ಭದ್ರಾ ಡ್ಯಾಂನಿಂದ ತುಂಗಾಭದ್ರಕ್ಕೆ ನೀರು ಹರಿಸಲು ವಿರೋಧ: ಜನಪ್ರತಿನಿಧಿಗಳಿಗೆ ಎಚ್ಚರಿಕೆ ನೀಡಿದ ರೈತರು

ಭದ್ರಾ ಜಲಾಶಯದಿಂದ 7 ಟಿಎಂಸಿ ನೀರು ಕೊಟ್ಟರೆ ನಾವು ಬೆಳೆ ನಷ್ಟ ಅನುಭವಿಸಬೇಕಾಗುತ್ತದೆ. ಸರ್ಕಾರವೇನದರೂ ರಾಜಕಾರಣ ಮಾಡಿದರೆ ಮುಂದೆ ಆಗುವ ಅನಾಹುತಕ್ಕೆ ಜನಪ್ರತಿನಿಧಿಗಳೇ ಹೊಣಿಗಾರರಾಗಬೇಕಾಗುತ್ತದೆ ಎಂದು ರೈತರು ಎಚ್ಚರಿಕೆ ನೀಡಿದರು.

ದಾವಣಗೆರೆ, ಫೆಬ್ರವರಿ 27: ರಾಜ್ಯ ಸರ್ಕಾರವು ಯಾವುದೇ ಕಾರಣಕ್ಕೂ ಭದ್ರಾ ಜಲಾಶಯದಿಂದ ತುಂಗಭದ್ರಾ ಜಲಾಶಯಕ್ಕೆ 7 ಟಿಎಂಸಿ ನೀರು ಹರಿಸಬಾರದು ಎಂದು ಆಗ್ರಹಿಸಿ ಭಾರತೀಯ ರೈತ ಒಕ್ಕೂಟದ ನೇತೃತ್ವದಲ್ಲಿ ರೈತರು ಪ್ರತಿಭಟನಾ ಮೆರವಣಿಗೆ ನಡೆಸಿದರು.

ದಾವಣಗೆರೆ ನಗರದ ಹಳೆ ಪಿ.ಬಿ. ರಸ್ತೆಯ ಶ್ರೀಬೀರಲಿಂಗೇಶ್ವರ ದೇವಸ್ಥಾನದಿಂದ ಹೊರಟ ರೈತರು, ಉಪ ವಿಭಾಗಾಧಿಕಾರಿ ಕಚೇರಿಯವರೆಗೆ ಮೆರವಣಿಗೆ ನಡೆಸಿ ಉಪವಿಭಾಗಾಧಿಕಾರಿ ಕಚೇರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

Farmers Oppose To Divert Water From Bhadra Dam To Tungabhadra Dam

ಈ ವೇಳೆ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಹೆಚ್.ಆರ್. ಲಿಂಗರಾಜ್ ಶಾಮನೂರು ಮಾತನಾಡಿ "ತುಂಗಭದ್ರಾ ಜಲಾಶಯ ಭಾಗದ ಶಾಸಕರು, ಸಂಸದರು, ಜನ ಪ್ರತಿನಿಧಿಗಳು ತುಂಗಭದ್ರಾ ಜಲಾಶಯಕ್ಕೆ 7 ಟಿಎಂಸಿ ನೀರು ಹರಿಸಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ. ಸರ್ಕಾರದ ಮೂಲಕ ನೀರು ಹರಿಸುವ ಆದೇಶ ಹೊರಡಿಸಲು ಇನ್ನಿಲ್ಲದ ಒತ್ತಾಯ ತರುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಮತಗಳ ಪಡೆಯುವ ಗಿಮಿಕ್ ಗಾಗಿ ಈ ಕೆಲಸ ಮಾಡುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.

ಭದ್ರಾದಲ್ಲಿ ನೀರು 168 ಅಡಿ ಇದ್ದು, ಈಗ ರೈತರು ಭತ್ತ ನಾಟಿ ಮಾಡುತ್ತಿದ್ದಾರೆ. ಅಣೆಕಟ್ಟೆಯಲ್ಲಿ ಇರುವ ನೀರು ನಮ್ಮ ಬೆಳೆಗೆ ಮಾತ್ರವಿದೆ. ಇತ್ತ ಅಪ್ಪ‌ರ್ ಭದ್ರಾದವರು ನೀರು ಕೇಳುತ್ತಾರೆ. ನಮಗೆ ಸಂಬಂಧವಿಲ್ಲದ ತುಂಗಾಭದ್ರದವರು ಬೆಳೆಗೆ 7 ಟಿ.ಎಂ.ಸಿ ನೀರು ಕೇಳುತ್ತಾರೆ. 7 ಟಿಎಂಸಿ ನೀರು ಕೊಟ್ಟರೆ ನಾವು ಬೆಳೆ ನಷ್ಟ ಅನುಭವಿಸಬೇಕಾಗುತ್ತದೆ. ಸರ್ಕಾರವೇನದರೂ ರಾಜಕಾರಣ ಮಾಡಿದರೆ ಮುಂದೆ ಆಗುವ ಅನಾಹುತಕ್ಕೆ ಜನಪ್ರತಿನಿಧಿಗಳೇ ಹೊಣಿಗಾರರಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

Farmers Oppose To Divert Water From Bhadra Dam To Tungabhadra Dam

ಜಿಲ್ಲೆಯ ಶಾಸಕರು, ಸಂಸದರು ಸೇರಿದಂತೆ ಪ್ರತಿಯೊಬ್ಬರೂ ಪಕ್ಷಭೇದ ಮರೆತು ರೈತರ ಹಿತದೃಷ್ಟಿಯಿಂದ ಸರ್ಕಾರಕ್ಕೆ ಒತ್ತಾಯಿಸಿ ಭದ್ರಾ ಡ್ಯಾಂ ನಿಂದ ಒಂದು ಹನಿ ನೀರು ಬಿಡದಂತೆ ನೋಡಿಕೊಳ್ಳಬೇಕು, ಇಲ್ಲದಿದ್ದರೆ ಮುಂದಿನ ಚುನಾವಣೆಯಲ್ಲಿ ಇದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಹೇಳಿದರು.

ಭದ್ರಾದ ಮೇಲೆಯೇ ಈಗ ಎಲ್ಲರ ಕಣ್ಣು ಬಿದ್ದಿದೆ. ಹಿಂದೆ ಭದ್ರಾದತ್ತ ಯಾರೂ ತಲೆ ಹಾಕುತ್ತಿರಲಿಲ್ಲ. ಭದ್ರಾ ಮೇಲ್ದಂಡೆ ಯೋಜನೆ ಇತರೆಡೆ ನೀರು ತೆಗೆದುಕೊಂಡು ಹೋಗಗುತ್ತಿದೆ. 2.5 ಲಕ್ಷ ಎಕರೆ ಪ್ರದೇಶದಲ್ಲಿ ನೀರು ಹರಿಸಲು ಭದ್ರಾ ಜಲಾಶಯದ ವಿನ್ಯಾಸ ಮಾಡಲಾಗಿದೆ. ಇದೇ ರೀತಿಯಲ್ಲಿ ನೀರು ಹರಿಸುತ್ತಾ ಹೋದರೆ ಅಚ್ಚುಕಟ್ಟುದಾರರ ಸ್ಥಿತಿ ಅಭದ್ರ ವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಎಚ್. ಗಣೇಶಪ್ಪ, ಆರ್. ಶಿವಕುಮಾರ್, ಜೆ.ಕೆ. ಕೊಟ್ರಬಸಪ್ಪ, ಎ.ಬಿ. ಕರಿಬಸಪ್ಪ, ಎಂ. ಹನುಮಂತಪ್ಪ, ಜೆ. ಮಹೇಶ್ವರಪ್ಪ, ಎಸ್. ನಾಗರಾಜರಾವ್ ,ಉಜ್ಜಣ್ಣ,ಗುರುನಾಥ್ಎ.ಎಂ ಮಂಜುನಾಥ್, ಪುನೀತ್,ಶಿವಪ್ಪ, ಬಿ.ಸತ್ಯನಾರಾಯಣ ಮೂರ್ತಿ ಮತ್ತಿತರರು ಪಾಲ್ಗೊಂಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+