Get Updates
Get notified of breaking news, exclusive insights, and must-see stories!

ಸಂದರ್ಶನ: ಹುಟ್ಟುಹಬ್ಬದ ಸಂಭ್ರಮದಲ್ಲಿ ಕವಿ ಸುಬ್ರಾಯ ಚೊಕ್ಕಾಡಿ

ನಾಡಿನ ಪ್ರಸಿದ್ಧ ಕವಿ, ವಿಮರ್ಶಕ, ನಾಟಕಕಾರ ಸುಬ್ರಾಯ ಚೊಕ್ಕಾಡಿ ಅವರಿಂದು 76 ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಜೂನ್ 29, 1940ರಲ್ಲಿ ಸುಳ್ಯ ತಾಲೂಕಿನ ಕುಗ್ರಾಮ ಚೊಕ್ಕಾಡಿ ಎಂಬಲ್ಲಿ ಜನಿಸಿ. ಚೊಕ್ಕಾಡಿ ಎಂಬ ಪುಟ್ಟ ಹಳ್ಳಿಯನ್ನು ಸಾಹಿತ್ಯದ ನಕ್ಷೆಯಲ್ಲಿ ತೋರಿಸಿದ ಹಿರಿಮೆ ಇವರದು.

ತಂದೆ ಗಣಪಯ್ಯ ಯಕ್ಷಗಾನ ಭಾಗವತರು ಮತ್ತು ತಾಯಿ ಸುಬ್ಬಮ್ಮ. ವೃತ್ತಿಯಲ್ಲಿ ಅಧ್ಯಾಪಕರಾಗಿ 39 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಪ್ರವೃತ್ತಿಯಲ್ಲಿ ಸಾಹಿತ್ಯದ ಜೊತೆಗೆ ಕೃಷಿಕನಾಗಿರುವ ಇವರು. ನಾಡು ಕಂಡ ಅತ್ಯಂತ ಸರಳ ಜೀವಿ. ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿರುವ ಇವರ ಸಂದರ್ಶನ ನಿಮಗಾಗಿ....

* ನಿಮ್ಮ ಕಾವ್ಯ ಜಗತ್ತು ವಿಸ್ತಾರವಾದುದು ಅದರ ಆರಂಭ, ಪ್ರೇರಣೆ ಕುರಿತು....
ನನಗೆ ಕವನ ಬರೆಯೋದಕ್ಕೆ ಪ್ರೇರಣೆ ಯಾರು ಅಂತ ಹೇಳೋದು ಕಷ್ಟ ಆದರೂ ಈ ಸಂಧರ್ಭದಲ್ಲಿ ಏನು ಹೇಳಕ್ಕೆ ಇಷ್ಟ ಪಡ್ತೀನಿ ಅಂದ್ರೆ ಈ ಸಮಾಜದ ವಾತಾವರಣದಲ್ಲಿ ಜೊತೆಗೆ ಹೋಗುವಂತದ್ದು ಆಗ ಏನು ಎಂಬ ಪ್ರಶ್ನೆ! ಅದಕ್ಕೆ ಕವಿತೆ ಬರೆಯಲು ಶುರು ಮಾಡಿದೆ. ಕವಿತೆ ಬರೆಯುವ ಮೂಲವಸ್ತು ಯಾವುದೆಂದರೆ ಕಾಣುವ ಮೌನ ಇಲ್ಲದಿದ್ದರೆ ಕವಿತೆ ಹುಟ್ಟುವುದಿಲ್ಲ. ನಮ್ಮ ಮನೆಯಲ್ಲಿ ಸಾಹಿತ್ಯದ ವಾತಾವರಣ ಇತ್ತು. ತಂದೆ ಯಕ್ಷಗಾನ ಭಾಗವತರು. ಅವರೇ ಯಕ್ಷಗಾನ ಪ್ರಸಂಗಗಳನ್ನು ಬರೆಯುತ್ತಿದ್ದರು.

Subbraya Chokkadi

* ಸಾಹಿತ್ಯವಲ್ಲದೆ ನಾಟಕದಲ್ಲೂ ನಿಮಗೆ ಪರಿಣಿತಿ ಇತ್ತಂತೆ.....
ನಾಟಕ, ಅಭಿನಯ ತಂಡದೊಂದಿಗೆ ನಾನು ನನ್ನ ತಮ್ಮ ಹೋಗುತ್ತಿದ್ದೆವು( ತಮ್ಮ ಲಕ್ಷೀಶ ಚೊಕ್ಕಾಡಿ) ಸಂಗೀತ ಕೇಳುವುದೆಂದರೆ ಬಹಳ ಇಷ್ಟ. ಫೊಟೋಗ್ರಫಿ ಕೆಲಸದಲ್ಲಿ ಆಸಕ್ತಿ ಇತ್ತು. ಈಗ ಬಿಟ್ಟೆ ಯಾಕೆಂದರೆ ಬಡತನದಲ್ಲಿ ಇದ್ದ ಕಾರಣ ಇಂತಹ ಕೆಲಸಗಳಿಗೆ ಖರ್ಚು ಅಧಿಕವಾಗ್ತಿತ್ತು. ಆದರೆ ತೇಜಸ್ವಿ ಅವರ ಹಾಗೆ ಹೋಗುವ ಮತ್ತು ಫೋಟೋ ತೆಗೆಯಲು ಆಸೆ ಇದ್ದಿದ್ದು ನಿಜ. ಜೊತೆಗೆ ಚಿತ್ರಕಲೆಯೂ ಆಸಕ್ತಿ ಇತ್ತು.

ಈಗ ಉಳಿದಿರುವುದು ಮಾತ್ರ , ಕಾರಣ ಅತ್ಯಂತ ಕಡಿಮೆ ವೆಚ್ಚದಲ್ಲಿ, ಒಂದು ಕವನ ಬರೆಯಲು ಒಂದು ರೂಪಾಯಿ ಪೆನ್ನು ಸಾಕು. ಸಾಹಿತ್ಯ ಕ್ಷೇತ್ರದಲ್ಲಿ ಇರುವವನಿಗೆ ಒಂದೇ ಆಸಕ್ತಿ ಇದ್ದರೆ ಸಾಧ್ಯ ಇಲ್ಲ ಹಲವು ರೀತಿಯ ವಿಚಾರಗಳ ಬಗ್ಗೆ ಆಸಕ್ತಿ ಇರಬೇಕು. ಆ ಕಾಲದಲ್ಲಿ ನಾನು ಚಂದಮಾಮದಿಂದ ಹಿಡಿದು ಪಂಪ, ರನ್ನ ರಂತವರ ಕಾವ್ಯವನ್ನು ಓದುತ್ತಿದ್ದೆ.

Subbraya Chokkadi

*ಸಾಹಿತ್ಯ ಸಂಸ್ಕೃತಿ ಕುರಿತು ನಿಮ್ಮ ಕಾಲದಲ್ಲಿ ಇದ್ದಷ್ಟು ಈಗ ಉಮೇದು ಇಲ್ಲ ಅನ್ನಿಸುತ್ತದೆ....
ಈಗಿನ ಯುವಕರು , ಬರಹಗಾರರು ಓದುವುದು ಕಡಿಮೆ , ಅಧ್ಯಯನ ಕಡಿಮೆ, ನಮಗೆಲ್ಲ ಹಳೆಯ ಕಾಲದ ರನ್ನ , ಪಂಪ ಕುಮಾರವ್ಯಾಸರ ಕಾಲದಿಂದ ಹಿಡಿದು ಲಂಕೇಶ್ , ತೇಜಸ್ವಿ, ಕುವೆಂಪು ಅವರ ಎಲ್ಲಾ ಕೃತಿಗಳ ಬಗ್ಗೆ ಗೊತ್ತು. ಈಗಿನ ಯುವ ಸಾಹಿತಿಗಳ ಕವಿತೆ ಲಯ ಇಲ್ಲ, ಬರಿಯ ವಿಚಾರ ತುಂಬಿದರೆ ಪಂದ್ಯ ಆಗುವುದಿಲ್ಲ. ಬರೀ ಉಪದೇಶಕ್ಕೆ ಸಾಲುಗಳಲ್ಲ. ವಿಶೇಷ ಅನುಭವವನ್ನು ಕಲಾಭಿಮಾನವನ್ನು ಬರೆಯುವುದು ಬಹಳ ಕಡಿಮೆ ಮತ್ತು ಓದೋದು ಕಡಿಮೆ.

ಹಿಂದೆ ನಾನು ಓದುತ್ತಿದ್ದ ಯಾವ ಪತ್ರಿಕೆಗಳಲ್ಲೂ ಕವಿತೆ ಪ್ರಕಟ ಆಗುತ್ತಿರಲ್ಲಿಲ್ಲ. ನಮಗೆ ಅವಕಾಶ ಇರುಲಿಲ್ಲ. ವರ್ಷಕ್ಕೆ ಒಂದು ದೀಪಾವಳಿ ವಿಶೇಷಾಂಕದಲ್ಲಿ ಬಂದರೆ ಅದೇ ದೊಡ್ಡ ಪ್ರೋತ್ಸಾಹ ಎಂದು ತಿಳಿಯಬೇಕು. ಆದರೆ ಇಂದಿನ ಯುವ ಸಾಹಿತಿಗಖ ಚಿಕ್ಕಪುಟ್ಟ ಲೇಖನ ಪ್ರಕಟ ಆದ ಕೂಡಲೇ ಅವರಲ್ಲಿ ನಾವೇ ಗ್ರೇಟ್ ಎಂಬ ಎನ್ನುವ ಅಹಂಕಾರ ಬೆಳೆಯುತ್ತದೆ.

Subbraya Chokkadi

ಆದರೆ ಅದು ಪ್ರೋತ್ಸಾಹ ಎಂದು ತಿಳಿದುಕೊಳ್ಳುವುದಿಲ್ಲ. ಪತ್ರಿಕೆಗಳು ಅಧ್ಯಯನದ ಕೊರತೆ, ಪ್ರಚಾರಕ್ಕೆ ಮನಸ್ಸು ಕೊಡಬಾರದು. ಕವಿ ಕವಿತೆ ಮಾತ್ರ ಬರೆಯಬಾರದು. ಕವಿತೆ ಕಷ್ಟ ಅನ್ನಿಸಿದಾಗ ಬರೆಯಲು ಶುರು ಮಾಡಬೇಕು. ಹೀಗೇ ವರ್ಕ ಚೇಂಜ್ ಮಾಡಬೇಕು. ಆಗ ಸಾಹಿತ್ಯದ ಬಗೆಗೆ ಆಳವಾದ ಅಧ್ಯಯನ ಸಾಧ್ಯ.
*ನಿಮ್ಮ ಅಧ್ಯಾಪಕ ವೃತ್ತಿ ಜೀವನದ ಅನುಭವ ಹೇಗಿತ್ತು?
ಹೋ.....ಚೆನ್ನಾಗಿದೆ! ಟೀಚರ್ ಆಗುವ ಸಂತೋಷ ಯಾವುದರಲ್ಲೂ ಇರುವುದಿಲ್ಲ. ಸಣ್ಣ ಮಕ್ಕಳ ವ್ಯಕ್ತಿತ್ವವನ್ನು ಬೆಳೆಸುವವರು ಪ್ರಾಥಮಿಕ ಶಾಲೆಯ ಶಿಕ್ಷಕರು. ಇಲ್ಲಿ ಮಕ್ಕಳು ಮತ್ತು ಶಿಕ್ಷಕರ ಸಂಬಂಧ ತಂದೆ-ಮಕ್ಕಳ ಸಂಬಂಧ I Like children and love the children.. ನಿವೃತ್ತಿ ಹೊಂದಿದ ಬಳಿಕ ಮನೆಯ ಮಕ್ಕಳೊಂದಿಗೆ ಇದ್ದೇನೆ. ಮುಂದೆ ಓದಿ ...ಮುನಿಸುತರವೇ ಮುಗುದೆ ಬಗ್ಗೆ ಚೊಕ್ಕಾಡಿ ಹೇಳಿದ್ದೇನು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+