ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲುಬಿಲ್ಲದ ನಾಲಿಗೆಯ ಅಭಿಜಿತ್‌ಗೆ ಟ್ವಿಟ್ಟಿಗರ ತಿರುಗುಬಾಣ

By Prasad
|
Google Oneindia Kannada News

ಮುಂಬೈ, ಮೇ. 6 : "ಚಿತ್ರರಂಗದ ಸ್ನೇಹಿತರೇ, ಆಷಾಢಭೂತಿತನ ಬಿಟ್ಟು ಧೈರ್ಯವಾಗಿ ಬಂದು ಸಲ್ಮಾನ್ ಖಾನ್ ರನ್ನು ಬೆಂಬಲಿಸಿ. ಪಾದಚಾರಿ ರಸ್ತೆಗಳಿರುವುದು ಮಲಗುವುದಕ್ಕಲ್ಲ, (ಯಾರಾದರೂ ಸತ್ತರೆ) ಡ್ರೈವರ್ ತಪ್ಪೂ ಅಲ್ಲ, ಅಲ್ಕೋಹಾಲ್ ತಪ್ಪೂ ಅಲ್ಲ..." ಅಂತ ಟ್ವೀಟ್ ಮಾಡಿರುವ ಹಿಂದಿ ಚಿತ್ರರಂಗದ ಗಾಯಕ ಅಭಿಜಿತ್ ತಾನೆಂಥ ಮನುಷ್ಯ ಎಂಬುದನ್ನು ಘಂಟಾಘೋಷವಾಗಿ ಸಾರಿದ್ದಾನೆ.

ಗಳಿಸಿದ್ದನ್ನೆಲ್ಲಾ ತಿಂದು, ಕುಡಿದು ಮಜಾ ಉಡಾಯಿಸುವುದರಲ್ಲಿ ಕಾಲ ಕಳೆಯುವ ಅಭಿಜಿತ್ ಭಟ್ಟಾಚಾರ್ಯನಂಥ ಆಷಾಢಭೂತಿಗಳಿಗೆ ಬಡವರ ಕಷ್ಟ ಅರ್ಥವಾಗುವುದಾದರೂ ಎಲ್ಲಿ? ಸೂರಿಲ್ಲದವರು, ನಿರ್ಗತಿಕರು ಮುಂಬೈನಲ್ಲಿ ಎಷ್ಟಿದ್ದಾರೆ, ಅವರು ಜೀವನವನ್ನೆಲ್ಲ ಎಲ್ಲಿ ಕಳೆಯುತ್ತಾರೆ ಎಂಬುದು ಇವರಿಗೆ ತಿಳಿಯದ ವಿಷಯವೇನಲ್ಲ.

ಬಡವರು ಫುಟ್ ಪಾತ್ ಮೇಲೆ ಮಲಗುವುದೇ ತಪ್ಪು ಎಂದು ಟ್ವೀಟ್ ಮಾಡಿ ಟ್ವಿಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದ್ದಾನೆ ಅಭಿಜಿತ್. ಅಷ್ಟೇ ಅಲ್ಲ, "ಆತ್ಮಹತ್ಯೆ ಮಾಡಿಕೊಳ್ಳುವುದು ಅಪರಾಧವಾದರೆ, ಫುಟ್ ಪಾತ್ ಮೇಲೆ ಮಲಗುವುದೂ ಕೂಡ ಅಪರಾಧವೆ. ಶೇ.80ರಷ್ಟು ಫಿಲ್ಮ್ ಮಂದಿ ಸ್ಟಾರ್ ಆಗುವ ಮೊದಲು ಕಷ್ಟಪಟ್ಟಿದ್ದಾರೆ, ಆದರೆ ಅವರೇನು ಫುಟ್ ಪಾತ್ ಮೇಲೆ ಮಲಗಿಲ್ಲ" ಎಂದು ಅಭಿಜಿತ್ ನಾಲಿಗೆ ಹರಿಯಬಿಟ್ಟಿದ್ದಾನೆ.

ಯಾವುದೋ ಸ್ಟಾರ್ ಜೈಲು ಪಾಲಾಗುವ ಸಂದರ್ಭ ಬಂದರೆ, ವಸ್ತುಸ್ಥಿತಿ ಏನಿದೆ, ಆತ ಮಾಡಿದ್ದು ಸರಿಯೋ ತಪ್ಪೋ ಎನ್ನುವುದರ ವಿಶ್ಲೇಷಣೆ ಕೂಡ ಮಾಡದೆ, ಅಂಥ 'ಕ್ರಿಮಿನಲ್'ಗಳ ಬೆಂಬಲಕ್ಕೆ ಧಾವಿಸುವ ಬಾಲಿವುಡ್ ತಾರೆಗಳಿಗೆ ಲೆಕ್ಕವೇ ಇಲ್ಲ. ಸಂಜಯ್ ದತ್, ಶೈನಿ ಆಹುಜಾ ಜೈಲು ಪಾಲಾದ ಸಂದರ್ಭದಲ್ಲಿಯೂ 'ಹಿಂಗಾಗಬಾರದಿತ್ತು' ಅಂತ ಗಳಗಳನೆ ಕಣ್ಣೀರು ಹರಿಸಿದವರ ಸಂಖ್ಯೆ ಅಪಾರವಿತ್ತು.

ಕೆಂಡಾಮಂಡಲವಾದ ಟ್ವಿಟ್ಟಿಗರು

ಕೆಂಡಾಮಂಡಲವಾದ ಟ್ವಿಟ್ಟಿಗರು

ಅಭಿಜಿತ್ ಟ್ವೀಟ್ ನೋಡುತ್ತಿದ್ದಂತೆ ಟ್ವಿಟ್ಟಿಗರು ಕೆಂಡಾಮಂಡಲವಾಗಿದ್ದಾರೆ. ಅಭಿಜಿತ್ ಮತ್ತೆ ಶಾಲೆಗೆ ಹೋಗಿ, ಯಾವ ರೀತಿ ಮಾತಾಡಬೇಕೆಂದು ಕಲಿತು ಬರಲಿ ಎಂದು ಸಿಟ್ಟು, ವ್ಯಂಗ್ಯ ಭರಿತ ಟ್ವೀಟ್ ಬಾಣಗಳನ್ನು ಅಭಿಜಿತ್ ಮೇಲೆ ಬಿಡುತ್ತಿದ್ದಾರೆ. ಈ ಯಾವ ಬಾಣಗಳೂ ಅಭಿಜಿತ್ ನಂಥ ದಪ್ಪ ಚರ್ಮದ ಕಲಾವಿದರಿಗೆ ನಾಟವುದಿಲ್ಲ ಎಂಬುದು ಬೇರೆ ಮಾತು.

ಅಭಿಮಾನಿಗಳನ್ನು ಕಳೆದುಕೊಂಡಿದ್ದೀ ಅಭಿಜಿತ್, ಶೇಮ್

ನಾಚಿಕೆಗೇಡಿನ ಟ್ವೀಟ್ ಮಾಡಿ ಸಾವಿರಾರು ಅಭಿಮಾನಿಗಳನ್ನು ಕಳೆದುಕೊಂಡಿದ್ದೀ ಅಭಿಜಿತ್, ಶೇಮ್ ಶೇಮ್

ನಾಯಿ ಇದ್ದರೆ ಅದಕ್ಕೆ ಅಭಿಜಿತ್ ಅಂತ ಹೆಸರಿಡಿ

ನಿಮ್ಮ ಬಳಿ ನಾಯಿ ಇದ್ದರೆ ಅದಕ್ಕೆ ಅಭಿಜಿತ್ ಅಂತ ಹೆಸರಿಡಿ. ರೋನಿ, ಸೀಸರ್ ಎಂಬೆಲ್ಲ ಹೆಸರಿಡಬೇಡಿ. (ನಾಯಿಗಳಿಗೆ ಅಭಿಜಿತ್ ಹೆಸರಿಟ್ಟರೆ ಅದಕ್ಕೇ ಅವಮಾನ ಮಾಡಿದಂತೆ)

ಅಮ್ಮನೂ ಅಭಿಗೆ ಛೀಥೂ ಅನ್ನುತ್ತಾಳೆ

ಅಭಿಜಿತ್ ನನ್ನ ಕ್ಲಾಸ್ ಮೇಟಾಗಿದ್ದ ಅಂತ ನನ್ನ ಅಮ್ಮ ಇನ್ನು ಯಾವತ್ತೂ ಹೇಳುವುದಿಲ್ಲ.

ಆತನ ಬಗೆಗಿದ್ದ ಎಲ್ಲ ಗೌರವವೂ ಮಣ್ಣುಪಾಲಾಗಿದೆ

ಅಭಿಜಿತ್ ಇಂಥ ಮೂರ್ಖನೆಂದು ಗೊತ್ತಿರಲಿಲ್ಲ. ಆತನ ಟ್ವೀಟ್ ನೋಡಿ ಆತನ ಬಗೆಗಿದ್ದ ಎಲ್ಲ ಗೌರವವೂ ಮಣ್ಣುಪಾಲಾಗಿದೆ.

ಆಹಾಹಾ ಅಭಿಜಿತ್, ಫರಾಹ್ ಖಾನ್ ಅಲಿ

ಒಂದೇ ಹೊಡೆತದಲ್ಲಿ (ಟ್ವೀಟ್ ನಲ್ಲಿ) ಸಲ್ಮಾನ್ ಬಗ್ಗೆ ಉಂಟಾಗಿದ್ದ ಅನುಕಂಪವನ್ನು ಅಭಿಜಿತ್ ಮತ್ತು ಫರಾಹ್ ಖಾನ್ ಅಲಿ ಅಳಿದುಹೋಗುವಂತೆ ಮಾಡಿದ್ದಾರೆ.

ಆತನನ್ನು ನಾಯಿಗಿಂತ ಕಡೆಯಾಗಿ ನೋಡುತ್ತಾರೆ

ರಸ್ತೆ ಬದಿ ಮಲುಗುವ ಜನರನ್ನು ನಾಯಿ ಎಂದು ಅಭಿಜಿತ್ ಕರೆದರೆ, ದೇಶದ ಜನರು ಕೂಡ ಆತನನ್ನು ನಾಯಿಗಿಂತ ಕಡೆಯಾಗಿ ನೋಡುತ್ತಾರೆ.

ಆತ ಬಳಸುವ ಪದ ಕಿವಿಗೆ ಸಂಗೀತದಂತೆ ಕೇಳುವುದಿಲ್ಲ

ಥ್ಯಾಂಕ್ ಗಾಡ್, ಅಭಿಜಿತ್ ಬೇರೆಯವರು ಬರೆಯುತ್ತಿದ್ದ ಸಾಹಿತ್ಯವನ್ನು ಹಾಡುತ್ತಿದ್ದ. ಇಲ್ಲದಿದ್ದರೆ, ಆತ ಬಳಸುವ ಪದಗಳು ಕಿವಿಗೆ ಸಂಗೀತದಂತೆ ಕೇಳುವುದಿಲ್ಲ.

English summary
Bollywood singer Abhijeet has raked up controversy by tweeting footpaths are not meant for sleeping and drivers and alcohol should not be held responsible for the deaths. He has tweeted in support of Salman Khan who has been sentenced to 5 years jail in 2002 hit and run case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X