Narendra Modi Prediction: ಬ್ರಹ್ಮಾಂಡ ಗುರೂಜಿ ಹೇಳಿದ ಶಾಕಿಂಗ್ ರಾಜಕೀಯ ಭವಿಷ್ಯ- ಮೋದಿಗೆ ಗೆಲುವು ಖಚಿತ ಆದರೆ...
ಲೋಕಸಭಾ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಮುಂದುವರೆದಿದೆ. ಸೋಲು ಗೆಲುವಿನ ಲೆಕ್ಕಾಚಾರಗಳಿಗೆ ಒಂದು ಚಿತ್ರಣ ಸಿಗಲು ಆರಂಭವಾಗಿದೆ. ಈ ನಡುವೆ ಬ್ರಹ್ಮಾಂಡ ಗುರೂಜಿ ಅವರು ರಾಜಕೀಯ ಭವಿಷ್ಯವನ್ನು ನುಡಿದಿದ್ದಾರೆ.
ಮುಂಬರುವ ಚುನಾವಣೆಯಲ್ಲಿ ನರೇಂದ್ರ ಮೋದಿ ಗೆದ್ದರೂ ರಾಜೀನಾಮೆ ಕೊಡ್ತಾರೆ, ಯಾಕೆಂದರೆ ಅವರಿಗೆ ಗಂಡಾಂತರ ಇದೆ ಎಂದು ಬ್ರಹ್ಮಾಂಡ ಗುರೂಜಿ ಭವಿಷ್ಯ ನುಡಿದಿದ್ದಾರೆ. ಹಾಗಾದರೆ ಲೋಕಸಭಾ ಚುನಾವಣೆ ಫಲಿತಾಂಶದ ಈ ವೇಳೆ ಬ್ರಹ್ಮಾಂಡ ಗುರೂಜಿ ನುಡಿದ ರಾಜಕೀಯ ಭವಿಷ್ಯವೇನು?

ಒನ್‌ಇಂಡಿಯಾ ಸಂದರ್ಶನದಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಾಗುವ ಬೆಳವಣಿಗೆಗಳ ಬಗ್ಗೆ ಸವಿಸ್ತಾರವಾಗಿ ಮಾಹಿತಿ ಹಂಚಿಕೊಂಡಿದ್ದಾರೆ. ಹಾಗಾದರೆ ಯಾವೆಲ್ಲಾ ವಿಚಾರಗಳನ್ನು ಬ್ರಹ್ಮಾಂಡ ಗುರೂಜಿ ಪ್ರಸ್ತಾಪಿಸಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೋದಿಗೆ ಜಯ ಸಿಗುವುದೇ? ಸಿಕ್ಕರೂ ಅವರಿಗಿರುವ ಗಂಡಾಂತರದಿಂದಾಗಿ ಆಗುವ ಸಮಸ್ಯೆಗಳೇನು? ಇವೆಲ್ಲಾದರ ಬಗ್ಗೆ ಬ್ರಹ್ಮಾಂಡ ಗುರೂಜಿ ಹೇಳಿದ್ದೇನು ಎಂದು ನೋಡೋಣ.
*ನರೇಂದ್ರ ಮೋದಿ ಗೆಲ್ತಾರಾ?
ಹನ್ನೆರೆಡು ವರ್ಷ ಮಾತ್ರ ಮೋದಿ ಅವರಿಗೆ ಶುಭ ಯೋಗವಿದೆ. ಹೀಗಾಗಿ ನರೇಂದ್ರ ಮೋದಿ ಮುಂಬರುವ ಎಲೆಕ್ಷನ್ ಅಲ್ಲಿ ಗೆಲ್ತಾರೆ. ಮೋದಿ ಕೆಳಗಡೆ ಒಂದಿಷ್ಟು ಜನ ಲಂಚ ತಿನ್ನದ ಜನ ಇದ್ದರು. ಕ್ಲೀನ್ ಹ್ಯಾಂಡ್‌ಗಳು ಇದ್ದವು. ಆದರೆ ಇತ್ತೀಚೆಗೆ ಅವರೇ ಬೇಕು ಅಂತ ಕರಪ್ಷನ್ ಮಾಡಿಕೊಂಡು ಬರುತ್ತಿದ್ದಾರೆ.
ಯಾಕೆ ಹೀಗೆ ಮಾಡ್ತಾಯಿದ್ದಾರೆ ಅಂದರೆ- ಒಬ್ಬ ರಾಜನನ್ನು ಹಾಳಮಾಡಬೇಕು ಅಂತ ಹಲವಾರು ಜನ ಕಾಯುತ್ತಿರುತ್ತಾರೆ. ಅದು ವಿರೋಧ ಪಕ್ಷದವರೇ ಆಗಬೇಕು ಅಂತಿಲ್ಲ. ರಾಜನನ್ನು ಒಬ್ಬ ಮಂತ್ರಿ, ಸೈನಿಕ ಕೂಡ ಹಾಳು ಮಾಡಬಹುದು. ಇವರು ಮಾಡೋ ಕೆಟ್ಟ ಕೆಲಸಗಳಿಂದ ಮೋದಿಗೆ ಕೆಟ್ಟ ಹೆಸರು ಬರಬಹುದು. ಇಂಥಹ ಬಹಳಷ್ಟು ಗಂಡಾಂತರಗಳು ಮೋದಿಗೆ ಇವೆ ಎಂದು ಬ್ರಹ್ಮಾಂಡ್ ಹುರೂಜಿ ಭವಿಷ್ಯ ನುಡಿದಿದ್ದಾರೆ. ಉದಾ: ಕೆಟ್ಟುಹೋದ ಹಣ್ಣುಗಳು ತಮ್ಮ ನಡುವೆ ಇರುವ ಚೆನ್ನಾಗಿರುವ ಹಣ್ಣುಗಳನ್ನು ಕೆಡಿಸಿಬಿಡುತ್ತವೆ. ಹೀಗೆ ಮೋದಿ ಕೆಳಗೆ ಕೆಲ ಜನ ಲಂಚ ತಿನ್ನದೇ ಇರುವವರು ಇದ್ದರು. ಆದರೆ ಅವರು ಇತ್ತೀಚಿಗೆ ಹಾಳು ಮಾಡ್ತಾಯಿದ್ದಾರೆ ಎಂದು ಬ್ರಹ್ಮಾಂಡ್ ಗುರೂಜಿ ಹೇಳಿದರು.

*ಮೋದಿ ಕಾಂಗ್ರೆಸ್ಸಿಗೆ ಸೇರಿದರೂ ಮೋದಿನೇ ಗೆಲ್ಲೋದು..!
ಇನ್ನೂ ಒಳ್ಳೆ ರಾಜರು ಇದ್ದಾಗ ಅವರನ್ನು ಹಾಳು ಮಾಡುವ, ಅವರ ಹೆಸರು ಹಾಳು ಮಾಡುವ ಮಂತ್ರಿಗಳು ಇರುತ್ತಾರೆ. ಹಾಗಾಗಿ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿನೇ ಗೆಲ್ಲುತ್ತಾರೆ. ಎಲ್ಲಾ ಕಾಂಗ್ರೆಸ್ ನವರು ನರೇಂದ್ರ ಮೋದಿ ಅವರ ಬಳಿಯೇ ಬರುತ್ತಾರೆ. ಅಂದರೆ ಮೇನ್ ಅಟ್ರ್ಯಾಕ್ಷನ್ ಮೋದಿ ಆಗಿರುತ್ತಾರೆ... ಹೊರಗಡೆಯಿಂದ ಸಪೋರ್ಟ್ ಮಾಡುವವರು ಇದ್ದಾರೆ. ಉದಾಹರಣೆ ಹೆಚ್‌ಡಿ ಕುಮಾರಸ್ವಾಮಿ ಅವರು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಸಪೋರ್ಟ್ ಮಾಡಿದ್ದಾರೆ.
ಹೀಗಾಗಿ ಕಾಂಗ್ರೆಸ್‌ನವರು ದೆಹಲಿಯಲ್ಲಿ ಸಾವಿರಾರು ಜನ ಸೇರಿಕೊಳ್ಳಲಿ, ನರೇಂದ್ರ ಮೋದಿ ಅವರನ್ನ ಏನು ಮಾಡ್ಲಿಕ್ ಆಗಲ್ಲ. ಯಾಕೆಂದರೆ ಅವರ ಯೋಗ ಇನ್ನೂ ಚೆನ್ನಾಗಿದೆ. ಹೀಗಾಗಿ ಅವರು ಲೋಕಸಭಾ ಚುನಾವಣೆಯಲ್ಲಿ ಗೆಲ್ತಾರೆ ಎಂದು ಗುರೂಜಿ ಭವಿಷ್ಯ ನುಡಿದಿದ್ದಾರೆ.
*ಮೋದಿ ಗೆದ್ದರೂ ರಾಜೀನಾಮೆ ಕೊಡ್ತಾರೆ..!
ಆದರೆ ಮೋದಿ ಅವರು ಗೆದ್ದರೂ ಸಹ ಅವರಿಗೆ ವೈರಾಗ್ಯ ಬಂದು ತಾವಾಗೇ ಈ ಪಟ್ಟವನ್ನು ಬಿಟ್ಟು ಕೊಡ್ತಾರೆ. ಯಾಕೆಂದರೆ ಹನ್ನೆರಡು ವರ್ಷ ಮಾತ್ರ ಮೋದಿಗೆ ಶುಭ ಯೋಗವಿದೆ ಎಂದು ಭವಿಷ್ಯ ಹೇಳುತ್ತದೆ.
ಒಂದು ವೇಳೆ ಅವರು ವೈರಾಗ್ಯ ಬಂದು ರಾಜೀನಾಮೆ ನೀಡದೇ ಇದ್ದಲ್ಲಿ ಅವರಿಗೆ ಗಂಡಾಂತರವಿದೆ. ಅಂದರೆ ಇಂದ್ರಾಗಾಂಧಿ ತರ ಅವರನ್ನು ಏನಾದರೂ ಮಾಡಿ ಬಿಡಬಹುದು. ರಾಜೀವ್ ಗಾಂಧಿ ಥರ ಮೋದಿ ಅವರಿಗೆ ಏನಾದರೂ ಮಾಡಬಹುದು. ಅವರ ಜನರೇ ಅವರಿಗೆ ಕುತಂತ್ರದಿಂದ ಏನಾದ್ರು ಮಾಡಬಹುದು. ಇದೆಲ್ಲಾ ಗಂಡಾಂತರಗಳು ಇವೆ. ಹೀಗಾಗಿ ಮೋದಿ ಅವರನ್ನು ಕಾಪಾಡಿಕೊಳ್ಳಬೇಕಾಗಿದ್ದು ನಮ್ಮ ಧರ್ಮ ಎಂದು ಗುರೂಜಿ ಮೋದಿ ಪರ ಬ್ಯಾಟಿಂಗ್ ಮಾಡಿದರು.
ಒಟ್ಟಿನಲ್ಲಿ ನರೇಂದ್ರ ಮೋದಿ ಅವರ ರಾಜಕೀಯ ಭವಿಷ್ಯ ಏನೇ ಇರಲಿ, ಇಂದಿನ ಮತ ಎಣಿಕೆ ಬಳಿಕವಷ್ಟೇ ಫಲಿತಾಂಶ ಹೊರಬೀಳಲಿದೆ. ಅಲ್ಲಿವರೆಗೂ ನಾವೆಲ್ಲಾ ಕಾದು ನೋಡಲೇಬೇಕು.












Click it and Unblock the Notifications