Home / Photos
1000 ದಿನಗಳನ್ನು ಪೂರೈಸುತ್ತಿದೆ ರಷ್ಯಾ & ಉಕ್ರೇನ್ ಭೀಕರ ಕಾಳಗ
By Malathesha M
ರಷ್ಯಾ & ಉಕ್ರೇನ್ ನಡುವೆ ಫೈಟಿಂಗ್ ಶುರುವಾಗಿ ಒಂದಲ್ಲ.. ಎರಡಲ್ಲ.. ಬರೋಬ್ಬರಿ 1000 ದಿನಗಳೇ ಕಂಪ್ಲೀಟ್ ಆಗಲಿದೆ. ಇಬ್ಬರ ನಡುವೆ ಬೆಂಕಿ ಹೊತ್ತಿಕೊಂಡ ನಂತರ ಒಂದೆರಡು ದಿನಗಳಲ್ಲಿ ಈ ಯುದ್ಧ ನಿಲ್ಲಲಿದೆ ಅಂತಾ ಎಲ್ಲರೂ ಅಂದುಕೊಂಡಿದ್ದರು. ಆದರೆ ಯುದ್ಧ ನೋಡ ನೋಡುತ್ತಲೇ ಬರೋಬ್ಬರಿ 1000 ದಿನಗಳನ್ನ ಪೂರೈಸಲು ಮುಂದೆ ನುಗ್ತಿದೆ.
1/6
Share
ಒಟ್ನಲ್ಲಿ 2022 ರಲ್ಲಿ ಶುರುವಾಗಿದ್ದ ರಷ್ಯಾ & ಉಕ್ರೇನ್ ವಾರ್ ಸದ್ಯಕ್ಕೆ ನಿಲ್ಲುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಇನ್ನಷ್ಟು ವಿನಾಶದ ಮುನ್ಸೂಚನೆ ಈ ಮೂಲಕ ಸಿಗುತ್ತಿದೆ. ಇನ್ನೊಂದು ಕಡೆ ಮಧ್ಯಪ್ರಾಚ್ಯ ಭಾಗದಲ್ಲೂ ಭೀಕರ ಯುದ್ಧಗಳು ಆರಂಭ ಆಗಿವೆ.
2/6
Share
ಅಲ್ಲದೆ ಈ ರೀತಿ ಯುದ್ಧ ಇನ್ನಷ್ಟು ಘೋರವಾಗಲಿದ್ದು, ಮುಂದಿನ ದಿನಗಳಲ್ಲಿ ಉಕ್ರೇನ್ ಸಂಪೂರ್ಣ ಬೀದಿಗೆ ಬೀಳುವ ಭಯ ಕೂಡ ಕಾಡುತ್ತಿದೆ. ಅಲ್ಲದೆ ಅಮೆರಿಕ & ನ್ಯಾಟೋ ಒಕ್ಕೂಟದ ದೇಶಗಳಿಂದ ಉಕ್ರೇನ್ ಇದೀಗ ಹೆಚ್ಚಿನ ಯುದ್ಧ ಸಹಾಯ ಬಯಸುತ್ತಿದೆ.
3/6
Share
ರಷ್ಯಾ & ಉಕ್ರೇನ್ ಯುದ್ಧದ ವಿಚಾರದಲ್ಲಿ ಮತ್ತೊಂದು ಗಂಭೀರ ಆರೋಪ ಕೂಡ ಇದ್ದು, ಈ ಆರೋಪದ ಪ್ರಕಾರ ರಷ್ಯಾ ಇದೀಗ ಉಕ್ರೇನ್ ವಿರುದ್ಧ ಬರೋಬ್ಬರಿ 10 ವರ್ಷಗಳ ಕಾಲ ಸುದೀರ್ಘ ಯುದ್ಧಕ್ಕೆ ಸಜ್ಜಾಗಿದೆ ಎಂಬ ಆರೋಪ ಕೇಳಿಬಂದಿದೆ. ಆದರೆ ರಷ್ಯಾ ಮಾತ್ರ ಈ ಆರೋಪಗಳನ್ನು ತಳ್ಳಿ ಹಾಕುತ್ತಿದ್ದು, ತಾನು ಶಾಂತಿ ಮಾತುಕತೆಗೆ ಸಿದ್ಧ ಎನ್ನುತ್ತಿದೆ.
4/6
Share
ಉಕ್ರೇನ್ ಈಗ ಯಾವ ಮಟ್ಟಿಗೆ ಹಾಳಾಗಿ ಹೋಗಿದೆ ಅಂದ್ರೆ, ಅಲ್ಲಿ ದಿಢೀರ್ ಅಂತಾ ಯುದ್ಧ ನಿಲ್ಲಿಸಿದರೂ, ಉಕ್ರೇನ್ ಮತ್ತೆ ಮೊದಲಿನ ಪರಿಸ್ಥಿತಿಗೆ ಬರಲು ಇನ್ನೂ ಹತ್ತಾರು ವರ್ಷ ಬೇಕು ಅಂತಾ ಹೇಳಬಹುದು. ಯಾಕಂದ್ರೆ ಯುದ್ಧದ ಕೆನ್ನಾಲಿಗೆಗೆ ಸಿಲುಕಿ ನರಳುತ್ತಿರುವ ಉಕ್ರೇನ್ ದೇಶದಲ್ಲಿ ರಸ್ತೆ, ಕಟ್ಟಡ ಸೇರಿದಂತೆ ಎಲ್ಲಾ ಮೂಲ ಸೌಕರ್ಯವೂ ಹಾಳಾಗಿ ಹೋಗಿದೆ.
5/6
Share
ಯುದ್ಧವೊಂದು ಸಾವಿರ ದಿನ ನಡೆದರೆ ಪರಿಸ್ಥಿತಿ ಹೇಗೆಲ್ಲಾ ಇರಬೇಡ ಹೇಳಿ? ಯಾಕಂದ್ರೆ ಒಂದು ಪ್ರದೇಶದಲ್ಲಿ ಯುದ್ಧ ನಡೆಯುತ್ತೆ ಅಂದ್ರೆ ಅಲ್ಲಿ ಮಾನವೀಯತೆಗೆ ಬೆಲೆ ಇರೋದಿಲ್ಲ. ಬರೀ ರಕ್ತ.. ರಕ್ತ.. ರಕ್ತ.. ಹೀಗೆ ರಕ್ತದಾಹ ಹೆಚ್ಚಾಗುತ್ತಲೇ ಇರುತ್ತದೆ. ಈ ಮಾತು ಉಕ್ರೇನ್ & ರಷ್ಯಾ ಯುದ್ಧದ ವಿಚಾರದಲ್ಲಿ ಕೂಡ ಬದಲಾಗಿಲ್ಲ.
6/6
Share
ರಷ್ಯಾ & ಉಕ್ರೇನ್ ನಡುವೆ ಫೈಟಿಂಗ್ ಶುರುವಾಗಿ ಒಂದಲ್ಲ.. ಎರಡಲ್ಲ.. ಬರೋಬ್ಬರಿ 1000 ದಿನಗಳೇ ಕಂಪ್ಲೀಟ್ ಆಗಲಿದೆ. ಇಬ್ಬರ ನಡುವೆ ಬೆಂಕಿ ಹೊತ್ತಿಕೊಂಡ ನಂತರ, ಒಂದೆರಡು ದಿನಗಳಲ್ಲಿ ಈ ಯುದ್ಧ ನಿಲ್ಲಲಿದೆ ಅಂತಾನೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಯುದ್ಧ ನೋಡ ನೋಡುತ್ತಲೇ ಬರೋಬ್ಬರಿ 1000 ದಿನಗಳನ್ನ ಪೂರೈಸಲು ಮುಂದೆ ನುಗ್ತಿದೆ.


Click it and Unblock the Notifications