ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್ಎಸ್ಎಲ್ ಸಿ ಫಲಿತಾಂಶಪ್ರಕಟ, 3 ಗಂಟೆಗೆ ಆನ್ಲೈನಲ್ಲಿ ಲಭ್ಯ

2017ನೇ ಸಾಲಿನ ಎಸ್‌ಎಸ್ಎಲ್ ಸಿ ಫಲಿತಾಂಶ ಪ್ರಕಟಗೊಂಡಿದೆ. ಈ ಬಾರಿ ಶೇ ಫಲಿತಾಂಶ ಬಂದಿದೆ. ಶುಕ್ರವಾರದಿಂದ ಆನ್‌ಲೈನ್‌ನಲ್ಲಿ ಮಧ್ಯಾಹ್ನ 3 ಗಂಟೆಯಿಂದ ಫಲಿತಾಂಶ ಲಭ್ಯವಿದೆ

By Mahesh
|
Google Oneindia Kannada News

ಬೆಂಗಳೂರು, ಮೇ 12: 2017ನೇ ಸಾಲಿನ ಎಸ್‌ಎಸ್ಎಲ್ ಸಿ ಫಲಿತಾಂಶ ಪ್ರಕಟಗೊಂಡಿದೆ. ಈ ಬಾರಿ ಶೇ 67.87 ಫಲಿತಾಂಶ ಬಂದಿದೆ. ಶುಕ್ರವಾರದಿಂದ ಆನ್‌ಲೈನ್‌ನಲ್ಲಿ ಮಧ್ಯಾಹ್ನ 3 ಗಂಟೆಯಿಂದ ಫಲಿತಾಂಶ ಲಭ್ಯವಿದೆ. ಈ ಬಾರಿ ಕೂಡಾ ಬಾಲಕಿಯರು ಮೇಲುಗೈ ಪಡೆದಿದ್ದಾರೆ.

ಭಾನುವಾರ ಬೆಳಗ್ಗೆ 10 ಗಂಟೆಗೆ ಶಾಲೆಗಳಲ್ಲಿ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ. ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಎಸ್ಎಸ್ಎಲ್ ಸಿ ಬೋರ್ಡ್‌ ಕಚೇರಿಯಲ್ಲಿ ಫಲಿತಾಂಶವನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ತನ್ವೀರ್ ಸೇಠ್ ಶುಕ್ರವಾರಮಧ್ಯಾಹ್ನ ಪ್ರಕಟಿಸಿದರು. [ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ, ಈಗ ಲಭ್ಯ]

ಸುದ್ದಿಗೋಷ್ಠಿ ಮುಖ್ಯಾಂಶಗಳು:
* 924 ಶಾಲೆಗಳು ನೂರಕ್ಕೆ ನೂರು ಫಲಿತಾಂಶ ಬಂದಿದೆ.
* ಉಡುಪಿ ಮೊದಲ ಸ್ಥಾನ, ಬೀದರ್ ಕೊನೆ ಸ್ಥಾನ ಪಡೆದಿದೆ. ಉಳಿದಂತೆ, ಚಿಕ್ಕೋಡಿ ಮೂರನೇ ಸ್ಥಾನ, ಶಿರಸಿ ನಾಲ್ಕನೇ ಸ್ಥಾನ, ಉತ್ತರಕನ್ನಡ ಐದನೇ ಸ್ಥಾನದಲ್ಲಿದೆ. [SSLC ಫಲಿತಾಂಶ : ಉಡುಪಿಗೆ ಮೊದಲ ಸ್ಥಾನ, ಬೀದರ್ ಗೆ ಕೊನೆ ಸ್ಥಾನ]

Now Online : Karnataka SSLC Exam results 2017

ಎಸ್‌ಎಸ್‌ಎಲ್‌ಸಿ ಫಲಿತಾಂಶ ಈ ವೆಬ್ ಸೈಟ್‌ಗಳಲ್ಲಿ ಲಭ್ಯವಿದೆ.
http://www.karresults.nic.in
http://examresults.net

* 625/625 ಪಡೆದವರು ಮೂರು ಜನ, 624/625 ಪಡೆಯವರು 6 ಜನ, 623/625 ಪಡೆದವರು 13 ಜನ ವಿದ್ಯಾರ್ಥಿಗಳಿದ್ದಾರೆ.[ಜಿಲ್ಲಾವಾರು ಫಲಿತಾಂಶ: ಉಡುಪಿ ಫಸ್ಟ್ , ಬೀದರ್ ಲಾಸ್ಟ್]
* ಜೂನ್ 15 ರಿಂದ 26ರ ತನಕ ಪೂರಕ(ಸಪ್ಲಿಮೆಂಟರಿ) ಪರೀಕ್ಷೆ ನಡೆಯಲಿದೆ.
* ಮಾರ್ಚ್ 30ರಿಂದ ಏಪ್ರಿಲ್ 12ರವರೆಗೆ ನಡೆದ ಎಲ್ಲಾ ವಿಷಯಗಳ ಪರೀಕ್ಷೆಗಳು ಯಶಸ್ವಿಯಾಗಿ ನಡೆಸಲಾಯಿತು.
* ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಬಾಕಿ ಉಳಿದ ಶಿಕ್ಷಕರ ಹುದ್ದೆಗಳಿಗೆ ನೇಮಕ, ಆರ್ ಟಿಐ ಕಾಯ್ದೆ ಪ್ರಕಾರ 1: 13ರಂತೆ 10000 ಅಧ್ಯಾಪಕರ ನೇಮಕ.

English summary
Education Minister Tanveer Sait today (May 12) announced SSLC board examination 2017 results. Karnataka Secondary education Examination Board (KSEEB) conducted exam March 30 -April 12, 2017
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X