ಅತಿಯಾದ ಸಾಲ: ವಿಧಾನಸೌಧ ಬಳಿ ರೈತ ಆತ್ಮಹತ್ಯೆಗೆ ಯತ್ನ
ಬೆಂಗಳೂರು, ಜೂನ್ 30: ರೈತರ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ, ನಿರೀಕ್ಷಿಸಿದ ಬೆಳೆಯನ್ನು ಪಡೆಯಲಾಗದೆ ಮಾಡಿರುವ ಸಾಲವನ್ನೂ ತೀರಿಸಲಾಗದೆ ರೈತರು ಕಂಗಾಲಾಗಿದ್ದಾರೆ. ಈ ಹೊತ್ತಿನಲ್ಲಿ ರೈತರೊಬ್ಬರಿಗೆ ಲಕ್ಷಾಂತರ ಹಣ ಮೋಸಮಾಡಿರುವ ಕಾರಣ ಮನನೊಂದ ರೈತರೊಬ್ಬರು ವಿಧಾನಸೌಧದೆದುರೇ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಶನಿವಾರ ನಡೆದಿದೆ.
ಸಾಲಬಾಧೆ ತಾಳಲಾರದೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನ ಜಾಲಹಳ್ಳಿ ನಿವಾಸಿ ಗಂಗಾದರ್ ವಿಧಾನಸೌಧದ ಎದುರೇ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಬೆಂಗಳೂರಿನ ವಿಧಾನಸೌಧ ಕೆಂಗಲ್ ಗೇಟ್ ದ್ವಾರದ ಬಳಿ ವಿಷ ಸೇವಿಸಿರುವ ಗಂಗಾಧರ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಬೆಂಗಳೂರಿನ ಶಿವಪ್ಪ ಎಂಬುವರಿಂದ ಮೋಸ ಹೋಗಿದ್ದಾರೆಂದು ತಿಳಿದುಬಂದಿದ್ದು, ನ್ಯಾಯ ಕೊಡಿಸುವಂತೆ ಅಗ್ರಹಿಸಿ ವಿಷ ಸೇವನೆ ಮಾಡಿದ್ದಾರೆ. ಅವರನ್ನು ತಕ್ಷಣ ಮಲ್ಲಿಗೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದುಬಂದಿದೆ.












Click it and Unblock the Notifications