NEET UG 2026: ಶುಲ್ಕ ಮರುಪಾವತಿಗೆ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಗಡುವು ವಿಸ್ತರಣೆ: ಜುಲೈ 31 ಕೊನೆ ದಿನ


ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(ಎನ್‌ಟಿಎ) ಮೇ 3 ರಂದು ನಡೆದಿದ್ದ ನೀಟ್ ಯುಜಿ 2026ರ ಪರೀಕ್ಷಾ ಶುಲ್ಕ ಮರುಪಾವತಿ ಪ್ರಕ್ರಿಯೆಯನ್ನ ಈಗಾಗಲೇ ಆರಂಭಿಸಿದೆ. ಇದೀಗ ವಿದ್ಯಾರ್ಥಿಗಳಿಗೆ ಬ್ಯಾಂಕ್ ಖಾತೆ ವಿವರಗಳನ್ನು ಸಲ್ಲಿಸಲು ನೀಡಿದ್ದ ಗಡುವನ್ನು ಜುಲೈ 31ರವರೆಗೆ ವಿಸ್ತರಿಸಿ ಪ್ರಕಟಣೆ ಹೊರಡಿಸಿದೆ.

Advertisement

ಇದರ ಜೊತೆಗೆ ಇತ್ತೀಚೆಗೆ ನಡೆದಿದ್ದ ನೀಟ್ ಮರುಪರೀಕ್ಷೆಯ ಸ್ಕ್ಯಾನ್ ಮಾಡಿದ OMR ಉತ್ತರ ಪತ್ರಿಕೆಗಳನ್ನ ಸಹ ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿದೆ. ಎಂಬಿಬಿಎಸ್ ಸೇರಲು ಕನಸು ಕಾಣುತ್ತಿರುವ ಲಕ್ಷಾಂತರ ವಿದ್ಯಾರ್ಥಿಗಳಿಗೆ ಈ ಮಾಹಿತಿ ತುಂಬ ಮುಖ್ಯ.

Advertisement

Certificates: ಕರ್ನಾಟಕದ ಜನರಿಗೆ ಗುಡ್‌ನ್ಯೂಸ್: ಇನ್ಮುಂದೆ ಮನೆ ಬಾಗಿಲಿಗೆ ಬರಲಿದೆ ಜಾತಿ, ನಿವಾಸಿ ಪ್ರಮಾಣಪತ್ರ!

ಮೇ 3 ರಂದು ನಡೆದಿದ್ದ ನೀಟ್ ಪರೀಕ್ಷೆಯಲ್ಲಿ ಭಾಗವಹಿಸಿದ್ದ ಅಭ್ಯರ್ಥಿಗಳಿಗೆ ಪರೀಕ್ಷಾ ಶುಲ್ಕವನ್ನು ಹಿಂದಿರುಗಿಸಲು ಎನ್‌ಟಿಎ ನಿರ್ಧರಿಸಿದೆ. ಈ ಆದೇಶ ಹೊರಬಿದ್ದು ತುಂಬ ದಿನಗಳೇ ಕಳೆದಿದೆ. ಆದರೆ, ಆಶ್ಚರ್ಯವೆಂದರೆ ಪರೀಕ್ಷೆ ಬರೆದಿದ್ದ ಒಟ್ಟು 22 ಲಕ್ಷ ವಿದ್ಯಾರ್ಥಿಗಳಲ್ಲಿ ಈವರೆಗೆ ಕೇವಲ ಶೇ. 52 ರಷ್ಟು ಅಭ್ಯರ್ಥಿಗಳು ಮಾತ್ರ ತಮ್ಮ ಬ್ಯಾಂಕ್ ವಿವರಗಳನ್ನು ಒದಗಿಸಿದ್ದಾರೆ.

ಎನ್‌ಟಿಎ ನೀಡಿರುವ ಮಾಹಿತಿಯ ಪ್ರಕಾರ, ಜುಲೈ 14, 2026 ರವರೆಗೆ ಕೇವಲ 11,46,401 ವಿದ್ಯಾರ್ಥಿಗಳು ಮಾತ್ರ ಶುಲ್ಕ ಮರುಪಾವತಿಗಾಗಿ ತಮ್ಮ ಬ್ಯಾಂಕ್ ಖಾತೆಯ ವಿವರಗಳನ್ನು ಪೋರ್ಟಲ್‌ನಲ್ಲಿ ಅಪ್‌ಡೇಟ್ ಮಾಡಿದ್ದಾರೆ. ಈಗಾಗಲೇ ಬ್ಯಾಂಕ್ ವಿವರಗಳನ್ನು ಸರಿಯಾಗಿ ಸಲ್ಲಿಸಿರುವ ವಿದ್ಯಾರ್ಥಿಗಳ ಬ್ಯಾಂಕ್‌ ಖಾತೆಗೆ ಹಣ ಜಮೆ ಮಾಡುವ ಪ್ರಕ್ರಿಯೆಯನ್ನ ಸಂಸ್ಥೆ ಈಗಾಗಲೇ ಆರಂಭಿಸಿದೆ.

Advertisement

ಬ್ಯಾಂಕ್ ವಿವರ ಸಲ್ಲಿಸಲು ಮೊದಲು ಜುಲೈ 14 ಅಂದರೆ ನಿನ್ನೆಯೇ ಕಡೆಯ ದಿನವಾಗಿತ್ತು. ಆದರೆ, ಇನ್ನೂ ಅರ್ಧದಷ್ಟು ವಿದ್ಯಾರ್ಥಿಗಳು ವಿವರಗಳನ್ನು ನೀಡದಿರುವ ಕಾರಣ, ಎಲ್ಲರಿಗೂ ಮರುಪಾವತಿ ಸಿಗಲಿ ಎಂಬ ಉದ್ದೇಶದಿಂದ ಈ ಗಡುವನ್ನು ಜುಲೈ 31ರವರೆಗೆ ವಿಸ್ತರಿಸಲಾಗಿದೆ. ಹೀಗಾಗಿ, ಈವರೆಗೆ ತಮ್ಮ ಬ್ಯಾಂಕ್ ಖಾತೆಯ ಮಾಹಿತಿಯನ್ನು ಅಪ್‌ಡೇಟ್ ಮಾಡದ ವಿದ್ಯಾರ್ಥಿಗಳು ಕೂಡಲೇ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ವಿವರಗಳನ್ನು ನಮೂದಿಸುವಂತೆ ಎನ್‌ಟಿಎ ಸೂಚಿಸಿದೆ.

NEET ಪರೀಕ್ಷೆಯಲ್ಲಿ 694ನೇ ರ‍್ಯಾಂಕ್ ಪಡೆದ ಕುರಿ ಕಾಯುವ ಹುಡುಗ: ಇದು ಕೊಪ್ಪಳದ ಪುಟ್ಟರಾಜು ಯಶೋಗಾಥೆ

ನೀಟ್ ಮರುಪರೀಕ್ಷೆ OMR ಶೀಟ್ ಬಿಡುಗಡೆ: ಡೌನ್‌ಲೋಡ್ ಮಾಡುವುದು ಹೇಗೆ?

ಮತ್ತೊಂದೆಡೆ, ನೀಟ್-ಯುಜಿ 2026 ಮರುಪರೀಕ್ಷೆಯ ವಿದ್ಯಾರ್ಥಿಗಳ OMR ರೆಸ್ಪಾನ್ಸ್ ಶೀಟ್‌ಗಳನ್ನು ಎನ್‌ಟಿಎ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಈ ಹಿಂದೆ ತಾತ್ಕಾಲಿಕ ಕೀ-ಉತ್ತರಗಳನ್ನು ಬಿಡುಗಡೆ ಮಾಡಿದ್ದ ಸಂಸ್ಥೆ, ಈಗ ಅಭ್ಯರ್ಥಿಗಳ ಮೂಲ ಉತ್ತರ ಪತ್ರಿಕೆಗಳ ಸ್ಕ್ಯಾನ್ ಕಾಪಿಗಳನ್ನ ನೀಡಿದೆ.

Advertisement

ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ, ಈ OMR ಶೀಟ್‌ಗಳನ್ನು ಸಾರ್ವಜನಿಕವಾಗಿ ಯಾವುದೇ ಪಿಡಿಎಫ್ ರೂಪದಲ್ಲಿ ಪ್ರಕಟಿಸಿಲ್ಲ. ಬದಲಾಗಿ, ಪ್ರತಿಯೊಬ್ಬ ಅಭ್ಯರ್ಥಿಯೂ ತಮ್ಮ ವೈಯಕ್ತಿಕ OMR ಶೀಟ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಲು ಅಧಿಕೃತ ಪೋರ್ಟಲ್ neet.nta.nic.in ಗೆ ಭೇಟಿ ನೀಡಬೇಕು. ಅಲ್ಲಿ ತಮ್ಮ ಅಪ್ಲಿಕೇಶನ್ ನಂಬರ್ ಹಾಗೂ ಪಾಸ್‌ವರ್ಡ್ ಬಳಸಿ ಲಾಗಿನ್ ಆಗುವ ಮೂಲಕ ಮಾತ್ರ ಇದನ್ನು ಪಡೆಯಬಹುದು.

ಲಾಗಿನ್ ಆಗುವಾಗ ವಿದ್ಯಾರ್ಥಿಗಳು ತಮ್ಮ ವಿವರಗಳನ್ನು ಸರಿಯಾಗಿ ಹಾಕಬೇಕು. ಒಂದು ವೇಳೆ ತಪ್ಪು ಮಾಹಿತಿ ನೀಡಿದರೆ OMR ಶೀಟ್ ವೀಕ್ಷಣೆಗೆ ಹಾಗೂ ಕೀ-ಉತ್ತರಗಳಿಗೆ ಆಕ್ಷೇಪಣೆ ಸಲ್ಲಿಸಲು ತಡವಾಗುತ್ತದೆ ಎಂದು ಎನ್‌ಟಿಎ ಎಚ್ಚರಿಸಿದೆ.

NEET ಪ್ರಶ್ನೆಪತ್ರಿಕೆ ಸೋರಿಕೆ: ದೇಶದಲ್ಲಿ 152ಕ್ಕೂ ಹೆಚ್ಚು ಪೇಪರ್ ಲೀಕ್ ಪ್ರಕರಣ, ಕಾಂಗ್ರೆಸ್ ಗಂಭೀರ ಪ್ರಶ್ನೆ

ನೀಟ್ ಯುಜಿ 2026 ಫಲಿತಾಂಶ ಜುಲೈ 20ರೊಳಗೆ ಪ್ರಕಟ

ನೀಟ್ ತಾತ್ಕಾಲಿಕ ಕೀ-ಉತ್ತರಗಳಿಗೆ ಆಕ್ಷೇಪಣೆ ಸಲ್ಲಿಸಲು ನೀಡಲಾಗಿದ್ದ ಗಡುವು ಮುಕ್ತಾಯಗೊಳ್ಳಲಿದ್ದು, ತದನಂತರ ಅಂತಿಮ ಕೀ-ಉತ್ತರವನ್ನು ಪ್ರಕಟಿಸಲಾಗುತ್ತದೆ. ಇದರ ಬೆನ್ನಲ್ಲೇ ಜುಲೈ 20 ರೊಳಗೆ ನೀಟ್ ಯುಜಿ 2026 ಮರುಪರೀಕ್ಷೆಯ ಅಂತಿಮ ಫಲಿತಾಂಶ ಹೊರಬೀಳುವ ನಿರೀಕ್ಷೆಯಿದೆ. ಎಂಬಿಬಿಎಸ್, ಬಿಡಿಎಸ್ ಸೇರಿದಂತೆ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಾತಿಗಾಗಿ ಕಾತುರದಿಂದ ಕಾಯುತ್ತಿರುವ 20 ಲಕ್ಷಕ್ಕೂ ಹೆಚ್ಚು ಆಕಾಂಕ್ಷಿಗಳಿಗೆ ಈ ಫಲಿತಾಂಶ ತುಂಬ ಮುಖ್ಯವಾಗಿದೆ.

English Summary

NTA has extended the deadline to submit bank account details for the NEET UG 2026 exam fee refund to July 31.