ಅಕ್ಟೋಬರ್ 18, ಬುಧವಾರದ ದಿನ ಭವಿಷ್ಯ

By: ಪಂಡಿತ್ ವಿಠ್ಠಲ್ ಭಟ್
Subscribe to Oneindia Kannada
Jupiter transition to Libra ( Tula Rashi ) on Sep 12th, Impact on 12 zodiac signs | Watch Video

ನಮ್ಮ ಪಾಲಿಗೆ ದಿನ ಶುರುವಾಗೋದು ಮೊಬೈಲ್ ನಲ್ಲಿ ಬಂದ ವಾಟ್ಸ್ ಆಪ್ ಮೆಸೇಜುಗಳನ್ನು ನೋಡುವುದರ ಮೂಲಕ ಅನ್ನೋರು ಇರುವ ಹಾಗೆಯೇ ದಿನ ಭವಿಷ್ಯ ತಿಳಿದುಕೊಂಡ ಮೇಲೆ ಮುಂದಿನ ಕೆಲಸ ಅಂತ ಹೇಳುವವರೂ ಇದ್ದಾರೆ. ಯಾವತ್ತೂ ಗಾಡಿ ಓಡಿಸ್ತಾ ಬಿದ್ದಿರಲಿಲ್ಲ, ಇವತ್ತು ಬಿದ್ದುಬಿಟ್ಟೆ. ಅದೇನು ಗ್ರಹಚಾರವೋ ಎಂದು ಹಳಿಯುವುದು ಬೇಡ.

ಅದ್ಯಾವ ಸಮಯದಲ್ಲಿ ಮನೆ ಬಿಟ್ಟೆನೋ ಎಲ್ಲ ಕೆಲಸ ಸಲೀಸಾಗಿ ಆಯಿತು ಎಂದು ಪ್ರತಿ ದಿನವೂ ನೀವು ಖುಷಿ ಪಡುವಂತಾಗಬೇಕು. ಆದ್ದರಿಂದಲೇ ಒನ್ಇಂಡಿಯಾ ಕನ್ನಡದಲ್ಲಿ ಬರುವ ದಿನ ಭವಿಷ್ಯದ ಮೇಲೆ ಒಮ್ಮೆ ಕಣ್ಣಾಡಿಸಿ. ಹ್ಞಾಂ, ಜತೆಗೆ ರಾಹುಕಾಲ, ಗುಳಿಕ ಕಾಲ, ಯಮಕಂಟಕ ಕಾಲ ಯಾವುದು ಅಂತಲೂ ತಿಳಿದುಕೊಳ್ಳಿ.

ಜ್ಯೋತಿಷ್ಯ: ಗ್ರಹಗಳು ನಿಮ್ಮ ಜೀವನದಲ್ಲಿ ಒಳಿತು-ಕೆಡುಕು ಮಾಡೋದು ಹೇಗೆ?

ಮನೆ ಬಿಡುವಾಗ ಒಂದೈದು ನಿಮಿಷ ಮುಂಚಿತವಾಗಿ ಹೊರಡಬಹುದು ಅಥವಾ ಅಶುಭ ಕಾಲ ಮುಗಿದ ಒಂದೈದು ನಿಮಿಷದ ನಂತರ ಹೊರಡಲು ಯೋಚಿಸಬಹುದಲ್ಲವೆ? ಇವೆಲ್ಲ ಮೂಢನಂಬಿಕೆ ಕಣ್ರೀ, ಅದೆಲ್ಲ ಹೇಳೋಕೆ ಬರಬೇಡಿ ಅನ್ನುವವರಿಗೆ ನಮ್ಮ ಯಾವುದೇ ಒತ್ತಾಯ ಇಲ್ಲ. ಆದರೆ ಇವನ್ನೆಲ್ಲ ಅನುಸರಿಸಿದರೆ ಒಳಿತಾಗುತ್ತದೆ ಎಂದು ನಂಬುವವರಿಗಂತೂ ಇದರಿಂದ ಸಹಾಯ ಆಗೇ ಆಗುತ್ತದೆ ಎಂಬ ಬಲವಾದ ನಂಬಿಕೆ ನಮ್ಮದು.

ನಿಮ್ಮ ಅದೃಷ್ಟ ಸಂಖ್ಯೆ ತಿಳಿದುಕೊಳ್ಳುವುದು ಹೇಗೆ?

ಒಳ್ಳೆಯದು ಎಲ್ಲರಿಗೂ ಆಗಲಿ. ಸರ್ವೇ ಜನಾಃ ಸುಖಿನೋ ಭವಂತು ಎಂಬುದು ಭಾರತೀಯ ಪರಂಪರೆಯಲ್ಲಿನ ಆಶಯ. ಈ ದಿನದ ಪಂಚಾಂಗದ ಮುಖ್ಯ ವಿವರ, ನಿಮ್ಮ್ ಹಾಗೂ ನಿಮಗೆ ಬೇಕಾದವರ ದಿನದ ಭವಿಷ್ಯವನ್ನು ಓದಿಕೊಳ್ಳಿ.

ದಿನದ ಪಂಚಾಂಗ

ಹೇವಿಳಂಬಿ ನಾಮ ಸಂವತ್ಸರವರ್ಷವನ್ನು

ದಕ್ಷಿಣಾಯನ

ಶರದ್ ಋತು

ಆಶ್ವಯುಜ ಮಾಸ

ಕೃಷ್ಣ ಪಕ್ಷ

ಚತುರ್ದಶಿ

ಬುಧವಾರ

ಉತ್ತರ ನಕ್ಷತ್ರ {ಬೆಳಗ್ಗೆ ೦೬-೩೮ ತನಕ ನಂತರ ಹಸ್ತ}

ಐಂದ್ರ ಯೋಗ

ಭದ್ರೆ ಕರಣ

ರಾಹು ಕಾಲ:-12-08 ಇಂದ 01-37 ತನಕ

ಗುಳಿಕ ಕಾಲ :-10-39 ಇಂದ 12-08 ತನಕ

ಯಮ ಗಂಡ ಕಾಲ:- -07-41 ಇಂದ 09-10 ತನಕ

ಮೇಷ

ಮೇಷ

ಅದೇನೋ ಗೊತ್ತಿಲ್ಲ ಆದರೆ ಇವತ್ತು ಮಾತ್ರ ನೀವು ಅಂದವಾಗಿ ಕಾಣ ಬೇಕು ಎಂದು ಮನಸ್ಸು ಹೆಚ್ಚು ಆಸೆಪಡುತ್ತದೆ ಅದರಂತೆ ನೀವೂ ಸಹ ಆ ನಿಟ್ಟಿನಲ್ಲಿ ಹೆಚ್ಚಿನ ಖರ್ಚು ಹಾಗೂ ಸಮಯ ವಿನಿಯೋಗ ಮಾಡುವುದರಲ್ಲಿ ಸಂಶಯವಿಲ್ಲ ಆದರೆ ದಕ್ಷಿಣ ದಿಕ್ಕು ಬೇಡ

ಮೇಷ ವರ್ಷ ಭವಿಷ್ಯ : ಹರ್ಷದ ಸಮಯ ಅನುಭವಿಸಲು ಸಿದ್ಧರಾಗಿ

ವೃಷಭ

ವೃಷಭ

ಇಂದು ಒಂದು ವಿಧದಲ್ಲಿ ಒಳ್ಳೆಯ ದಿನ ನಿಮಗೆ ಎನ್ನಬಹುದು ಕಾರಣ ಸ್ನೇಹಿತರೋಡನೆ ಇದ್ದ ಮನಸ್ತಾಪಗಳು ಹಾಗೂ ಭಿನ್ನಾಭಿಪ್ರಾಯಗಳು ಮೂರನೇಯವನ ಪ್ರವೇಶದಿಂದ ಶಮನವಾಗುತ್ತದೆ. ಕೆಂಪು ಬಣ್ಣ ಹಾಗೂ ಪಶ್ಚಿಮ ದಿಕ್ಕು ಹೆಚ್ಚು ಬಳಸುವುದು ಬೇಡ

ವೃಷಭ ವರ್ಷಭವಿಷ್ಯ : ಪಲಾವ್ ಇಲ್ಲದಿದ್ದರೂ ಚಿತ್ರಾನ್ನಕ್ಕೆ ಕೊರತೆಯಿಲ್ಲ

ಮಿಥುನ

ಮಿಥುನ

ಕೆಲವರೊಂದಿಗೆ ನೀವು ಇಂದು ಜಗಳ ಆಡಬಹುದು ಆದುದರಿಂದ ಎನೇ ಆಗಲಿ ಮಾತಿನ ಮೇಲೆ ಇಂದು ಹಿಡಿತ ಇದ್ದರೆ ಒಳಿತು ಅನಿಸುತ್ತಿದೆ.ಶ್ರೀ ಗಣಪತಿಯ ದೇಗುಲ ನಿಮ್ಮ ಮನೆಯ ಹತ್ತಿರ ಇದ್ದರೆ ಇಂದು ಮೊದಲು ಅಲ್ಲಿಗೆ ಹೋಗಿ ನಂತರ ನಿಮ್ಮ ಕೆಲಸ ಮಾಡಿ

ಮಿಥುನ ವರ್ಷಭವಿಷ್ಯ: ಏರಿಳಿತವಿಲ್ಲದ ಸರಳರೇಖೆಯಂತೆ ಬದುಕು

ಕರ್ಕ

ಕರ್ಕ

ಹಿನ್ನೆಡೆಗಳು ಸರ್ವೆ ಸ್ವಾಭಾವಿಕ ಆದರೆ ಎಲ್ಲಾ ಸರಿಹೋಗುತ್ತದೆ ಒಂದು ದಿನ ನಾನೂ ಸಹ ಎತ್ತರಕ್ಕೆ ಬೆಳೆಯುತ್ತೇನೆ ಎಂಬ ಧೃಢ ವಿಶ್ವಾಸ ಮೂಡುತ್ತದೆ ಅಂಥಃ ಘಟನೆಗಳು ನೆಡೆಯುತ್ತದೆ. ತೀವ್ರ ಬೇಸರ ಆದಲ್ಲಿ ಈಶ್ವರನ ದೇಗುಲಕ್ಕೆ ಹೋಗಿ ಅಭಿಷೇಕ ಮಾಡಿಸಿ

ಕರ್ಕಾಟಕ ವರ್ಷ ಭವಿಷ್ಯ: ಪಟ್ಟ ಕಷ್ಟ ಮಾಯವಾಗಿ, ಸುಖ ನಿರೀಕ್ಷಿಸಿ

ಸಿಂಹ

ಸಿಂಹ

ಕಡ್ಡಾಯ ಮನಸಿನೊಂದಿಗೆ ತೀರ್ಮಾನ ಮಾಡಿಕೊಳ್ಳಿ ಇಂದು ಪ್ರಯಾಣಗಳು ಬೇಡ ಮಾಡುವುದಿಲ್ಲ ಎಂದು ಕಾರಣ ನಿಮಗೆ ಅಪಘಾತಗಳ ಸಾಧ್ಯತೆ ಇದೆ. ಸಾರ್ವಜನಿಕ ವಾಹನಗಳನ್ನು ಬಳಸುವುದು ಉತ್ತಮ.ಆಂಜನೇಯನ ದೇಗುಲಕ್ಕೆ ಹೋಗಿ ಪ್ರದಕ್ಷಿಣೆ ಮಾಡಿ

ಸಿಂಹ ವರ್ಷ ಭವಿಷ್ಯ: ವ್ಯವಹಾರದಲ್ಲಿ ಹುಷಾರಾದರೆ ಜೀವನ ಸೂಪರ್

ಕನ್ಯಾ

ಕನ್ಯಾ

ದಿನಾ ಇದೇ ಆಗೋಯಿತು ಅದಕ್ಕೆ ಇಂದು ಸಾಹಸಮಯ ಕೆಲಸಗಳನ್ನು ಮಾಡೋಣ ಅನಿಸುತ್ತದೆ ಆದರೆ ಇಂದು ಸೂಕ್ತ ಸಮಯವಲ್ಲ ಸಮಾಧಾನ ಮಾಡಿಕೊಳ್ಳಿ. ದುರ್ಗಾ ದೇಗುಲ ಹತ್ತಿರ ಇದ್ದರೆ ಒಮ್ಮೆ ಹೋಗಿ ಅಮ್ಮನವರಿಗೆ ಒಂದು ಕುಂಕುಮಾರ್ಚನೆ ಮಾಡಿಸಿ

ಕನ್ಯಾ ರಾಶಿ ವರ್ಷ ಭವಿಷ್ಯ: ಘಟ ಇದ್ದರಷ್ಟೇ ಮಠ, ಆರೋಗ್ಯ ಜೋಪಾನ

ತುಲಾ

ತುಲಾ

ಇಂದಿನ ನಿಮ್ಮ ಪರಿಸ್ಥಿತಿ ಕಂಡು ನಿಮಗೆ ನೆನೆಪಿನ ಶಕ್ತಿ ಕುಂಟಿತವಾಯಿತೇ ಎಂಬ ಅನುಮಾನ ಕಾಡುತ್ತದೆ ನಿಮಗೆ. ಕಾರಣ ಪ್ರಮುಖ ವಿಚಾರಗಳನ್ನು ಮರೆತು ಸಮಸ್ಯೆಗೆ ಸಿಲುಕುವ ಸಾಧ್ಯತೆಗಳು ಇವೆ. ಗುರು ರಾಘವೇಂದ್ರ ಸ್ವಾಮಿಗಳನ್ನು ಆಶ್ರಯಿಸಿ ಪೂಜಿಸಿ

ತುಲಾ ವರ್ಷ ಭವಿಷ್ಯ: ಸಿಕ್ಕಾಪಟ್ಟೆ ಪರೀಕ್ಷೆಗಳು ಮುಂದಿವೆ, ಸಾಹಸ ಬೇಡ

ವೃಶ್ಚಿಕ

ವೃಶ್ಚಿಕ

ನಿಮ್ಮ ಮನಸ್ಸನ್ನು ದೇವರು ಇಂದು ಪರೀಕ್ಷಿಸುತ್ತಾನೆ ಕಾರಣ ನಿಮ್ಮ ಬಳಿ ಹಣ ಕಡಿಮೆ ಇದ್ದರೂ ನಿಮ್ಮ ಪರಿಚಯ ಇರುವ ಬಡವರು ನಿಮ್ಮಲ್ಲಿ ಸಹಾಯ ಮಾಡುವಂತೆ ಕೋರಿ ಪ್ರಾರ್ಥನೆ ಮಾಡುತ್ತಾರೆ ಎನು ಮಾಡುತ್ತೀರಿ ಎನ್ನುವುದೇ ಪರೀಕ್ಷಾ ಫಲ ಎನ್ನಬಹುದು

ವೃಶ್ಚಿಕ ವರ್ಷ ಭವಿಷ್ಯ: ಕಂಡ ಕನಸುಗಳೆಲ್ಲ ಕೈಗೂಡಿ, ಸಂಭ್ರಮ

ಧನು

ಧನು

ವಿಚಿತ್ರ ಸ್ಥಿತಿಗೆ ನೀವು ಹಣ ಕಳೆದುಕೊಳ್ಳುವ ಸಾಧ್ಯತೆಗಳಿವೆ ಕಾರಣ ದುಡ್ಡು ಇನ್ನೇನು ಕೈ ಸೇರ ಬೇಕು ಅನ್ನುವಷ್ಟರಲ್ಲಿ ನಿಮ್ಮ ಸಿಟ್ಟು ಇಂದು ಅದನ್ನು ಹಾಳು ಮಾಡಬಹು. ಮಹಾ ವಿಷ್ಣು ದೇಗುಲದಲ್ಲಿ ಸ್ವಾಮಿಗೆ ತುಳಸಿಯಿಂದ ಅರ್ಚನೆ ಮಾಡಿಸಿ ಶುಭ ಆಗುತ್ತದೆ

ಧನು ವರ್ಷ ಭವಿಷ್ಯ: ಆಲಸ್ಯ ಅಡ್ಡವಾಗಲಿದೆ, ಅದೇ ಖೆಡ್ಡಾ ಆಗದಿರಲಿ

ಮಕರ

ಮಕರ

ಚಿಕ್ಕಪುಟ್ಟ ಮನರಂಜನೆಗಳು ನಿಮಗೆ ಇಂದು ಲಭ್ಯ ಇದೆ ಅಷ್ಟೇ ಅಲ್ಲ ಸಾಲಗಳನ್ನು ತೀರಿಸುತ್ತೀರ ಹಾಗಾಗಿ ಕೊಂಚ ನೆಮ್ಮದಿ ಲಭಿಸುತ್ತದೆ. ಇಲ್ಲ ಸರಿ ಇಲ್ಲ ಅನಿಸಿದರೆ ಸಮಾಧಾನ ಇಲ್ಲದಿರೆ ಸುಬ್ರಹ್ಮಣ್ಯ ಸ್ವಾಮಿಯ ಅಷ್ಟೋತ್ತರ ಹಾಗೂ ಸ್ತೋತ್ರಗಳನ್ನು ಪಠಿಸಿ

ಮಕರ ವರ್ಷ ಭವಿಷ್ಯ: ಸಮಸ್ಯೆಗಳೆಲ್ಲ ಸರಾಗವಾಗಿ ಸರಿದು, ಬದುಕು ಬೊಂಬಾಟ್

ಕುಂಭ

ಕುಂಭ

ಬಿಟ್ಟು ಹೋದವರ ನೆನಪು ಬಹಳ ಕಾಡುತ್ತದೆ ಸಂಗೀತದತ್ತ ಮನಸ್ಸು ವಾಲುತ್ತದೆ, ಸಂಗೀತವನ್ನೇ ಕೇಳುತ್ತಾ ಒಂಟಿಯಾಗಿ ಇರುವ ಅನಿಸುತ್ತದೆ. ಪೂರ್ವ ದಿಕ್ಕು ೯ ಸಂಖ್ಯೆ ಹಾಗೂ ಬಿಳಿಯ ಬಣ್ಣ ಇಂದು ನಿಮಗೆ ಲಾಭಕರ ಆಗಬಹುದು. ಸಾಧ್ಯ ಆದರೆ ಮೌನ ಮಾಡಿ

ಕುಂಭ ವರ್ಷ ಭವಿಷ್ಯ: ಸಣ್ಣ ಗಾಯವೇ ಘಾಸಿ ತಂದೀತು ಎಚ್ಚರ!

ಮೀನ

ಮೀನ

ಹೇಳಿಕೆ ಮಾತುಗಳಿಂದಾಗಿ ಕುಟುಂಬದಲ್ಲಿ ಸ್ವಲ್ಪ ಕಿರಿ ಕಿರಿ ಅನಿಸಬಹುದು. ನಿಮಗೆ ಎದುರುತ್ತರ ಬಂದು ಅದೂ ಸಹ ನಿಮಗೆ ಬೇಸರ ಮೂಡಿಸಬಹುದು. ಗುರು ಗ್ರಹದ ಅಷ್ಟೋತ್ತರ ಪಠಿಸಿ ಸ್ವಲ್ಪ ಕಡಾಲೇ ಕಾಳು ದಾನ ಮಾಡಿ. ಉತ್ತರ ದಿಕ್ಕು ಹೆಚ್ಚು ಬಳಸಿ

ಮೀನ ವರ್ಷಭವಿಷ್ಯ : ದೈವಾನುಗ್ರಹದಿಂದ ಬದುಕು ಸುಂದರ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Daily forecast for your zodiac signs. Get astrological predictions for the day, in Kannada Language by Well known Astrologer Pandit Vittal Bhat.
Please Wait while comments are loading...