ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಜಿ ಪ್ರಧಾನಿ ಸಿಂಗ್ ಟ್ರಾವೆಲ್ ಶೀಟ್ ಬಹಿರಂಗ

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಏ.29: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ತಮ್ಮ ಆಡಳಿತ ಅವಧಿಯಲ್ಲಿ ಸುಮಾರು 73 ಫಾರೀನ್ ಟೂರ್ ಹೊಡೆದಿದ್ದಾರೆ. ಅದರಲ್ಲೂ ಯುಎಸ್ ಅವರ ಮೆಚ್ಚಿನ ತಾಣವಾಗಿತ್ತು ಎಂದು ಆರ್ ಟಿಐ ಮೂಲಕ ತಿಳಿದು ಬಂದಿದೆ. ಮನಮೋಹನ್ ಸಿಂಗ್ ಟ್ರಾವೆಲ್/ಟ್ರಿಪ್ ಶೀಟ್ ಖರ್ಚು ವೆಚ್ಚದ ಲೆಕ್ಕಾಚಾರ ಎಲ್ಲಾ ಇಲ್ಲಿದೆ.

ಯುಪಿಎ ಆಡಳಿತ ಅವಧಿಯ ಹತ್ತು ವರ್ಷಗಳಲ್ಲಿ ಮನಮೋಹನ್ ಸಿಂಗ್ ಅವರು ಸುಮಾರು 6,76,74,33,477 rರು ಖರ್ಚು ಮಾಡಿದ್ದಾರೆ ಎಂದು ಆರ್ ಟಿಐ ಮೂಲಕ ರಮೇಶ್ ಚಂದ್ ಜೋಶಿ, ಅಧ್ಯಕ್ಷರು ರಾಷ್ಟ್ರ ರಕ್ಷಕ್ ಜನಮಂಚ್ ಬಹಿರಂಗ ಪಡಿಸಿದ್ದಾರೆ.

ಸಂಸತ್ತಿನಲ್ಲಿ ಅಧಿವೇಶನ ನಡೆಯುವಾಗಲೇ ವಿದೇಶಿ ಪ್ರವಾಸ ಮಾಡಿದ ಉದಾಹರಣೆಗಳಿವೆ. ಎರಡನೇ ಅವಧಿಯಲ್ಲಿ 36 ಟ್ರಿಪ್ ಗಳ ಪೈಕಿ 15 ಟ್ರಿಪ್ ಗಳು ಅಧಿವೇಶನದ ಅವಧಿಯಲ್ಲೇ ನಡೆದಿದೆ.

ಟ್ರಿಪ್ ಶೀಟ್
ಆರ್ ಟಿಐ ಮಾಹಿತಿ ಮೂಲಕ ಬಹಿರಂಗವಾದ ಟ್ರಿಪ್ ಶೀಟ್ ವಿವರವನ್ನು ಪ್ರಧಾನಿ ಸಚಿವಾಲಯ ನೀಡಿದೆ. ಒಟ್ಟಾರೆ 6,76,74,33,477 ರು ಬಳಸಿಕೊಂಡು ವಿದೇಶಿಯಾನ ಮಾಡಿದ್ದಾರೆ. 73 ವಿದೇಶಿ ಪ್ರಯಾಣಗಳನ್ನು 22 ಮೇ 2004 ರಿಂದ 17 ಮೇ 2014ರ ತನಕದ ವಿವರ ಇಲ್ಲಿದೆ...

ಯುಪಿಎ ಎರಡನೇ ಅವಧಿ ಪ್ರಯಾಣ ವಿವರ

ಯುಪಿಎ ಎರಡನೇ ಅವಧಿ ಪ್ರಯಾಣ ವಿವರ

ಯುಪಿಎ II ಅವಧಿಯಲ್ಲಿ 36 ಬಾರಿ ವಿದೇಶಕ್ಕೆ ಹಾರಿದ್ದ ಮನ ಮೋಹನ್ ಸಿಂಗ್ ಅವರು ಸಂಸತ್ತಿನ ಅಧಿವೇಶನಕ್ಕೆ ಗೈರು ಹಾಜರಾಗಿದ್ದರು. ಈ ಸಮಯದಲ್ಲಿ 'ಅನಿವಾಸಿ ಪ್ರಧಾನಿ' ಎಂದು ವಿಪಕ್ಷಗಳು ಕರೆದಿದ್ದನ್ನು ಸ್ಮರಿಸಬಹುದು. ಸಂಸತ್ತಿನಲ್ಲಿ ಅಧಿವೇಶನ ನಡೆಯುವಾಗ ಪ್ರಧಾನ ಮಂತ್ರಿ ಈ ರೀತಿ ವಿದೇಶಕ್ಕೆ ಹಾರಿದ್ದು ಇದೇ ಮೊದಲಾಗಿತ್ತು.

ಸುಮಾರು 65 ವಿದೇಶಿ ಯಾತ್ರೆ ಬಿಲ್ ಸಿಕ್ಕಿದೆ

ಸುಮಾರು 65 ವಿದೇಶಿ ಯಾತ್ರೆ ಬಿಲ್ ಸಿಕ್ಕಿದೆ

ಇಲ್ಲಿ ತನಕ ಸುಮಾರು 65 ವಿದೇಶಿ ಯಾತ್ರೆ ವಿವರಗಳು ಲಭ್ಯವಾಗಿದೆ .ಇನ್ನೂ 8 ಟ್ರಿಪ್ ಗಳ ವಿವರವನ್ನು ಪ್ರಧಾನಿ ಸಚಿವಾಲಯ ನೀಡಲಿದೆ. ಸುಮಾರು 670 ಕೋಟಿ ರು ಇದಕ್ಕಾಗಿ ವ್ಯಯಿಸಲಾಗಿದೆ ಎಂದು ಟ್ರಿಪ್ ಶೀಟ್ ಸಾರುತ್ತಿದೆ.

ಅಮೆರಿಕ- ಸಿಂಗ್ ಅವರ ಮೆಚ್ಚಿನ ತಾಣ

ಅಮೆರಿಕ- ಸಿಂಗ್ ಅವರ ಮೆಚ್ಚಿನ ತಾಣ

ಯುನೈಟೆಡ್ ಸ್ಟೇಟ್ ಆಫ್ ಅಮೆರಿಕಕ್ಕೆ ಆರು ಬಾರಿ ಹಾರಿದ್ದರು. ಇದೇ ಸಂದರ್ಭದಲ್ಲಿ ಇಂಡೋ ಯುಎಸ್ ಅಣ್ವಸ್ತ್ರ ಡೀಲ್ ಕುದುರಿಸಲಾಯಿತು. ನೆರೆ ರಾಷ್ಟ್ರಗಳಾದ ಪಾಕಿಸ್ತಾನ, ಅಫ್ಘಾನಿಸ್ತಾನ್, ಚೀನಾ ಹಾಗೂ ಶ್ರೀಲಂಕಾಕ್ಕೆ ನೀಡಿದ ಭೇಟಿಗೆ ಹೋಲಿಸಿದರೆ ಯುಎಸ್ ಭೇಟಿ ಸಿಂಗ್ ಹೆಚ್ಚಿನ ಮಹತ್ವ ನೀಡಿದ್ದರು ಎಂದು ತಿಳಿದು ಬರುತ್ತದೆ

ಏಳು ದಿನದ ಪ್ರವಾಸಕ್ಕೆ 26.94 ಕೋಟಿ ರು

ಏಳು ದಿನದ ಪ್ರವಾಸಕ್ಕೆ 26.94 ಕೋಟಿ ರು

2012ರಲ್ಲಿ ಬ್ರೆಜಿಲ್ ಹಾಗೂ ಮೆಕ್ಸಿಕೋಕ್ಕೆ 7ದಿನಗಳ ಕಾಲ ಪ್ರವಾಸ ಮಾಡಿದ್ದ ಮನ್ ಮೋಹನ್ ಸಿಂಗ್ ಅವರು 26.94 ಕೋಟಿ ರು ವ್ಯಯ ಮಾಡಿದ್ದರು. ಇದಕ್ಕೂ ಮುನ್ನ 2010ರಲ್ಲಿ ಬ್ರೆಜಿಲ್ ಹಾಗೂ ಯುಎಸ್ಎ ಪ್ರವಾಸಕ್ಕೆ 22.7ಕೋಟಿ ರು. ಖರ್ಚು ಮಾಡಿದ್ದರು.

ವಾಜಪೇಯಿ ಖರ್ಚು ಮಾಡಿದ್ದೆಷ್ಟು?

ವಾಜಪೇಯಿ ಖರ್ಚು ಮಾಡಿದ್ದೆಷ್ಟು?

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು 1999 ರಿಂದ 2004ರ ಅವಧಿಯಲ್ಲಿ 35 ಬಾರಿ ವಿದೇಶಿ ಯಾತ್ರೆ ಮಾಡಿದ್ದರು. 185 ಕೋಟಿ ರು ಖರ್ಚಾಗಿತ್ತು.

English summary
Rs 6,76,74,33,477 was the cost what the nation incurred during the 73 foreign trips that Dr Manmohan Singh made as Prime Minister. The figure which was provided by the Prime Minister's Officer following an RTI query filed by Ramesh Chand Joshi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X