ಮಹಿಳಾ ಸುರಕ್ಷತೆಗೆ ಬಂತು ಹೊಸ ಆಪ್, ಏನಿದರ ವಿಶೇಷ?
ಬೆಂಗಳೂರು, ಸೆಪ್ಟೆಂಬರ್. 22: ಮಹಿಳೆಯರ ಸುರಕ್ಷತೆ ಇಂದಿನ ಆದ್ಯತೆಗಳಲ್ಲಿ ಮುಖ್ಯವಾದ ಸ್ಥಾನ ಪಡೆದುಕೊಂಡಿದೆ. ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣ, ಲೈಂಗಿಕ ಶೋಷಣೆ ಎಲ್ಲದಕ್ಕೂ ಸುಲಭವಾಗಿ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ.
ತಂತ್ರಜ್ಞಾನವನ್ನು ಬಳಸಿಕೊಂಡು ಬೆಂಗಳೂರಿನವರೇ ಆದ ಶ್ರೀ ಹರಿ ಕಾರಂತ್ ಸಹೋದರರು ಎಂಬುವರು ಮೊಬೈಲ್ ಅಪ್ಲಿಕೇಶನ್ ವೊಂದನ್ನು ಸಿದ್ಧಪಡಿಸಿದ್ದಾರೆ. ಇದರ ಜತೆಗೆ ಮೊಬೈಲ್ ಸೆಫ್ಟಿ, ಕಳ್ಳತನ ತಡೆ ಅಪ್ಲಿಕೇಶನ್ ಗಳನ್ನು ಸಿದ್ಧ ಮಾಡಿ ತೋರಿಸಿದ್ದಾರೆ.[ಬೆಂಗಳೂರಿನಲ್ಲಿ ನಿಮ್ಮ ಕೆಲಸ ಹುಡುಕಾಟ ಇಂದೇ ಅಂತ್ಯ]

ಅತಿ ಸರಳವಾಗಿ ಕೆಲಸ ಮಾಡುವ ಮಹಿಳಾ ಸುರಕ್ಷತೆಯ ಅಪ್ಲಿಕೇಶನ್ ಕಾರ್ಯವಿಧಾನವನ್ನು ನೋಡೋಣ...
ಹೆಣ್ಣು ಮಕ್ಕಳು ಅಪಾಯದಲ್ಲಿ ಸಿಲುಕಿಕೊಂಡಿದ್ದರೆ ಶೀಘ್ರವಾಗಿ ನೆರವಿಗೆ ಧಾವಿಸಲು ಅಪ್ಲಿಕೇಶನ್ ನೆರವಾಗುತ್ತದೆ. ಒಂದು ವೇಳೆ ದುರದೃಷ್ಟವಶಾತ್ ಅವಘಡ ಸಂಭವಿಸಿದರೆ ಅಪರಾಧಿಗಳನ್ನು ಹಿಡಿಯಲು ಇದು ನೆರವಾಗುತ್ತದೆ.
ಅಪ್ಲಿಕೇಶನ್ ಅಭಿವೃದ್ಧಿಪಡಿಸಿರುವ TrackMyPhones.comನ ಮಹಿಳಾ ಸುರಕ್ಷಾ ಅಪ್ಲಿಕೇಶನ್ ನಿಮ್ಮ(ಬಳಕೆ ಮಾಡುವವರ) ಸ್ನೇಹಿತರು ಮತ್ತು ಕುಟುಂಬ ಸದಸ್ಯರನ್ನು, ನಿಮ್ಮ ಸ್ಥಳವನ್ನು ಗುರುತಿಸುತ್ತದೆ. ಅಲ್ಲದೇ ಎರಡು ಕಡೆಯ ಕ್ಯಾಮರಾಗಳು 30 ಸೆಕೆಂಡ್ ನಿಂದ 2 ನಿಮಿಷದ ವರೆಗೆ ಆಡಿಯೋ ಮತ್ತು ವಿಡಿಯೋ ಎರಡನ್ನು ಸೆರೆ ಹಿಡಿಯಬಹುದು. ಅದು ಕೇವಲ ಒಂದೇ ಒಂದು ಬಟನ್ ಪ್ರೆಸ್ ಮಾಡುವುದರಿಂದ! [ಫೇಸ್ ಬುಕ್ ಓಪನ್ ಮಾಡಲು ಡಾಟಾ ಪ್ಯಾಕ್ ಹಂಗಿಲ್ಲ]

ಹೇಗೆ ಕೆಲಸ ಮಾಡುತ್ತದೆ?
ಅಪ್ಲಿಕೇಶನ್ ನ್ನು ಅಳವಡಿಸಿಕೊಂಡ ನಂತರ ಕುಟುಂಬ ಸದಸ್ಯರು ಮತ್ತು ಸ್ನೇಹಿತರ ಮೊಬೈಲ್ ಸಂಖ್ಯೆ ಮತ್ತು ಇ ಮೇಲೆ ಐಡಿ ದಾಖಲು ಮಾಡಬೇಕು. ಈ ಎಲ್ಲ ಸಂಖ್ಯೆಗಳಿಗೆ ಅಪಾಯದಲ್ಲಿದ್ದಾಗ ಸಂದೇಶ ತಲುಪುತ್ತದೆ. ಕೆಂಪು, ಕಿತ್ತಳೆ ಮತ್ತು ಹಸಿರು ಬಣ್ಣದ ಬಟನ್ ಗಳ ಮೂಲಕ ಸಂದೇಶ ರವಾನೆ ಮಾಡಬಹುದು.
ಡಾಟಾ ಪ್ಯಾಕ್ ಕಡ್ಡಾಯ
ಈ ಸೌಲಭ್ಯ ಬಳಕೆ ಮಾಡಿಕೊಳ್ಳಲು ಡಾಟಾ ಪ್ಯಾಕ್ ಕಡ್ಡಾಯ. ಇಂಟರ್ ನೆಟ್ ಪ್ಯಾಕ್ ಇದ್ದರೆ ಮಾತ್ರ ಸಂದೇಶ ಕಳುಹಿಸಲು ಸಾಧ್ಯವಿದೆ.
ಕೆಂಪು: ಈ ಆಯ್ಕೆಯ ಮೂಲಕ ನೀವು ಇರುವ ಸ್ಥಳ, ಸುತ್ತಲ ಚಿತ್ರಣ, ಆಡಿಯೋ-ವಿಡಿಯೋ ಕಳುಹಿಸಲು ಸಾಧ್ಯವಿದೆ. ನಿಮಗೆ ಅಪಾಯ ಎದುರಾದ ತಕ್ಷಣ ಕೆಂಪು ಬಟನ್ ಪ್ರೇಸ್ ಮಾಡಿದರೆ ಎಲ್ಲ ಮಾಹಿತಿ ಮೊದಲು ದಾಖಲು ಮಾಡಿಕೊಂಡಿದ್ದ ನಂಬರ್ ಮತ್ತು ಇ ಮೇಲ್ ಗೆ ಕ್ಷಣಮಾತ್ರದಲ್ಲಿ ತಲುಪುತ್ತದೆ.
ಹಳದಿ: ಈ ಆಯ್ಕೆಯ ಮೂಲಕ ನೀವಿರುವ ಸ್ಥಳದ ಮಾಹಿತಿಯನ್ನು ಮತ್ತು ಸುತ್ತಮುತ್ತಲಿನ ಪರಿಸರದ ಬಗ್ಗೆ ಸಂದೇಶ ರವಾನೆ ಮಾಡಲು ಸಾಧ್ಯವಿದೆ.
ಹಸಿರು: ಹಸಿರು ಬಣ್ಣ ಎಲ್ಲವೂ ಸರಿಯಾಗಿದೆ ಎಂಬ ಮಾಹಿತಿ ತಲುಪಿಸುತ್ತದೆ. ನೀವು ಎಲ್ಲಿಗಾದರೂ ತಲುಪುವರಿದ್ದರೆ ತಲುಪಿದ ತಕ್ಷಣ ಈ ಆಯ್ಕೆ ಬಳಸಿಕೊಳ್ಳಬಹುದು.
ಸುಲಭ ಮತ್ತು ಸರಳವಾದ ಆಂಡ್ರ್ಯಾಡ್ ಅಪ್ಲಿಕೇಶನ್ ಬಳಕೆ ಮಾಡಿಕೊಳ್ಳುವುದರ ಮೂಲಕ ನೀವು ಮತ್ತು ನಿಮ್ಮ ಪ್ರೀತಿ ಪಾತ್ರರ ಸುರಕ್ಷತೆಯನ್ನು ಕಾಪಾಡಬಹುದು. ಸಲಹೆ ಸೂಚನೆಗಳಿದ್ದರೆ [email protected] ಗೆ ಇಮೇಲ್ ಮುಖಾಂತರ ತಿಳಿಸಬಹುದು.
ಅಪ್ಲಿಕೇಶನ್ ಡೌನ್ ಲೋಡ್ ಮಾಡಿಕೊಳ್ಳಿ
-
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
ಉದ್ಯೋಗ ಸಂದರ್ಶನ ಮಾಡಲು ಹೋದ CEOಗೆ ಬೆವರಿಳಿಸಿದ ಅಭ್ಯರ್ಥಿ, Viral ಆಯ್ತು ವಿಚಿತ್ರ ಕಥೆ -
Summer Camp: ನಟನ ಮೈಸೂರು ಸಂಸ್ಥೆಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ 'ರಜಾಮಜಾ' ಆಯೋಜನೆ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ -
Sri Rama Navami 2026: ಶ್ರೀ ರಾಮನವಮಿ; ಧರ್ಮದ ಜಯದ ದಿವ್ಯ ಸಂದೇಶ












Click it and Unblock the Notifications