ಮಾನಸಿಕ ಅಸ್ವಸ್ಥ ಸಹೋದರಿ ಬಿಟ್ಟು 6 ಮಂದಿಯ ಕೊ* ಮಾಡಿದ ಪೋಕ್ಸೋ ಆರೋಪಿ: ತನ್ನ ಮಕ್ಕಳನ್ನೂ ಬಿಡಲಿಲ್ಲ !


ನೆರೆಯ ತೆಲಂಗಾಣದಲ್ಲಿ ಭೀಕರ ಘಟನೆಯೊಂದು ನಡೆದಿದ್ದು ಪೋಕ್ಸೋ ಪ್ರಕರಣ ಆರೋಪಿ 6 ಜನರನ್ನು ಹತ್ಯೆ ಮಾಡಿದ್ದಾನೆ. ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ 16 ವರ್ಷದ ಬಾಲಕಿಗೆ ಕಿರುಕುಳ ನೀಡದ ಆರೋಪ ಎದುರಿಸುತ್ತಿರುವ 35 ವರ್ಷದ ವ್ಯಕ್ತಿಯೊಬ್ಬ ಭೀಕರ ಕೃತ್ಯವನ್ನೆಸಗಿದ್ದಾನೆ. ಶುಕ್ರವಾರ ರಾತ್ರಿ ಬಾಲಕಿ, ಆಕೆಯ ತಾಯಿ ಹಾಗೂ ಅಜ್ಜಿ ಸೇರಿದಂತೆ ಆರು ಜನರನ್ನು ಕೊಲೆ ಮಾದ್ದಾನೆ. ಬಾಲಕಿ ಹಾಗೂ ಅವರ ಮನೆಯವರನ್ನು ಕೊಲೆ ಮಾಡಿದ ನಂತರ ತನ್ನ ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳನ್ನು ಕೊಂದಿದ್ದಾನೆ. ಈ ಆರೋಪಿಗೆ ಕಳೆದ ತಿಂಗಳು ನಿರೀಕ್ಷಣಾ ಜಾಮೀನು ನೀಡಿ ವೈಯಕ್ತಿಕ ಬಾಂಡ್ ಮೇಲೆ ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು. ಹೈದರಾಬಾದ್‌ನಿಂದ ಕೇವಲ 6 ಕಿ.ಮೀ ದೂರದಲ್ಲಿರುವ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಇದೀಗ ಕೊಲೆ ಆರೋಪಿಯ ಪತ್ತೆ ಮಾಡುವುದಕ್ಕೆ ಪೊಲೀಸರು ಮುಂದಾಗಿದ್ದಾರೆ.

Advertisement

ತೆಲಂಗಾಣ ಪೊಲೀಸರ ಪ್ರಕಾರ, ಆರೋಪಿ ರಾತ್ರಿ 10.45 ರ ಸುಮಾರಿಗೆ ತನ್ನ ಗ್ರಾಮದಿಂದ ಪಟ್ಟಣಕ್ಕೆ 6 ಕಿ.ಮೀ. ಕಾರು ಚಲಾಯಿಸಿಕೊಂಡು ಬಂದಿದ್ದಾನೆ. ಆಕೆಯನ್ನು ಹಿಂಬಾಲಿಸಿದ್ದಕ್ಕಾಗಿ ಆತನ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಪ್ರಕರಣ ದಾಖಲಿಸಲಾಗಿತ್ತು.

Advertisement

ಹೊರರಾಜ್ಯದವರಿಗೆ ಇಲ್ಲಿ ಜಾಗವಿಲ್ಲ, ಕನ್ನಡಿಗರಿಗಷ್ಟೇ ಮೊದಲ ಆದ್ಯತೆ: ವಲಸಿಗರಿಗೆ ಶಾಕ್‌ ಕೊಟ್ಟ ಸಿಎಂ ಡಿ.ಕೆ.ಶಿವಕುಮಾರ್‌

ಈ ದೂರು ನೀಡಿದ್ದ 16 ವರ್ಷದ ಬಾಲಕಿಯ ಮನೆಗೆ ಹೋಗಿ ಬಾಗಿಲು ತಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕಿಯ ತಾಯಿ ಬಾಗಿಲು ತೆಗೆದಾಗ ಆಕೆಯ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ಸ್ಥಳದಲ್ಲೇ ಕೊಂದಿದ್ದಾನೆ. ಮನೆಗೆ ನುಗ್ಗಿ ಮಲಗಿದ್ದ ಹುಡುಗಿಯ 60 ವರ್ಷದ ಅಜ್ಜಿಯನ್ನೂ ಕೊಲೆ ಮಾಡಿದ್ದಾನೆ. ಹುಡುಗಿಯನ್ನು ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡು ತನ್ನ ಹಳ್ಳಿಯಲ್ಲಿರುವ ನದಿ ಬಳಿ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಆಕೆಯನ್ನು ಇರಿದು ಕೊಂದು, ಆಕೆಯ ಮೃತದೇಹವನ್ನು ನದಿಗೆ ಎಸೆದಿದ್ದಾನೆ. ಆದರೆ, ಮಾನಸಿಕ ಅಸ್ವಸ್ಥ ಸಹೋದರಿಯನ್ನು ಅವರು ಏನು ಮಾಡಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Advertisement

ತನ್ನ ಕುಟುಂಬದವರನ್ನೂ ಬಿಡಲಿಲ್ಲ

ಇನ್ನು ಪೋಕ್ಸೋ ಪ್ರಕರಣ ಆರೋಪಿ ತನ್ನ ಕುಟುಂಬದವರನ್ನೂ ಬಿಟ್ಟಿಲ್ಲ. ಹೆಂಡತಿ, ಇಬ್ಬರು ಗಂಡು ಮಕ್ಕಳನ್ನು ಸಹ ಕೊಲೆ ಮಾಡಿದ್ದಾನೆ. ರಾತ್ರಿ 11.20ರ ಸುಮಾರಿಗೆ ಮನೆಗೆ ಹೋದ ಆರೋಪಿಯು ಹೆಂಡ, ಇಬ್ಬರು ಗಂಡು ಮಕ್ಕಳನ್ನು ಸಹ ಕೊಲೆ ಮಾಡಿದ್ದಾನೆ. 4 ಮತ್ತು 18 ತಿಂಗಳ ವಯಸ್ಸಿನ ಸಣ್ಣ ಗಂಡು ಮಕ್ಕಳ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ಹುಡುಗರು ಮಲಗಿದ್ದಾಗಲೇ ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಸರಣಿ ಕೊಲೆಗಳನ್ನು ಮಾಡಿದ ನಂತರ ಆರೋಪಿ ತನ್ನ ತಂದೆ ಕರೆ ಮಾಡಿ ಈ ಎಲ್ಲ ಕೊಲೆಗಳನ್ನು ತಾನೇ ಮಾಡಿದ್ದಾನೆ ಎಂದು ಒಪ್ಪಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ. ನಂತರ ಅವನು ತನ್ನ ಕಾರಿನಲ್ಲಿ ಗ್ರಾಮದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ತಲುಪಿ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಮೊಮ್ಮಗನ ಖುಷಿಗೆ ಅಡುಗೆಮನೆಗೆ ಎಂಟ್ರಿಕೊಟ್ಟ ತೆಲಂಗಾಣ CM ರೇವಂತ್ ರೆಡ್ಡಿ: ವೈರಲ್ ಆಯ್ತು ಪೂರಿ ಮಾಡ್ತಿರೋ ವಿಡಿಯೋ

ಪ್ರಕರಣದ ಹಿನ್ನೆಲೆ ಏನು

ಇನ್ನು ಆರೋಪಿಯ ವಿರುದ್ಧ ಮೇ ತಿಂಗಳಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿತ್ತು. ಆ ವ್ಯಕ್ತಿ ತಲೆಮರೆಸಿಕೊಂಡಿದ್ದ ನಂತರ ಜೂನ್‌ನಲ್ಲಿ ಸ್ಥಳೀಯ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದ ಎಂದು ತೆಲಂಗಾಣ ಪೊಲೀಸರು ತಿಳಿಸಿದ್ದಾರೆ. ಅಪರಾಧಕ್ಕೆ ಗರಿಷ್ಠ ಏಳು ವರ್ಷಗಳಿಗಿಂತ ಕಡಿಮೆ ಶಿಕ್ಷೆ ವಿಧಿಸುವ ಅವಕಾಶ ಇರುವುದರಿಂದ ಅವನಿಗೆ ನಿರೀಕ್ಷಣಾ ಜಾಮೀನು ನೀಡಲಾಗಿತ್ತು ಮತ್ತು ಪೊಲೀಸರು ವೈಯಕ್ತಿಕ ಬಾಂಡ್ ಮೇಲೆ ಬಿಡುಗಡೆ ಮಾಡಿದ್ದರು. ಆದರೆ ಈ ಕೃತ್ಯದ ಹಿಂದಿನ ಉದ್ದೇಶ ಇನ್ನಷ್ಟೇ ತನಿಖೆಯಿಂದ ಬಹಿರಂಗವಾಗಬೇಕಾಗಿದೆ ಎಂದು ತೆಲಂಗಾಣ ಪೊಲೀಸರು ಮಾಹಿತಿ ನೀಡಿದ್ದಾರೆ.

English Summary

POCSO Accused Kills 6 Family Members, Including His Children; Sister With Mental Illness Survives