ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಗದು ಪುರಸ್ಕಾರ ಬೇಡ; ನಿವೇಶನ ಕೊಡಿ: ಮಹಿಳಾ ಕ್ರಿಕೆಟರ್ ಮನವಿ

ನನಗೆ ನಿವೇಶನ ನೀಡಿ ಎಂದು ಸರ್ಕಾರವನ್ನು ಕೋರಿದ ಮಹಿಳಾ ಕ್ರಿಕೆಟರ್ ರಾಜೇಶ್ವರಿ ಗಾಯಕ್ವಾಡ್. ರಾಜ್ಯ ಮಹಿಳಾ ಕ್ರಿಕೆಟ್ ಆಟಗಾರ್ತಿ ರಾಜೇಶ್ವರಿ ಗಾಯಕ್ವಾಡ್.

ವಿಜಯಪುರ, ಆಗಸ್ಟ್ 16: ಇತ್ತೀಚೆಗಷ್ಟೇ ನಡೆದಿದ್ದ ಮಹಿಳಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಮಿಂಚಿನ ಪ್ರದರ್ಶನ ನೀಡಿದ್ದ ಕರ್ನಾಟಕದ ರಾಜೇಶ್ವರಿ ಗಾಯಕ್ವಾಡ್, ತಮ್ಮ ಸಾಧನೆಗೆ ಕಾರು, ನಗದು ಕೊಡಲು ಮುಂದಾಗಿರುವ ರಾಜ್ಯ ಸರ್ಕಾರ, ತನಗೊಂದು ನಿವೇಶನ ಕೊಟ್ಟರೆ ಸಾಕೆಂದು ಮನವಿ ಸಲ್ಲಿಸಿದ ಪ್ರಸಂಗ ನಡೆದಿದೆ.

ಬೆಳಗಾವಿಗೆ ಅಟಪಟ್ಟು ಮಾರ್ಗದರ್ಶಿ, ವೇದಾ ರಾಯಭಾರಿಬೆಳಗಾವಿಗೆ ಅಟಪಟ್ಟು ಮಾರ್ಗದರ್ಶಿ, ವೇದಾ ರಾಯಭಾರಿ

ಸ್ವಾತಂತ್ರ್ಯೋತ್ಸವದ ನಿಮಿತ್ತ ಬುಧವಾರ (ಆಗಸ್ಟ್ 15) ನಡೆದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜೇಶ್ವರಿಯನ್ನು ಸರ್ಕಾರದ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ್ ಅವರು, ರಾಜೇಶ್ವರಿಯವರಿಗೆ ಸರ್ಕಾರದಿಂದ 5 ಲಕ್ಷ ರು. ಬಹುಮಾನ ನೀಡುವ ಭರವಸೆಯನ್ನು ನೀಡಿದರು.

Rajeshwari Gayakwad requests governement to sanction a site in Vijayapura

ಪಾಟೀಲ್ ಅವರ ಮಾತಿನ ನಂತರ, ಮಾತನಾಡಲು ಎದ್ದು ನಿಂತ ರಾಜೇಶ್ವರಿ, ತಮ್ಮ ಮನೆಯಲ್ಲಿ ಒಬ್ಬ ತಾಯಿ, ತಂಗಿ ಹಾಗೂ ತಮ್ಮಂದಿರು ಇದ್ದು, ನಿಲ್ಲಲು ಒಂದು ಗಟ್ಟಿಯಾದ ಸೂರು ಇಲ್ಲ. ಹಾಗಾಗಿ, ತಮಗೆ ನಿವೇಶನವೊಂದನ್ನು ನೀಡುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸಚಿವರು, ತಕ್ಷಣವೇ ಈ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾರಮ್ಯ ಮೆರೆದರೂ, ನಮ್ಮ ದೇಶದ ಕ್ರೀಡಾಳುಗಳು ಇರುವ ಅಸಲಿ ಪರಿಸ್ಥಿತಿಯನ್ನು ಎತ್ತಿ ತೋರಿಸುವಂತಿತ್ತು ರಾಜೇಶ್ವರಿ ಅವರ ಈ ಪ್ರಸಂಗ.

Story first published: Wednesday, January 3, 2018, 10:05 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X