KSRTC: ಎಸ್‌ಸಿ, ಎಸ್‌ಟಿ ಫಲಾನುಭವಿಗಳಿಗೆ ಸಿಹಿ ಸುದ್ದಿ: 1 ತಿಂಗಳ ಉಚಿತ ಡ್ರೈವಿಂಗ್ ತರಬೇತಿ, ನೋಂದಣಿ ಹೇಗೆ?


ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರದ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗದ ಫಲಾನುಭವಿಗಳಿಗೆ ಉಚಿತ ವಾಹನ ತರಬೇತಿ ನೀಡುವ ಜೊತೆಗೆ ಪರವಾನಿಗೆ ಸಹ ನೀಡಲು ನಿರ್ಧರಿಸಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ರಾಜ್ಯದ ನಾಲ್ಕು ವಾಹನ ತರಬೇತಿ ಕೇಂದ್ರಗಳಲ್ಲಿ ಊಟ, ವಸತಿ ಸಹಿತ ತರಬೇತಿ ನೀಡುವ ಕಾರ್ಯಕ್ರಮ ಇದಾಗಿದೆ. ಅರ್ಜಿ ಸಲ್ಲಿಕೆ, ಬೇಕಾಗುವ ದಾಖಲೆಗಳು, ಪ್ರಮುಖ ದಿನಾಂಕದ ಮಾಹಿತಿ ಮುಂದಿದೆ.

Advertisement

ಕರ್ನಾಟಕ ರಾಜ್ಯ ಸರ್ಕಾರದ ಎಸ್‌ಸಿಎಸ್ ಪಿ/ ಟಿಎಸ್‌ಪಿ ಯೋಜನೆಯಡಿ ನಿಗಮದ ಮಾಲೂರು, ಮಳವಳ್ಳಿ, ಹಾಸನ, ಚಿಕ್ಕಮಗಳೂರು ಹಾಗೂ ಹೊಳಲ್ಕೆರೆ ತರಬೇತಿ ಕೇಂದ್ರಗಳಲ್ಲಿ ಅರ್ಹರು ಲಘು ವಾಹನ (LMV) ಮತ್ತು ಭಾರಿ ವಾಹನ (HPV) ಈ ತರಬೇತಿ ಮತ್ತು ಪರವಾನಿಗೆಯನ್ನು ಉಚಿತವಾಗಿ ಪಡೆಯಬಹುದು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ವ್ಯವಸ್ಥಾಪಕ ನಿರ್ದೇಶಕ ಶಿವಕುಮಾರ್ ಕೆ.ಬಿ. ಅವರು ತಿಳಿಸಿದ್ದಾರೆ.

Advertisement

Certificates: ಕರ್ನಾಟಕದ ಜನರಿಗೆ ಗುಡ್‌ನ್ಯೂಸ್: ಇನ್ಮುಂದೆ ಮನೆ ಬಾಗಿಲಿಗೆ ಬರಲಿದೆ ಜಾತಿ, ನಿವಾಸಿ ಪ್ರಮಾಣಪತ್ರ!

ಅರ್ಹತೆ ಮತ್ತು ದಾಖಲಾತಿ ವಿವರ

* ತರಬೇತಿ ಅವಧಿ 30 ದಿನ
* HPV- ವಯೋಮಿತಿ 20ರಿಂದ 45
* LMV- ವಯೋಮಿತಿ 18 ರಿಂದ 45
* ಲಘು ವಾಹನ ಪರವಾನಿಗೆ ಪಡೆದು ಒಂದು ವರ್ಷ ಪೂರ್ಣಗೊಂಡಿರಬೇಕು
* ಜಾತಿ ಪ್ರಮಾಣ ಪತ್ರ
* ಆದಾಯ ಪ್ರಮಾಣ ಪತ್ರ
* ನಾಲ್ಕು ಭಾವಚಿತ್ರಗಳು

ಉಚಿತ ತರಬೇತಿ, ಪರವಾನಿಗೆ ವಿತರಣೆ

* ಉಚಿತ ವಸತಿ ಮತ್ತು ಊಟ ವ್ಯವಸ್ಥೆ
* ಒಂದು ತಿಂಗಳು ಡ್ರೈವಿಂಗ್ ತರಬೇತಿ
* ಕರ್ನಾಟಕ ರಾಜ್ಯ ಸಾರಿಗೆ ಇಲಾಖೆ (RTO) ಸಹಕಾರದಲ್ಲಿ ತರಬೇತಿ ಬಳಿಕ ಉಚಿತ ಪರವಾನಿಗೆ ವಿತರಣೆ.

Advertisement

ತರಬೇತಿಗೆ ನೋಂದಣಿ ಕಡ್ಡಾಯ

ಅರ್ಹ ಯುವಕ/ ಯುವತಿಯರು ತಮ್ಮ ಹತ್ತಿರದ ತರಬೇತಿ ಕೇಂದ್ರಗಳಲ್ಲಿ ನೇರವಾಗಿ ಅಥವಾ ksrtcjobs.karnataka.gov.in ನಲ್ಲಿ ಅರ್ಜಿ ಸಲ್ಲಿಸುವ ಮೂಲಕ ತರಬೇತಿಗೆ ಹೆಸರು ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವೆಂದು ತಿಳಿಸಲಾಗಿದೆ.

BMTC: ಪ್ರಯಾಣಿಕರಿಗೆ ಗುಡ್‌ನ್ಯೂಸ್, ಇಂದಿನಿಂದ ಹೊಸ ಮಾರ್ಗದಲ್ಲಿ ಬಸ್ ಸೇವೆ, ಎಲ್ಲಿಂದ-ಎಲ್ಲಿಗೆ?

ಹೆಚ್ಚಿನ ಮಾಹಿತಿ ಸಂಪರ್ಕಿಸಬೇಕಾದ ಸಂಖ್ಯೆಗಳು

ಮಾಲೂರು- 7760990133/7019637406
ಚಿಕ್ಕಮಗಳೂರು- 9902863142/7349103222
ಮಳವಳ್ಳಿ- 7760990277/7619343405/9663266889
ಹಾಸನ -945709380/8904045818/9972293866
ಹೊಳಲ್ಕೆರೆ- 7019072560/9740027655/9380403676 ಸಂಖ್ಯೆಗಳಿಗೆ ಅರ್ಹ ಆಸಕ್ತರು ಸಂಪರ್ಕಿಸುವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

English Summary

Karnataka KSRTC invites SC/ST candidates for free driving training, licence, accommodation and meals at designated training centres across Karnataka.