PM Kisan 13th Installment : ಫೆಬ್ರವರಿ- ಮಾರ್ಚ್ ತಿಂಗಳಿನಲ್ಲಿ ರೈತರಿಗೆ 2,000 ರೂ.
ನವದೆಹಲಿ, ಡಿಸೆಂಬರ್ 27: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ ಕಿಸಾನ್) ಅಡಿಯಲ್ಲಿ ರೈತರ ಖಾತೆಗೆ 13ನೇ ಕಂತು ಯಾವಾಗ ಸಿಗುತ್ತದೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಬಹು ನಿರೀಕ್ಷಿತ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆಯ 13ನೇ ಕಂತನ್ನು ಫಲಾನುಭವಿಗಳ ಖಾತೆಗೆ ಬಿಡುಗಡೆ ಮಾಡಬಹುದೆಂಬ ಊಹಾಪೋಹಗಳು ಹರಡಿವೆ.
ಕೇಂದ್ರ ಸರ್ಕಾರದ ಯೋಜನೆಯ ಭಾಗವಾಗಿ ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ತಲಾ 2000 ರೂಪಾಯಿಗಳಂತೆ ಮೂರು ಕಂತುಗಳಲ್ಲಿ ಒಟ್ಟು 6000 ರೂಪಾಯಿ ಹಣವನ್ನು ನೇರ ಲಾಭ ವರ್ಗಾವಣೆ (ಡಿಬಿಟಿ) ಮೂಲಕ ಜಮಾ ಮಾಡಲಾಗುತ್ತಿದೆ. ಇದರ ಮಧ್ಯೆ ಹೊಸ ವರ್ಷ 2023ರ ಫೆಬ್ರವರಿ-ಮಾರ್ಚ್ ನಡುವೆ 13ನೇ ಕಂತನ್ನು ಸ್ವೀಕರಿಸಬಹುದು ಎಂದು ಎಬಿಪಿ ಸುದ್ದಿ ವರದಿ ಮಾಡಿದೆ.

ರೈತರ ಖಾತೆಗೆ 12ನೇ ಕಂತಿನ ಹಣ ಬಂದಿದ್ದು ಯಾವಾಗ?
12ನೇ ಕಂತನ್ನು ರೈತರ ಖಾತೆಗೆ ಜಮಾ ಮಾಡಲಾಗಿದೆ. ಇದೀಗ 13ನೇ ಕಂತುಗಾಗಿ ಕಾತುರದಿಂದ ಎದುರು ನೋಡುತ್ತಿದ್ದಾರೆ.
ದೀಪಾವಳಿಗೆ ಮುಂಚಿತವಾಗಿ ಅಕ್ಟೋಬರ್ 17ರಂದು ಅರ್ಹ ರೈತ ಕುಟುಂಬಗಳಿಗೆ ಪ್ರಧಾನಿ ನರೇಂದ್ರ ಮೋದಿ 12ನೇ ಕಂತಿನ ಹಣವನ್ನು ಆರ್ಥಿಕ ಪ್ರಯೋಜನವನ್ನು ಬಿಡುಗಡೆ ಮಾಡಿದರು. ಈ ಎರಡು ದಿನಗಳ ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ ಪಿಎಂ ಕಿಸಾನ್ ಫಲಾನುಭವಿಗಳಿಗೆ ನೇರ ಲಾಭ ವರ್ಗಾವಣೆಗಾಗಿ 16,000 ಕೋಟಿ ರೂಪಾಯಿಗಳನ್ನು ವಿತರಿಸಿದರು. ದೇಶದ ಸಣ್ಣ ಮತ್ತು ಅತಿ ಸಣ್ಣ ರೈತರನ್ನು ಒಳಗೊಳ್ಳುವ ಈ ಕೇಂದ್ರ ಸರ್ಕಾರದ ಯೋಜನೆಯನ್ನು ಸುಮಾರು 3.6 ವರ್ಷಗಳ ಹಿಂದೆ ಜಾರಿಗೆ ತರಲಾಗಿತ್ತು.

13ನೇ ಕಂತು ಮತ್ತು ಬ್ಯಾಲೆನ್ಸ್ ಪರಿಶೀಲಿಸಲು ಕ್ರಮ ಹೇಗೆ?
* ಸರ್ಕಾರದ ಅಧಿಕೃತ https://pmkisan.gov.in/ ವೆಬ್‌ಸೈಟ್‌ಗೆ ಹೋಗಿ
* ಈಗ ಮುಖಪುಟದಲ್ಲಿ 'ಫಾರ್ಮರ್ಸ್ ಕಾರ್ನರ್ ವಿಭಾಗವನ್ನು ನೋಡಿ
* 'ಫಲಾನುಭವಿ ಸ್ಥಿತಿ' ಆಯ್ಕೆಯನ್ನು ಆರಿಸಿ. ಇಲ್ಲಿ, ಫಲಾನುಭವಿಯು ತನ್ನ ಅರ್ಜಿಯ ಸ್ಥಿತಿಯನ್ನು ಪರಿಶೀಲಿಸಬಹುದು.
* ಈ ಪಟ್ಟಿಯು ರೈತರ ಹೆಸರು ಮತ್ತು ಅವರ ಬ್ಯಾಂಕ್ ಖಾತೆಗೆ ಕಳುಹಿಸಲಾದ ಮೊತ್ತವನ್ನು ಹೊಂದಿರುತ್ತದೆ.
* ಈಗ ನಿಮ್ಮ ಆಧಾರ್ ಸಂಖ್ಯೆ ಅಥವಾ ಖಾತೆ ಸಂಖ್ಯೆ ಅಥವಾ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
* ನಂತರ 'ಡೇಟಾ ಪಡೆಯಿರಿ' ಮೇಲೆ ಕ್ಲಿಕ್ ಮಾಡಿ.

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಬಗ್ಗೆ ತಿಳಿಯಿರಿ
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯು ಕೇಂದ್ರ ಸರ್ಕಾರದ ಪ್ರಾಯೋಜಿತ ಯೋಜನೆಯಾಗಿದ್ದು, ದೇಶಾದ್ಯಂತ ಬಡತನದ ಅಂಚಿನಲ್ಲಿರುವ ಕೋಟ್ಯಂತರ ಬಡ ರೈತರಿಗೆ ಆರ್ಥಿಕ ನೆರವು ನೀಡಲಾಗುತ್ತಿದೆ. ಈ ಯೋಜನೆಯ ಭಾಗವಾಗಿ ಅರ್ಹ ರೈತರು ತಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ವರ್ಷದಲ್ಲಿ ಒಟ್ಟು 6000 ರೂಪಾಯಿ ಪಡೆದುಕೊಳ್ಳುತ್ತಾರೆ. ಪ್ರತಿ ನಾಲ್ಕು ತಿಂಗಳಗೆ ಒಂದು ಬಾರಿ ಕೇಂದ್ರ ಸರ್ಕಾರದಿಂದಲೇ ರೈತರ ಬ್ಯಾಂಕ್ ಖಾತೆಗೆ 2000 ರೂಪಾಯಿ ಹಣವನ್ನು ಜಮಾ ಮಾಡಲಾಗುತ್ತದೆ. 2019 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ಯೋಜನೆಯನ್ನು ಪ್ರಾರಂಭಿಸಿದ್ದು, ದೇಶಾದ್ಯಂತ ಕೆಲವು ವಿನಾಯಿತಿಗಳಡಿ ಕೃಷಿಯೋಗ್ಯ ಭೂಮಿಯೊಂದಿಗೆ ಎಲ್ಲಾ ಭೂಮಾಲೀಕ ರೈತ ಕುಟುಂಬಗಳಿಗೆ ಆದಾಯ ಬೆಂಬಲ ಒದಗಿಸುವ ಗುರಿಯನ್ನು ಯೋಜನೆ ಹೊಂದಿದೆ.

ರೈತರ ಸ್ಟೇಟಸ್ ಪರಿಶೀಲನೆ ಮಾಡುವುದು ಹೇಗೆ?
ನೋಂದಣಿ ಬಳಿಕ ರೈತರು ತಮ್ಮ ಸ್ಟೇಟಸ್ ಪರಿಶೀಲನೆ ಮಾಡಲು ಅನುಕೂಲ ಮಾಡಿಕೊಡುವ ಉದ್ದೇಶದಿಂದ ಸರ್ಕಾರ ದೊಡ್ಡ ಬದಲಾವಣೆ ಮಾಡಿದೆ. ಇನ್ನು ಮುಂದೆ ರೈತರೇ ತಮ್ಮ ಅರ್ಜಿಯ ಸ್ಟೇಟಸ್ ಪರಿಶೀಲನೆ ಮಾಡಬಹುದು. ರೈತರ ಬ್ಯಾಂಕ್ ಖಾತೆಗೆ ಎಷ್ಟು ಕಂತು ಹಣ ಬಂದಿದೆ ಎಂದು ತಿಳಿಯಬಹುದು. ಪಿಎಂ ಕಿಸಾನ್ ಪೋರ್ಟಲ್‌ಗೆ ಭೇಟಿ ನೀಡಿ ರೈತರು ತಮ್ಮ ಮೊಬೈಲ್ ಅಥವಾ ಬ್ಯಾಂಕ್ ಅಕೌಂಟ್ ನಂಬರ್ ನಮೂದಿಸುವ ಮೂಲಕ ಮಾಹಿತಿ ಪಡೆಯಬಹುದು.












Click it and Unblock the Notifications