Get Updates
Get notified of breaking news, exclusive insights, and must-see stories!

'ಆಕಸ್ಮಿಕ ಪಿಎಂ' ಎಂಎಂ ಸಿಂಗ್ ಪಾತ್ರದಲ್ಲಿ ಅನುಪಮ್ ಖೇರ್

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಪಾತ್ರದಲ್ಲಿ ನಟ ಅನುಪಮ್ ಖೇರ್ ಅವರು ಕಾಣಿಸಿಕೊಳ್ಳುವುದು ಖಾತ್ರಿಯಾಗಿದೆ. 2019ರ ಲೋಕಸಭೆ ಚುನಾವಣೆಗೂ ಕೆಲ ತಿಂಗಳುಗಳ ಮೊದಲು ಚಿತ್ರ ರಿಲೀಸ್ ಆಗುವ ಸಾಧ್ಯತೆಯಿದೆ.

ನವದೆಹಲಿ, ಜೂನ್ 06: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಜೀವನ ಕುರಿತ ಚಿತ್ರ ನಿರ್ಮಾಣ ಹಂತದಲ್ಲಿರುವುದು ತಿಳಿದಿರಬಹುದು. ಈಗ ಚಿತ್ರದ ಮುಖ್ಯಪಾತ್ರಧಾರಿ, ಚಿತ್ರ ರಿಲೀಸ್ ಡೇಟ್ ಬಗ್ಗೆ ಮಾಹಿತಿ ಹೊರಬಂದಿದೆ.

ಮುಖ್ಯ ಪಾತ್ರದಲ್ಲಿ ನಟ ಅನುಪಮ್ ಖೇರ್ ಅವರು ಕಾಣಿಸಿಕೊಳ್ಳುವುದು ಖಾತ್ರಿಯಾಗಿದೆ. 2019ರ ಲೋಕಸಭೆ ಚುನಾವಣೆಗೂ ಕೆಲ ತಿಂಗಳುಗಳ ಮೊದಲು ಚಿತ್ರ ರಿಲೀಸ್ ಆಗುವ ಸಾಧ್ಯತೆಯಿದೆ.2017ರ ವೇಳೆಗೆ ಚಿತ್ರ ಬಿಡುಗಡೆಯಾಗುವ ನಿರೀಕ್ಷೆಯಿತ್ತು.[ಮಾಜಿ ಪ್ರಧಾನಿ ಸಿಂಗ್ ಟ್ರಾವೆಲ್ ಶೀಟ್ ಬಹಿರಂಗ]

Anupam Kher to Play Manmohan Singh The Accidental Prime Minister Baru book
'ಭಾರತದ ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರಿಗೆ ಪ್ರಧಾನಿ ಪಟ್ಟ ಬಯಸದೇ ಬಂದ ಭಾಗ್ಯ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವನ್ನು ಮುನ್ನಡೆಸುವ ಅವಕಾಶ ಸಿಗುತ್ತದೆ ಎಂಬುದು ಅವರಿಗೆ ಹಿಂದಿನ ದಿನದವರೆಗೂ ತಿಳಿದಿರಲಿಲ್ಲ' ಸಂಜಯ್ ಬರು ಬರೆದಿರುವ ಪುಸ್ತಕದ ಸಾಲುಗಳು ಈಗ ಸಿನಿಮಾವೊಂದರ ಡೈಲಾಗ್ ಆಗಲಿದೆ. 'ಆಕಸ್ಮಿಕವಾಗಿ ಪಿಎಂ' ಆದ ಎಂಎಂ ಸಿಂಗ್ ಕಥೆ ಬೆಳ್ಳಿತೆರೆಯ ಮೇಲೆ ಬರಲಿದೆ.

ಮನಮೋಹನ್ ಸಿಂಗ್ ಆಡಳಿತಾವಧಿ 2004 ರಿಂದ 2008 ರವರೆಗೆ ಅವರ ಮಾಧ್ಯಮ ಸಲಹೆಗಾರರಾಗಿದ್ದ ಸಂಜಯ್ ಬರು ಅವರ 'ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್ : ಮೇಕಿಂಗ್ ಆಂಡ್ ಅನ್​ವೆುೕಕಿಂಗ್ ಆಫ್ ಮನಮೋಹನ್ ಸಿಂಗ್' ಎಂಬ ಕಾದಂಬರಿ ಕಮ್ ಜೀವನಚರಿತ್ರೆ ಈಗಾಗಲೇ ಸಾಕಷ್ಟು ಸದ್ದು ಮಾಡಿದೆ. ಈಗ ಇದೇ ಪುಸ್ತಕ ಆಧಾರಿತ ಚಿತ್ರ ನಿರ್ಮಾಣ ಹಂತದಲ್ಲಿದೆ.

ಮನಮೋಹನ್​ಸಿಂಗ್ ಹೇಗೆ ಕಾಂಗ್ರೆಸ್ ಯುಪಿಎ ಸರ್ಕಾರದ ಕೈಗೊಂಬೆಯಾಗಿದ್ದರು, ಮಾಜಿ ಪ್ರಧಾನಿ ಪಿವಿ ನರಸಿಂಹ ರಾವ್ ಅವರಿಗೆ ಸರ್ಕಾರಿ ಗೌರವದಿಂದ ಅಂತ್ಯಸಂಸ್ಕಾರ ನಡೆಸಲಿಲ್ಲ ಏಕೆ? ಸೇರಿದಂತೆ ಅನೇಕ ಅಂಶಗಳು ಚಿತ್ರಿತವಾಗಲಿವೆ. ಈ ಚಿತ್ರವು 12 ಕ್ಕೂ ಹೆಚ್ಚು ಭಾಷೆಯಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಚಿತ್ರ ನಿರ್ಮಾಣ ಮಾಡುತ್ತಿರುವ ಸುನಿಲ್ ಬೊಹ್ರಾ ಮತ್ತು ತಂಡದವರು ಎಕಾನಾಮಿಕ್ಸ್ ಟೈಮ್ಸ್ ಗೆ ತಿಳಿಸಿದ್ದಾರೆ.

ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಪಾತ್ರವನ್ನು ಯಾರು ನಿರ್ವಹಿಸಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ವಿಜಯ್ ರತ್ನಾಕರ್ ಅವರು ನಿರ್ದೇಶನ ಮಾಡುತ್ತಿದ್ದು, ರಾಷ್ಟ್ರ ಪ್ರಶಸ್ತಿ ವಿಜೇತ ಹನ್ಸಲ್ ಮೆಹ್ತಾ ಅವರು ಚಿತ್ರಕಥೆ ಬರೆದಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+