭಾವ ಮತ್ತು ಮಹತ್ವಾಕಾಂಕ್ಷೆಯ ಯೋಜನೆಗಳತ್ತ ಹೆಜ್ಜೆ ಹಾಕಬಹುದು.

ವೃಷಭ ರಾಶಿ:
ವೃಷಭ ರಾಶಿ ಭೂಮಿಯ ಸಂಕೇತ.ಇವರು ಅಭಿವೃದ್ಧಿಯಾಗುವುದು ನೈಋತ್ಯ ದಿಕ್ಕಿನಿಂದಲೇ.ಈ ದಿಕ್ಕು ಸ್ಥಿರತೆ ಮತ್ತು ಸೌಕರ್ಯವನ್ನು ಹೆಚ್ಚಿಸುತ್ತದೆ. ತಮ್ಮ ವೈಯಕ್ತಿಕ ಬದುಕನ್ನು ಅತಿಯಾಗಿ ಪ್ರೀತಿಸುವ ಮತ್ತು ಅದಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುವ ಗುಣವನ್ನು ಈ ರಾಶಿಯವರು ಹೊಂದಿರುತ್ತಾರೆ. ವೃಷಭ ರಾಶಿಯವರು ತಮ್ಮ ಮಲಗುವ ಕೋಣೆಯನ್ನು ಈ ದಿಕ್ಕಿನಲ್ಲಿ ನಿರ್ಮಾಣ ಮಾಡುವುದರಿಂದ ಹೆಚ್ಚಿನ ಪ್ರಯೋಜನವಾಗುವುದು.ಇದು ವಿಶ್ರಾಂತಿ ಮತ್ತು ಐಷಾರಾಮಿ ಜೀವನಕ್ಕೆ ದಾರಿ ಮಾಡಿಕೊಡುತ್ತದೆ.
ಮಿಥುನ ರಾಶಿ:
ಮಿಥುನ ರಾಶಿಯವರ ಬಲವೇ ಅವರಿಗೆ ಸಂಬಂಧಿಸಿದ ದಿಕ್ಕು. ಮಿಥುನ ರಾಶಿಯವರ ಅದೃಷ್ಟ ದಿಕ್ಕು ಎಂದರೆ ಉತ್ತರ. ಇವರು ಉತ್ತರ ದಿಕ್ಕಿಗೆ ಮುಖ ಮಾಡಿ ಕುಳಿತು ಕೆಲಸ ಮಾಡುವ ಮೂಲಕ ಇತರರೊಂದಿಗೆ ಸಂಪರ್ಕ ಸಾಧಿಸುವ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬಹುದು. ಮನೆಯಲ್ಲಿರುವ ಕಚೇರಿಯಾಗಿರಲಿ ಅಥವಾ ರೀಡಿಂಗ್ ಕಾರ್ನರ್ ಆಗಲಿ ಈ ದಿಕ್ಕು ಇವರಿಗೆ ವಿಶೇಷ ಶಕ್ತಿಯನ್ನು ನೀಡುತ್ತದೆ.
ಕರ್ಕಾಟಕ ರಾಶಿ:
ಕರ್ಕಾಟಕ ರಾಶಿಯವರಿಗೆ ಅದೃಷ್ಟದ ದಿಕ್ಕು ಎಂದರೆ ವಾಯುವ್ಯ ದಿಕ್ಕು. ಈ ದಿಕ್ಕು ಭಾವನಾತ್ಮಕ ಸಂಪರ್ಕಗಳನ್ನು ಬೆಳೆಸುತ್ತದೆ ಮತ್ತು ಕುಟುಂಬ ಬಾಂಧವ್ಯವನ್ನುಗಟ್ಟಿಯಾಗಿಸುತ್ತದೆ. ಇವರು ವಾಸಿಸುವ ಮನೆಯಲ್ಲಿ ಲಿವಿಂಗ್ ರೂಮ್ ವಾಯುವ್ಯ ದಿಕ್ಕಿನಲ್ಲಿದ್ದರೆ ಒಳಿತು. ಕರ್ಕಾಟಕ ರಾಶಿಯವರು ಈ ದಿಕ್ಕಿನಲ್ಲಿ ತಮ್ಮ ಕುಟುಂಬದ ಫೋಟೋಗಳು, ಸ್ನೇಹಶೀಲ ಆಸನಗಳನ್ನು ಇರಿಸುವ ಮೂಲಕ ತಮ್ಮ ಅದೃಷ್ಟವನ್ನು ಮತ್ತಷ್ಟು ಹೆಚ್ಚಿಸಬಹುದು.
ಸಿಂಹ ರಾಶಿ:
ಸಿಂಹ ರಾಶಿಯವರ ಅದೃಷ್ಟ ಬೆಳಗುವ ದಿಕ್ಕು ದಕ್ಷಿಣ. ಈ ದಿಕ್ಕು ಸಿಂಹ ರಾಶಿಯವರಿಗೆ ಗೌರವ ಮತ್ತು ಖ್ಯಾತಿಯನ್ನು ತಂದುಕೊಡುತ್ತದೆ. ಇವರ ಕೆಲಸ ಮಾಡುವ ಸ್ಥಳ ಈ ದಿಕ್ಕಿನಲ್ಲಿದ್ದರೆ ಒಳ್ಳೆಯದು. ಈ ದಿಕ್ಕಿನ ಮೂಲಕ ಸಿಂಹ ರಾಶಿಯವರ ಆತ್ಮವಿಶ್ವಾಸ ಮತ್ತು ಸೃಜನಶೀಲತೆ ಬೆಳೆಯುತ್ತಲೇ ಹೋಗುವುದು. ಈ ದಿಕ್ಕಿನ ಕಾರಣದಿಂದಲೇ ಸಿಂಹ ರಾಶಿಯವರು ನಕ್ಷತ್ರಗಳಂತೆ ಮಿಂಚಬಹುದು.
ಕನ್ಯಾರಾಶಿ:
ಕನ್ಯಾರಾಶಿಯವರಿಗೆ ಸ್ಪಷ್ಟತೆ ಮತ್ತು ಆರೋಗ್ಯಕ್ಕೆ ಹೆಸರುವಾಸಿಯಾದ ಪೂರ್ವ/ಈಶಾನ್ಯ ದಿಕ್ಕು ಹೊಂದಿಕೆಯಾಗುತ್ತದೆ. ಈ ದಿಕ್ಕು ಕಚೇರಿ ಅಥವಾ ಪ್ರಶಾಂತ ಧ್ಯಾನ ಸ್ಥಳಕ್ಕೆ ಹೇಳಿ ಮಾಡಿಸಿದಂತೆ ಇರುತ್ತದೆ. ಈ ದಿಕ್ಕು ಕನ್ಯಾ ರಾಶಿಯವರು ತಮ್ಮ ಕೆಲಸ ಕಾರ್ಯಗಳ ಮೇಲೆ ನಿಖರತೆಯೊಂದಿಗೆ ಗಮನಹರಿಸಲು ಅನುವು ಮಾಡಿಕೊಡುತ್ತದೆ.ಮನೆಯಾಗಲಿ ಕಚೇರಿಯಾಗಲಿ ಇವರು ಈ ದಿಕ್ಕಿನಲ್ಲಿ ನೈಸರ್ಗಿಕ ಬೆಳಕು ಒಳಬರುವಂತೆ ನೋಡಿಕೊಳ್ಳಬೇಕು.
ತುಲಾ ರಾಶಿ:
ತುಲಾ ರಾಶಿಯವರು ಸಮತೋಲನ ಮತ್ತು ಸೌಂದರ್ಯಕ್ಕೆ ಹೆಸರುವಾಸಿಯಾದ ಪಶ್ಚಿಮ ದಿಕ್ಕಿನ ಮೂಲಕವೇ ಅಭಿವೃದ್ಧಿ ಹೊಂದುವುದು. ಈ ದಿಕ್ಕನ್ನು ವಿಶೇಷ ರೀತಿಯಲ್ಲಿ ವಿನ್ಯಾಸಗೊಳಿಸುವ ಮೂಲಕ ತುಲಾ ರಾಶಿಯವರು ಅಭಿವೃದ್ಧಿ ಹೊಂದುವುದು ಸಾಧ್ಯವಾಗುತ್ತದೆ. ಅವರು ಪ್ರಶಾಂತತೆ ಮತ್ತು ಸಮತೋಲನವನ್ನು ಪ್ರೇರೇಪಿಸುವ ಕಲೆ ಮತ್ತು ಅಲಂಕಾರದತ್ತ ಹೆಚ್ಚು ಒಲವು ತೋರಿಸುವುದು ಸೂಕ್ತ.
ವೃಶ್ಚಿಕ ರಾಶಿ:
ವೃಶ್ಚಿಕ ರಾಶಿಯವರು ಜೀವನದಲ್ಲಿ ಅಭಿವೃದ್ಧಿ ಹೊಂದಲು ನೈಋತ್ಯ ದಿಕ್ಕನ್ನು ಆಯ್ಕೆ ಮಾಡಿಕೊಳ್ಳಬೇಕು. ಧನು ರಾಶಿಯವರು ಉತ್ತರ/ಈಶಾನ್ಯ ದಿಕ್ಕಿನಲ್ಲಿ ಅಭಿವೃದ್ಧಿ ಹೊಂದುತ್ತಾರೆ. ಮಕರ ರಾಶಿಯವರಿಗೆ ಆಗ್ನೇಯ ದಿಕ್ಕು ಅದೃಷ್ಟ ತಂದುಕೊಡುತ್ತದೆ.ಈ ದಿಕ್ಕಿನ ಮೂಲಕವೇ ಇವರು ಯಶಸ್ಸು ಕಂಡುಕೊಳ್ಳುತ್ತಾರೆ.
ಕುಂಭ ರಾಶಿ:
ಕುಂಭ ರಾಶಿಯವರಿಗೆ ವಾಯುವ್ಯ ಅದೃಷ್ಟ ಬೆಳಗುವ ದಿಕ್ಕು.ಅವರ ಪ್ರತಿ ಕೆಲಸ ಈ ದಿಕ್ಕಿನ ಮೂಲಕ ಆರಂಭವಾದರೆ ಎಲ್ಲವೂ ಸುಗಮವಾಗಿ ನಡೆಯುವುದು. ಇನ್ನು ಮೀನ ರಾಶಿಯವರಿಗೆ ಸರಿ ಹೊಂದುವ ದಿಕ್ಕು ಅಂದರೆ ಪೂರ್ವ.












Click it and Unblock the Notifications