ಮಂಗಳಯಾನ ನಂತರ ಇಸ್ರೋದಿಂದ ಮತ್ತೊಂದು ಮೈಲಿಗಲ್ಲು
ಚೆನ್ನೈ, ಮಾ.29: ಮಂಗಳಯಾನದ ಯಶಸ್ಸಿನ ನಂತರ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ(ಇಸ್ರೋ) ಮತ್ತೊಂದು ಮೈಲಿಗಲ್ಲು ದಾಟಿದೆ. ಅಮೆರಿಕದ ಜಿಪಿಎಸ್ ಗೆ ಸೆಡ್ಡು ಹೊಡೆಯಬಲ್ಲ ದೇಶಿ ತಂತ್ರಜ್ಞಾನದ ದಿಕ್ಸೂಚಿ ಉಪಗ್ರಹವನ್ನು ಸುರಕ್ಷಿತವಾಗಿ ಕಕ್ಷೆಗೆ ಸೇರಿಸಲಾಗಿದೆ.
ಅಮೆರಿಕದ ಜಿಪಿಎಸ್ ಜೊತೆಗೆ ಭಾರತದ ಐಆರ್ ಎನ್ ಎಸ್ಎಸ್ 1-ಡಿ ಹೋಲಿಕೆ ಮಾಡಿ ಪ್ರಶ್ನೆ ಕೇಳಿದಾಗ ಇಸ್ರೋ ಅಧ್ಯಕ್ಷ ಕನ್ನಡಿಗ ಕೆಎಸ್ ಕಿರಣ್ ಕುಮಾರ್ ಅವರು ಉತ್ತರಿಸಿದ್ದು ಹೀಗೆ: The globe comes later, the country comes first. [ಜಿಪಿಎಸ್ ತಂತ್ರಜ್ಞಾನದಲ್ಲಿ ಭಾರತ ಆಗಲಿದೆ ಸಾರ್ವಭೌಮ]
ಐಆರ್ ಎನ್ ಎಸ್ಎಸ್ 1-ಡಿ ಯನ್ನು ಪಿಎಸ್ ಎಲ್ ವಿ ಸಿ -27 ಮೂಲಕ ಕಕ್ಷೆಗೆ ತಲುಪಿಸುವ ಮೂಲಕ ದೇಶಿ ತಂತ್ರಜ್ಞರು ಹೆಮ್ಮೆಯಿಂದ ಸಂಭ್ರಮಪಟ್ಟಿದ್ದಾರೆ. ಅದರೆ, ಈ ದಿಕ್ಸೂಚಿ ಯೋಜನೆ ಪೂರ್ಣಗೊಳ್ಳಲು ಈ ಸರಣಿಯ ಇನ್ನೂ ಮೂರು ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾಯಿಸಬೇಕಿದೆ.

ಸುಮಾರು 1,420 ಕೋಟಿ ರು ವೆಚ್ಚದ ಐಆರ್ ಎನ್ ಎಸ್ಎಸ್ ಯೋಜನೆ ಈ ವರ್ಷಾಂತ್ಯಕ್ಕೆ ಪೂರ್ಣಗೊಳಿಸಲಾಗುವುದು. ಶನಿವಾರ(ಮಾ.28, 2015) ಉಡಾವಣೆಗೂ ಮುನ್ನ ಜುಲೈ1, 2013, ಏ.4 2014 ಹಾಗೂ ಅ.16, 2014ರಂದು ಯಶಸ್ವಿಯಾಗಿ ಉಪಗ್ರಹಗಳು ಕಕ್ಷೆ ಸೇರಿವೆ.
Launch of satellite IRNSS-1D is yet another manifestation of the exemplary efforts & utmost brilliance of our scientists. Congrats to them.
— Narendra Modi (@narendramodi) March 28, 2015 ವೆಹಿಕಲ್ ಟ್ರಾಫಿಕಿಂಗ್, ನೌಕೆಗಳ ಪಥ ನಿರ್ವಹಣೆ, ಪ್ರಯಾಣಿಕರಿಗೆ ಮಾರ್ಗ ಸೂಚಿ, ಚಾಲಕರಿಗೆ ದಿಕ್ಸೂಚಿ, ಗಡಿ ಮತ್ತು ಸಾಗರ ದಿಕ್ಸೂಚಿ ಹೀಗೆ ಅಮೆರಿಕದ ಜಿಪಿಎಸ್ ತಂತ್ರಜ್ಞಾನ ನೀಡುವ ಎಲ್ಲಾ ಸೌಲಭ್ಯಗಳನ್ನು ನಮ್ಮ ಉಪಗ್ರಹದ ಮೂಲಕ ಪಡೆದುಕೊಳ್ಳಬಹುದು. ಈ ಮೂಲಕ ಅಮೆರಿಕದ ತಂತ್ರಜ್ಞಾನದ ಮೇಲೆ ಅವಲಂಬನೆ ತಪ್ಪಿಸಬಹುದು ಎಂದು ಇಸ್ರೋ ಪ್ರಕಟಿಸಿದೆ. ಇಸ್ರೋ ವಿಜ್ಞಾನಿಗಳ ಈ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವಾರು ಗಣ್ಯರು ಶುಭ ಹಾರೈಸಿದ್ದಾರೆ.












Click it and Unblock the Notifications