ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಸರಗೋಡಿನ ಕನ್ನಡದ ಗಟ್ಟಿದನಿ ಕಯ್ಯಾರ ಕಿಞ್ಞಣ್ಣ ರೈ ಅಸ್ತಂಗತ

By Mahesh
|
Google Oneindia Kannada News

ಕಾಸರಗೋಡು, ಆಗಸ್ಟ್ 09: ಸ್ವಾತಂತ್ರ್ಯ ಹೋರಾಟಗಾರ, ಕವಿ, ಕಾಸರಗೋಡು ವಿಲೀನೀಕರಣ ಕ್ರಿಯಾಸಮಿತಿಯ ಪ್ರಧಾನ ಸಂಚಾಲಕ ಗಡಿ ನಾಡಲ್ಲಿ ಕನ್ನಡದ ಗಟ್ಟಿದನಿಯಾಗಿದ್ದ 101 ವರ್ಷದ ಹಿರಿಯ ಚೇತನ ಕಯ್ಯಾರ ಕಿಞ್ಞಣ್ಣ ರೈ ಅವರು ಭಾನುವಾರ ಬದಿಯಡ್ಕದ ತಮ್ಮ ಮನೆಯಲ್ಲಿ ಕೊನೆಯುಸಿರೆಳೆದರು.

ಕಯ್ಯಾರ ಕಿಞ್ಞಣ್ಣ ರೈ ಅಖಿಲ ಮಹಾಕವಿ, ಸಾಹಿತಿ, ಬಹುಭಾಷಾ ವಿದ್ವಾಂಸ, ಸ್ವಾತಂತ್ರ್ಯ ಹೋರಾಟಗಾರ, ಕರ್ನಾಟಕ ಏಕೀಕರಣ ಚಳುವಳಿಯ ನಾಯಕ, ಕಾಸರಗೋಡು ವಿಲೀನೀಕರಣ ಕ್ರಿಯಾಸಮಿತಿಯ ಪ್ರಧಾನ ಸಂಚಾಲಕರಾಗಿ ಸದಾಕಾಲ ಸ್ಮರಣೀಯರು.

ರೈಗಳ ಕನಸು ನನಸಾಗಲಿಲ್ಲ: ರಾಜ್ಯ ಗುರುತಿಸುವಿಕೆಯು ಭಾಷಾವಾರು ಆದ್ಯತೆಯ ಮೇಲೆ ಸರಿಯಾಗಿ ಆಗಿಲ್ಲ. ತುಳುನಾಡು ಕರ್ನಾಟಕದ ಭಾಗ ಎಂಬ ಮಹಾಜನ ಆಯೋಗ ವರದಿಗೆ ಯಾವುದೇ ಪುಷ್ಟಿ ದೊರೆತಿಲ್ಲ. ಕಾಸರಗೋಡು ಕನ್ನಡನಾಡಿಗೆ ಸೇರಿದರೆ ಅದೇ ನನ್ನ ಸಿಗುವ ದೊಡ್ಡ ಬಹುಮಾನ ಎಂದು ಹೇಳುತ್ತಿದ್ದ ರೈಗಳು ಈಗ ನೆನಪು ಮಾತ್ರ.[ಗಡಿನಾಡಿನ ಕಿಡಿ ಕಯ್ಯಾರ]

Kayyara rai

ತುಂಬು ಕುಟುಂಬದ ಸಂಸಾರಿ : ಕಾಸರಗೋಡಿನ ಪೆರಡಾಲ ಹಳ್ಳಿಯಲ್ಲಿ ದುಗ್ಗಪ್ಪ ರೈ ಮತ್ತು ದೇಯ್ಯಕ್ಕ ರೈ ದಂಪತಿಗಳಿಗೆ 1915ರ ಜೂನ್ 8 ರಂದು ಜನಿಸಿದ ರೈಗಳ ಮನೆ ಮಾತು ತುಳು. ಆದರ, ಕನ್ನಡ, ತುಳು, ಮಲೆಯಾಳಂ, ಸಂಸ್ಕೃತ ಬಲ್ಲವರಾಗಿದ್ದರು. ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಅವರನ್ನು ಗುರುವಿನಂತೆ ಕಾಣುತ್ತಿದ್ದರು. [ಕಯ್ಯಾರ ನೂರರ ಸಂಭ್ರಮ]

ಪತ್ನಿ ಉಞ್ಞಕ್ಕ ಮತ್ತು ಎಂಟು ಮಕ್ಕಳ ಸುಖೀ ಸಂಸಾರವನ್ನು ಬದಿಯಡ್ಕ ಪೆರಡಾಲ "ಕವಿತಾ ಕುಟೀರ"ದಲ್ಲಿ ಕಳೆದವರು. ನವಜೀವನ ಹೈಸ್ಕೂಲಿನ ಶಿಕ್ಷಕರಾಗಿದ್ದ ಕಯ್ಯಾರರು ಪ್ರವೃತ್ತಿಯಲ್ಲಿ ಪತ್ರಿಕೋದ್ಯಮಿಯಾಗಿ ಕೂಡಾ ಕೊಡುಗೆ ಸಲ್ಲಿಸಿದ್ದಾರೆ. ಕಾಸರಗೋಡಿನ ಬಳಿಯ ಪೆರಡಾಲ ಗ್ರಾಮದ ನವಜೀವನ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು.

ಸಾಹಿತಿಯಾಗಿ ರೈಗಳು: ದುಡಿತವೆ ನನ್ನ ದೇವರು ಎನ್ನುವದು ರೈಯವರ ಆತ್ಮಕಥನ. 'ಕಯ್ಯಾರ ಕಿಞ್ಞಣ್ಣ ರೈ'ಯವರು ಶ್ರೀಮುಖ, ಐಕ್ಯಗಾನ, ಪುನರ್ನವ, ಚೇತನ, ಕೊರಗ, ಶತಮಾನದ ಗಾನ, ಗಂಧವತಿ, ಪ್ರತಿಭಾ ಪಯಸ್ವಿನಿ, ಮೊದಲಾದ ಕನ್ನಡ ಕವನ ಸಂಕಲನಗಳನ್ನಲ್ಲದೆ ಒಂದು ತುಳು ಕವನ ಸಂಕಲನವನ್ನೂ ಹೊರ ತಂದಿದ್ದರು.

ರೈಯವರಿಗೆ 'ಶ್ರೇಷ್ಠ ಅಧ್ಯಾಪಕ ರಾಷ್ಟ್ರಪ್ರಶಸ್ತಿ, ಹಂಪಿ ವಿಶ್ವವಿದ್ಯಾಲಯದ, 'ನಾಡೋಜ'ಪ್ರಶಸ್ತಿ, 66 ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಸುವರ್ಣ ಕರ್ನಾಟಕ ಏಕೀಕರಣ ಪ್ರಶಸ್ತಿ, ಪಂಪ ಪ್ರಶಸ್ತಿ ಗಳಿಸಿದ್ದರು.

English summary
Freedom Fight Kannada Poet Kayyara Kinhanna Rai passed away today (Aug 09) at his home Badiyadka, Kasaragod district.He was 101. Rai had been a campaigner for the merger of Kasaragod district into Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X