ಈದ್ ಕೊಡುಗೆ: ಇಸ್ಲಾಂ ವಿಶ್ವಕೋಶ ಪರಿಚಯ

Educational Encyclopedia of Islam ಎಂಬ ಹೊಸ ವಿಶ್ವಕೋಶವನ್ನು ಈಸ್ಟ್ ವೆಸ್ಟ್ ಶಿಕ್ಷಣ ಸಾಧನಗಳ ಅಡಿಯಲ್ಲಿ ಹೊರತರಲಾಗಿದೆ. ಕರ್ನಾಟಕ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಮಹಮ್ಮದ್ ಅನ್ವರ್ ಅವರು ಈ ವಿಶ್ವಕೋಶವನ್ನು ಇತ್ತೀಚೆಗೆ ಬಿಡುಗಡೆಗೊಳಿಸಿದ್ದಾರೆ.
ಈ ಗ್ರಂಥ ಇಸ್ಲಾಮಿನ ಚರಿತ್ರೆ ಅರಿಯಲು ಮತ್ತು ಈ ಧರ್ಮದ ಬಗ್ಗೆ ಪ್ರಚಲಿತವಿರುವ ತಪ್ಪು ಕಲ್ಪನೆಗಳನ್ನು ದೂರ ಮಾಡಲು ಪ್ರಯೋಜನವಾಗಲಿ ಎಂದು ಶುಭ ಹಾರೈಸಿದ್ದಾರೆ. 'ಯಂಗ್ ಮುಸ್ಲಿಂ ಡೈಜೆಸ್ಟ್" ಆಂಗ್ಲ ಮಾಸಿಕ ಪತ್ರಿಕೆಯ ಸಂಪಾದಕ ಸೈಯದ್ ಇಖ್ಬಾಲ್ ಝಹೀರ್ ಸಂಪಾದಿಸಿರುವ ಎರಡು ಸಂಪುಟಗಳ 1300 ಪುಟಗಳನ್ನು ಹೊಂದಿರುವ ಈ ನೂತನ ಎನ್‌ಸೈಕ್ಲೊಪೀಡಿಯಾ ಸಮಗ್ರ ಇಸ್ಲಾಮಿ ಚರಿತ್ರೆಯ ನಿಖರ ಮತ್ತು ವಸ್ತುನಿಷ್ಠ ಮಾಹಿತಿಯನ್ನು ಹೊಂದಿದೆ.
ಸಂಪಾದಕ ಇಖ್ಬಾಲ್ ಝಹೀರ್ ಸತತ 15 ವರ್ಷಗಳಿಂದ ಪರಿಶ್ರಮಪಟ್ಟು ಇದನ್ನು ಸಂಪಾದಿಸಿದ್ದಾರೆ. ಇದಕ್ಕಾಗಿ ದೇಶ-ವಿದೇಶಗಳ ಪ್ರವಾಸ ಕೈಗೊಂಡಿದ್ದ ಅವರು, ಇದರ ಸಂಪಾದನೆಗೆ ಒಟ್ಟು 1 ಕೋಟಿ ರೂ. ಖರ್ಚು ಮಾಡಿದ್ದಾರೆ ಎಂದು ಪ್ರಕಾಶಕರು ತಿಳಿಸಿದರು. ಇಸ್ಲಾಂ ವಿಶ್ವಕೋಶದ ಬೆಲೆ 125 USD ಎಂದು ನಿಗದಿಪಡಿಸಲಾಗಿದೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:
East West Educational Tools
Acc. No. 13002000000325,
HDFC Bank Ltd, Opposite Cole"s Park,
Frazer Town, Bangalore - 560005.












Click it and Unblock the Notifications