ಗಂಟೆಗಟ್ಟಲೆ ಉಜ್ಜುವ ಅಗತ್ಯವೇ ಇಲ್ಲ: ಅಡುಗೆಮನೆ ಸಿಂಕ್ ಪಳಪಳ ಹೊಳೆಯುವಂತೆ ಮಾಡಲು ಇಲ್ಲಿದೆ 7 ಟಿಪ್ಸ್


ಒಂದು ಮನೆಗೆ ಚಂದದ ಅಡುಗೆಮನೆ ಇರಬೇಕು. ಆ ಅಡುಗೆಮನೆ ಯಾವಾಗಲೂ ಪಳಪಳ ಅಂತ ಹೊಳೆಯುತ್ತಿರಬೇಕು. ಇದು ನೋಡಲಿಕ್ಕು ಮತ್ತೆ ಆರೋಗ್ಯಕ್ಕೆ ತುಂಬ ಮುಖ್ಯ. ಇನ್ನೂ ಮನೆಯಲ್ಲಿ ಈ ಅಡುಗೆಮನೆ ಎಷ್ಟೇ ಶುಚಿಯಾಗಿದ್ದರೂ, ಪಾತ್ರೆ ತೊಳೆಯುವ ಸಿಂಕ್ ಗಲೀಜಾಗಿದ್ದರೆ ಇಡೀ ಅಡುಗೆಮನೆಯ ಅಂದವೇ ಹಾಳಾಗುತ್ತದೆ ಎನ್ನುವು ಎಲ್ಲರಿಗೂ ಗೊತ್ತೇಯಿದೆ.

Advertisement

ಸಿಂಕ್‌ನಲ್ಲಿ ಜಿಡ್ಡಿನ ಕಲೆಗಳು, ನೀರಿನ ಕಲೆಗಳು ಮತ್ತು ಕೆಟ್ಟ ವಾಸನೆ ಬರುವುದು ಸಾಮಾನ್ಯ. ಆದರೆ, ಇದನ್ನು ಸ್ವಚ್ಛ ಮಾಡಲು ಗಂಟೆಗಟ್ಟಲೆ ಕಷ್ಟಪಟ್ಟು ಉಜ್ಜುವ ಅಗತ್ಯವಿಲ್ಲ. ರಾಸಾಯನಿಕ ಕ್ಲೀನರ್‌ಗಳ ಬಳಸುವ ಬದಲು, ನಮ್ಮ ಅಡುಗೆಮನೆಯಲ್ಲೇ ಸಿಗುವ ಕೆಲವೊಂದು ನೈಸರ್ಗಿಕ ವಸ್ತುಗಳನ್ನ ಬಳಸಿ ಸಿಂಕ್ ಅನ್ನು ಪಳಪಳ ಹೊಳೆಯುವಂತೆ ಮಾಡಬಹುದು.

Advertisement

ಬಿಡದಿ ರೈತರಿಗೆ ಗುಡ್‌ನ್ಯೂಸ್‌: ಬಲವಂತದಿಂದ ಜಮೀನು ಪಡೆಯಲ್ಲ ಎಂದ ಡಿಕೆ ಶಿವಕುಮಾರ್, ಜು.17ಕ್ಕೆ ಬಿಜೆಪಿ ಧರಣಿ

1. ಬೇಕಿಂಗ್ ಸೋಡಾ ಮತ್ತು ವಿನೆಗರ್ ಮ್ಯಾಜಿಕ್

ಮೊದಲು ಸಿಂಕ್ ತುಂಬು ಬೇಕಿಂಗ್ ಸೋಡಾ ಚೆಲ್ಲಿ, ನಂತರ ಅದರ ಮೇಲೆ ಬಿಳಿ ವಿನೆಗರ್ ಹಾಕಿ. ಈ ಎರಡು ವಸ್ತುಗಳು ಸೇರಿದ ತಕ್ಷಣ ನೊರೆ ಬರಲು ಶುರುವಾಗುತ್ತದೆ. ಈ ನೊರೆಯು ಸಿಂಕ್‌ನಲ್ಲಿರುವ ಜಿಡ್ಡು, ಕಲೆ ಹಾಗೂ ದುರ್ವಾಸನೆಯನ್ನು ಸುಲಭವಾಗಿ ಹೋಗಿಸುತ್ತದೆ. ಐದು ನಿಮಿಷಗಳ ನಂತರ ಸಿಂಕ್‌ ಅನ್ನಾ ನೀರಿನಿಂದ ತೊಳೆದರೆ ಸಾಕು, ಯಾವುದೇ ಶ್ರಮವಿಲ್ಲದೆ ಸಿಂಕ್ ಫುಲ್‌ ಕ್ಲೀನ್‌.

2. ನೀರಿನ ಕಲೆ ನಿವಾರಣೆಗೆ ಸಿಂಕ್ ಕ್ಲೀನಿಂಗ್ ಟಿಪ್ಸ್

ಸಾಮಾನ್ಯವಾಗಿ ಮನೆಗಳಲ್ಲಿ ನೀರಿನ (hard water)ಕಲೆಗಳು ಸಿಂಕ್ ಮೇಲೆ ಮೂಡುವುದು ಸಾಮಾನ್ಯ. ಬಿಳಿ ವಿನೆಗರ್‌ನಲ್ಲಿ ಅದ್ದಿದ ಬಟ್ಟೆಯನ್ನು ಈ ಕಲೆಗಳ ಮೇಲೆ 10 ರಿಂದ 15 ನಿಮಿಷಗಳ ಕಾಲ ಇಡಿ. ಬಳಿಕ ಅದೇ ಬಟ್ಟೆಯಿಂದ ಒರೆಸಿದರೆ ಕಲೆಗಳು ಮಾಯವಾಗುತ್ತವೆ. ಅಲ್ಲದೇ, ಈ ವಿನೆಗರ್ ಬ್ಯಾಕ್ಟೀರಿಯಾಗಳನ್ನು ನಾಶಪಡಿಸುವ ಶಕ್ತಿಯನ್ನೂ ಹೊಂದಿದೆ.

Advertisement

3. ತುಕ್ಕು ಮತ್ತು ಸೋಪಿನ ಕಲೆಗಳಿಗೆ ನಿಂಬೆಹಣ್ಣು

ನಿಂಬೆಹಣ್ಣನ್ನು ಅರ್ಧ ಕತ್ತರಿಸಿ, ಸಿಂಕ್‌ನ ಮೇಲ್ಮೈಗೆ ಉಜ್ಜಿ. ಇದರಲ್ಲಿರುವ ಸಿಟ್ರಿಕ್ ಆಸಿಡ್ ತುಕ್ಕಿನ ಕಲೆಗಳು ಮತ್ತು ಸೋಪಿನ ಕಲೆಗಳನ್ನು ನೈಸರ್ಗಿಕವಾಗಿ ಹೋಗುವಂತೆ ಮಾಡುತ್ತದೆ. ವಿಜ್ಞಾನಿಗಳ ಪ್ರಕಾರ, ಈ ನಿಂಬೆರಸವು ಸಿಂಕ್‌ ಮೇಲ್ಮೈ ಮೇಲಿರುವ ಅಪಾಯಕಾರಿ ಬ್ಯಾಕ್ಟೀರಿಯಾಗಳನ್ನು ಸಹ ಕೊಲ್ಲುತ್ತದೆ .

ಇದೊಂದು ವಸ್ತು ಬಳಸಿ ಬಾತ್‌ರೂಂ ಗೋಡೆಗಳಲ್ಲಿ ಅಂಟಿಕೊಂಡಿರುವ ಕಪ್ಪು ಕಲೆಗಳನ್ನು ನಿಮಿಷದಲ್ಲಿ ತೆಗದು ಬಿಡಬಹುದು

4. ದುರ್ವಾಸನೆ ತಡೆಯಲು ಹೈಡ್ರೋಜನ್ ಪೆರಾಕ್ಸೈಡ್

ಸಿಂಕ್‌ನ ನೀರು ಹೋಗುವ ಪೈಪ್‌ಯೇ ಅತಿ ಹೆಚ್ಚು ಕೊಳೆಯಿಂದ ಕೂಡಿರುತ್ತದೆ. ಶೇ. 3ರಷ್ಟು ಹೈಡ್ರೋಜನ್ ಪೆರಾಕ್ಸೈಡ್ ಅನ್ನು ಡ್ರೈನ್‌ಗೆ ಸುರಿದು 10 ನಿಮಿಷ ಬಿಡಿ. ನಂತರ ಬಿಸಿ ನೀರು ಸುರಿದರೆ, ಅದರಲ್ಲಿರುವ ಬ್ಯಾಕ್ಟೀರಿಯಾಗಳು ನಾಶವಾಗಿ ಕೆಟ್ಟ ವಾಸನೆ ದೂರವಾಗುತ್ತದೆ. ಇದು ಅಡುಗೆಮನೆಯ ಸ್ವಚ್ಛತೆ ಕಾಪಾಡಲು ಇರುವ ಉತ್ತಮ ವಿಧಾನ.

Advertisement

5. ಉಪ್ಪಿನಿಂದ ಸಿಂಕ್ ಕ್ಲೀನಿಂಗ್ ಟಿಪ್ಸ್

ಕಲ್ಲು ಉಪ್ಪನ್ನ ಉಜ್ಜಿ ಸ್ವಚ್ಛಗೊಳಿಸುವುದು ಮತ್ತೊಂದು ನೈಸರ್ಗಿಕ ವಿಧಾನ. ಜಿಡ್ಡಿನ ಕಲೆಗಳ ಮೇಲೆ ಸ್ವಲ್ಪ ಉಪ್ಪು ಮತ್ತು ನಿಂಬೆರಸ ಬೆರೆಸಿ ಮೃದುವಾಗಿ ಉಜ್ಜಿದರೆ, ಸಿಂಕ್‌ಗೆ ಯಾವುದೇ ಗೀರುಗಳು ಬೀಳದೆ ಕಲೆಗಳು ಸುಲಭವಾಗಿ ಹೋಗುತ್ತದೆ.

6. ವಾರಕ್ಕೆರಡು ಬಾರಿ ಬಿಸಿ ನೀರಿನ ಬಳಕೆ

ನೀರು ಹೋಗುವ ಪೈಪ್‌ನಲ್ಲಿ ಜಿಡ್ಡು ಶೇಖರಣೆಯಾಗುವುದನ್ನು ತಪ್ಪಿಸಲು ವಾರಕ್ಕೆ ಒಂದೆರಡು ಬಾರಿ ಕುದಿಯುವ ನೀರನ್ನು ಡ್ರೈನ್‌ಗೆ ನಿಧಾನವಾಗಿ ಸುರಿಯಿರಿ. ಇದು ಯಾವುದೇ ಕೆಮಿಕಲ್ ಇಲ್ಲದೆ ಕೊಳೆಯನ್ನು ಕರಗಿಸುವ ಅತ್ಯಂತ ಸುಲಭ ಮತ್ತು ಸರಳ ವಿಧಾನವಾಗಿದೆ.

ಮೊಟ್ಟೆಯ ಸಿಪ್ಪೆ ಗಿಡಗಳಿಗೆ ನೈಸರ್ಗಿಕ ಗೊಬ್ಬರ: ಈ ರೀತಿ ಬಳಸಿದರೆ ಸಸ್ಯಗಳಿಗೆ ಸಿಗುವುದು ಅಗತ್ಯ ಪೋಷಣೆ

7. ಮೂಲೆಗಳ ಸ್ವಚ್ಛತೆಗೆ ಬೇಕಿಂಗ್ ಸೋಡಾ ಪೇಸ್ಟ್

ನಳದ ಸುತ್ತಮುತ್ತ ಮತ್ತು ಸಿಂಕ್‌ನ ಮೂಲೆಗಳಲ್ಲಿ ಕೊಳೆ ಹೆಚ್ಚಾಗಿ ಸೇರಿಕೊಳ್ಳುತ್ತದೆ. ಹಾಗಾಗಿ ಅದನ್ನಾ ಕ್ಲೀನ್‌ ಮಾಡಲು ಸ್ವಲ್ಪ ನೀರಿಗೆ ಬೇಕಿಂಗ್ ಸೋಡಾ ಬೆರೆಸಿ ದಪ್ಪನೆಯ ಪೇಸ್ಟ್ ಮಾಡಿ, ಈ ಮೂಲೆಗಳಿಗೆ ಹಚ್ಚಿ. ಐದು ನಿಮಿಷಗಳ ನಂತರ ಒದ್ದೆ ಬಟ್ಟೆಯಲ್ಲಿ ಒರೆಸಿದರೆ, ಕಷ್ಟಪಟ್ಟು ಉಜ್ಜುವ ಅಗತ್ಯವಿಲ್ಲದೆ ಕೊಳೆ ಸಂಪೂರ್ಣವಾಗಿ ಹೋಗುತ್ತದೆ.

English Summary

Discover 7 effortless ways to clean your kitchen sink without hard scrubbing using everyday natural ingredients like baking soda, vinegar, lemon, and salt.