Home / Photos
Putin India Visit: ಭಾರತಕ್ಕೆ ಆಗಮಿಸಿದ ವ್ಲಾಡಿಮಿರ್ ಪುಟಿನ್: ಅಪ್ಪಿ ಸ್ವಾಗತಿಸಿದ ಪ್ರಧಾನಿ ಮೋದಿ...Photos
ಎರಡು ದಿನಗಳ ಭಾರತ ಭೇಟಿಗಾಗಿ ನವದೆಹಲಿಗೆ ಬಂದಿಳಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಭವ್ಯ ಸ್ವಾಗತ ಕೋರಲಾಯಯಿತು. ಖುದ್ದಿ ಪ್ರಧಾನಿ ಮೋದಿ ತಬ್ಬಿ ಸ್ವಾಗತಿಸಿದರು.
1/8
Share
ಉಕ್ರೇನ್-ರಷ್ಯಾ ಯುದ್ಧದ ಬಳಿಕ ಭಾರತಕ್ಕೆ ಮೊದಲನೇ ಬಾರಿಗೆ ಭೇಟಿ ನೀಡಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್. ರಾಷ್ಟ್ರ ರಾಜಧಾನಿ ದೆಹಲಿಗೆ ಭೇಟಿ ನೀಡಿದ್ದು, ಎರಡು ದಿನ ಅವರು ಭಾರತದಲ್ಲಿ ಇರಲಿದ್ದಾರೆ. ಅವರನ್ನು ಪ್ರಧಾನಿ ಮೋದಿ ಸ್ವಾಗತಿಸಿದರು.
2/8
Share
ಇಂದು ಗುರುವಾರ ಡಿಸೆಂಬರ್ 4ರಂದು ಗುರುವಾರ ಭಾರತದ ನವದೆಹಲಿಯ ಪಾಲಂ ವಾಯುನೆಲೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿದ್ದ ವಿಮಾನ ಲ್ಯಾಂಡ್ ಆಯಿತು. ಅವರನ್ನು ಖುದ್ದು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಹಸ್ತಾಲಾಘವ ಮಾಡಿ ಸ್ವಾಗತಿಸಿದರು.
3/8
Share
ದೆಹಲಿಯ ಪಾಲಂ ವಾಯುನೆಲೆಯಲ್ಲಿ ವ್ಲಾಡಿಮಿರ್ ಪುಟಿನ್ ಅವರು ವಿಮಾನದಿಂದ ಕೆಳಕ್ಕೆ ಇಳಿಯುತ್ತಿದ್ದಂತೆ ಅವರನ್ನು ಭಾರತೀಯ ಸಾಂಪ್ರದಾಯಿಕ ಉಡುಗೆಯಲ್ಲಿದ್ದ ನೃತ್ಯಗಾರ್ತಿಯರು ಸ್ವಾಗತಿಸಿದರು. ಆಗ ಪುಟಿನ್ ಮತ್ತು ಪ್ರಧಾನಿ ಮೋದಿ ಚಪ್ಪಾಳೆ ತಟ್ಟಿದರು.
4/8
Share
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಬಂದು ಇಳಿಯುತ್ತಿದ್ದಂತೆ ಅವರನ್ನು ಪ್ರಧಾನಿ ಮೋದಿ ತಬ್ಬಿಕೊಂಡು ಸ್ವಾಗಿತಿಸಿದರು. ಭಾರತಕ್ಕೆ ಭೇಟಿ ನೀಡಿದ್ದಕ್ಕೆ ಹರ್ಷ ವ್ಯಕ್ತಪಡಿಸಿದರು. ಪುಟಿನ್ ಇರುವ ಎರಡು ದಿನ ರಷ್ಯಾ ಹಾಗೂ ಭಾರತೀಯ ಭದ್ರತಾ ಸಿಬ್ಬಂದಿ ಹೈಅಲರ್ಟ್ ಆಗಿರಲಿದ್ದಾರೆ.
5/8
Share
ರಷ್ಯಾದಿಂದ ವ್ಲಾಡಿಮಿರ್ ಪುಟಿನ್ ಅವರಿಗೆಂದೆ ತರಲಾಗಿದ್ದ ವಿಶೇಷ ಹಾಗೂ ಸುರಕ್ಷಿತ ಕಾರಿನಲ್ಲಿ ಪುಟಿನ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಒಟ್ಟಾಗಿ ತೆರಳಿದರು.
6/8
Share
ಭಾರತದಲ್ಲಿ ಎರಡು ದಿನಗಳ ಕಾಲ ವಿವಿಧ ನಿರ್ಣಾಯಕ ಸಭೆಗಳಲ್ಲಿ, ಕಾರ್ಯಕ್ರಮಗಳಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ. ಬಳಿಕ ಅವರು ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಲಿದ್ದಾರೆ.
7/8
Share
ಇಂದು ರಾತ್ರಿ ಪ್ರಧಾನಿ ಮೋದಿಯವರೊಂದಿಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಬೋಜನಕೂಟದಲ್ಲಿ ಭಾಗವಹಿಸಲಿದ್ದಾರೆ. ನಾಳೆ ರಾಜ್ ಘಾಟ್, ಹೈದರಾಬಾದ್ ಭೇಟಿ ಬಳಿಕ ರಾಷ್ಟ್ರಪತಿಗಳ ಜೊತೆಗೂ ಮಧ್ಯಾಹ್ನ ಬೋಜನಕೂಟ ಕೂಟದಲ್ಲಿ ಪಾಲ್ಗೊಳ್ಳುತ್ತಾರೆ.
8/8
Share
ಯುದ್ಧ ವಿಮಾನ, ಶಸ್ತ್ರಾಸ್ತ್ರ, ಕೈಗಾರಿಕೆ, ಆರ್ಥಿಕತೆ, ಶಿಕ್ಷಣ ಇತರ ವಲಯಗಳ ಅಭಿವೃದ್ಧಿ ಹಾಗೂ ಎರಡು ದೇಶಗಳ ಸ್ನೇಹ ಸಂಬಂಧ ಉತ್ತಮಗೊಳಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಹಾಗೂ ವ್ಲಾಡಿಮಿರ್ ಪುಟಿನ್ ಮಹತ್ವದ ಒಪ್ಪಂಗಳಿಗೆ ಸಹಿ ಹಾಕುವ ನಿರೀಕ್ಷೆ ಇದೆ.


Click it and Unblock the Notifications