ಸಾಲಮನ್ನಾ ಆಗಲು ರೈತರು ಈ ದಾಖಲೆಗಳನ್ನು ಕಡ್ಡಾಯವಾಗಿ ಕೊಡಬೇಕು

Recommended Video

      ಸಾಲಮನ್ನಾ ಆಗಲು ರೈತರು ಈ ದಾಖಲೆಗಳನ್ನು ಕಡ್ಡಾಯವಾಗಿ ಕೊಡಬೇಕು | Oneindia Kannada

      ಬೆಂಗಳೂರು, ಡಿಸೆಂಬರ್ 13: ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರೈತರ ಸಾಲಮನ್ನಾದ ಋಣಮುಕ್ತ ಪತ್ರ ವಿತರಣೆ ಕಾರ್ಯಕ್ಕೆ ಡಿಸೆಂಬರ್ 8 ರಂದು ಚಾಲನೆ ನೀಡಿದ್ದಾರೆ. ರಾಜ್ಯದಾದ್ಯಂತ ಸಾಲಮನ್ನಾ ಭರದಿಂದ ನಡೆಯುತ್ತಿದೆ.

      ಆದರೆ ರೈತರಲ್ಲಿ ಸಾಲಮನ್ನಾದ ಬಗ್ಗೆ ಇನ್ನೂ ಕೆಲವು ಗೊಂದಲಗಳಿವೆ. ಯಾವ ಖಾತೆಗಳ ಸಾಲಮನ್ನಾ ಆಗುತ್ತದೆ. ಎಷ್ಟು ಆಗುತ್ತದೆ. ಸಾಲಮನ್ನಾ ಆಗಲು ಏನೇನು ದಾಖಲೆಗಳು ನೀಡಬೇಕು ಎಂಬಿತ್ಯಾದಿ ಅನುಮಾನಗಳು ಇನ್ನೂ ಹಲವು ರೈತರನ್ನು ಕಾಡುತ್ತಿದೆ. ಅನುಮಾನಗಳಿಗೆ ಇಲ್ಲಿದೆ ಉತ್ತರ.

      ರೈತರ ರಾಷ್ಟ್ರೀಕೃತ ಬ್ಯಾಂಕುಗಳ 2 ಲಕ್ಷದ ವರೆಗಿನ ಬೆಳೆ ಸಾಲಮನ್ನಾ ಆಗಲಿದೆ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಬೆಳೆ ಸಾಲವು ಕಂತುಗಳಲ್ಲಿ ಮನ್ನಾ ಆಗುತ್ತದೆ ಎನ್ನಲಾಗಿದ್ದು, ಈ ಬಗ್ಗೆ ಸ್ಪಷ್ಟನೆ ದೊರಕಲಿದೆ. ಜೊತೆಗೆ ಸಹಕಾರಿ ಬ್ಯಾಂಕುಗಳ ಚಾಲ್ತಿ ಖಾತೆಯ ಸಾಲಮನ್ನಾ ಆಗಲಿದೆ.

      ರೈತರು ನೀಡಬೇಕಾಗಿರುವ ದಾಖಲೆಗಳು

      ರೈತರು ನೀಡಬೇಕಾಗಿರುವ ದಾಖಲೆಗಳು

      ಸಾಲಮನ್ನಾಕ್ಕೆ ಅರ್ಹರಾಗಲು ರೈತರು ಕೆಲವು ದಾಖಲಾತಿಗಳನ್ನು ಸರ್ಕಾರ ಹಾಗೂ ಬ್ಯಾಂಕ್‌ಗಳಿಗೆ ನೀಡಬೇಕಾಗುತ್ತದೆ. ಬೆಳೆ ಸಾಲ ಹೊಂದಿರುವ ರೈತರ ಆಧಾರ್ ಕಾರ್ಡ್‌, ಪಡಿತರ ಚೀಟಿ ಜೆರಾಕ್ಸ್‌ ಪ್ರತಿ, ಜಮೀನಿನ ಸರ್ವೆ ನಂ ಮಾಹಿತಿ ನೀಡಬೇಕಾಗುತ್ತದೆ. ಆರ್‌ಟಿಸಿ ನೀಡುವ ಅಗತ್ಯ ಇರುವುದಿಲ್ಲ. ಸಾಲ ಪಡೆದ ಬ್ಯಾಂಕ್ ನೀಡುವ ಸ್ವಯಂ ಘೋಷಣಾ ಪತ್ರಕ್ಕೆ ಸಹಿ ಹಾಕಬೇಕಾಗುತ್ತದೆ.

      ವ್ಯತ್ಯಾಸ ಇರುವುದನ್ನು ತಹಶೀಲ್ದಾರ್ ಸಮಿತಿ ಗಮನಕ್ಕೆ

      ವ್ಯತ್ಯಾಸ ಇರುವುದನ್ನು ತಹಶೀಲ್ದಾರ್ ಸಮಿತಿ ಗಮನಕ್ಕೆ

      ದಾಖಲೆಗಳನ್ನು ನಿಖರವಾಗಿ ಅಪ್‌ಲೋಡ್ ಮಾಡಬೇಕು ಅನುಮಾನಗಳಿರುವ ಅಥವಾ ವ್ಯತ್ಯಾಸವೆನಿಸುವ ಪ್ರಕರಣಗಳನ್ನು ತಹಶೀಲ್ದಾರರ ನೇತೃತ್ವದ ತಾಲ್ಲೂಕು ಸಮಿತಿ ಗಮನಕ್ಕೆ ವರ್ಗಾಯಿಸಬೇಕು ಎಂದು ಕಂದಾಯ ಇಲಾಖೆ ಸರ್ವೆ ಸೆಟಲ್‌ಮೆಂಟ್‌ ವಿಭಾಗದ ಆಯುಕ್ತ ಮುನಿಶ್ ಮುದ್ಗಲ್ ಹೇಳಿದ್ದಾರೆ.

      ಸಾಲಮನ್ನಾಕ್ಕೆ ತಂತ್ರಜ್ಞಾನದ ನೆರವು

      ಸಾಲಮನ್ನಾಕ್ಕೆ ತಂತ್ರಜ್ಞಾನದ ನೆರವು

      ಡಿಸೆಂಬರ್ 8ರಂದು ಸಾಲಮನ್ನಾಕ್ಕೆ ಚಾಲನೆ ದೊರೆತಂದಿನಿಂದಲೇ ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕುಗಳಲ್ಲಿ ಸಾಲ ಹೊಂದಿರುವ ರೈತರ ಮಾಹಿತಿ, ದಾಖಲೆಗಳ ಅಪ್‌ಲೋಡಿಂಗ್ ಕಾರ್ಯ ಭರದಿಂದ ಸಾಗುತ್ತಿದೆ. ತಂತ್ರಜ್ಞಾನದ ನೆರವು ಪಡೆದು ವ್ಯವಸ್ಥಿತವಾಗಿ ಸಾಲಮನ್ನಾ ಕಾರ್ಯ ಮಾಡಲಾಗುತ್ತಿದೆ.

      ಡಿಸೆಂಬರ್ 30 ಒಳಗೆ ಕಾರ್ಯ ಪೂರ್ಣವಾಗಬೇಕು

      ಡಿಸೆಂಬರ್ 30 ಒಳಗೆ ಕಾರ್ಯ ಪೂರ್ಣವಾಗಬೇಕು

      ಡಿಸೆಂಬರ್ 13 ರಿಂದ 30 ರ ಒಳಗಾಗಿ ಎಲ್ಲಾ ಜಿಲ್ಲೆಯ ಸಾಲ ಹೊಂದಿರುವ ರೈತರ ಮಾಹಿತಿ ಅಪ್‌ಲೋಡಿಂಗ್ ಕಾರ್ಯ ಕಡ್ಡಾಯವಾಗಿ ಮುಗಿಸುವಂತೆ ಆಯುಕ್ತ ಮನೀಶ್ ಮುದ್ಗಲ್‌ ಅವರು ಜಿಲ್ಲಾಧಿಕಾರಿಗಳಿಗೆ, ತಹಶೀಲ್ದಾರ್‌ಗಳಿಗೆ ಸೂಚಿಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+