Home / Photos
ಅಪ್ರತಿಮ ಧರ್ಮಸೇವಕ, ಸಮಾಜಸೇವಕ ಡಾ. ವೀರೇಂದ್ರ ಹೆಗ್ಗಡೆ
By Dheeraj K
1/7
Share
ಕೇವಲ 19ನೇ ವಯಸ್ಸಿಗೆ ಇವರು ಧರ್ಮಾಧಿಕಾರಿ ಪಟ್ಟ ಏರಿದರು. ಇವರಿಗೆ ಪುತ್ರ ಇಲ್ಲದ್ದರಿಂದ ಮುಂದಿನ ಧರ್ಮಾಧಿಕಾರಿ ಸ್ಥಾನವನ್ನು ಇವರ ಕಿರಿಯ ಸಹೋದರ ಹರ್ಷೇಂದ್ರ ಅವರಿಗೆ ನೀಡಲಾಗುತ್ತದೆ.
2/7
Share
ಅನೇಕ ವರ್ಷಗಳಿಂದ ವೀರೇಂದ್ರ ಹೆಗ್ಗಡೆ ಕುಟುಂಬದವರೇ ಧರ್ಮಸ್ಥಳದ ಧರ್ಮಾಧಿಕಾರಿಯಾಗುತ್ತಿರುವ ಪರಂಪರೆ ಇದೆ. ಬಂಟ್ವಾಳದಲ್ಲಿ 1948 ನವೆಂಬರ್ 25ರಂದು ಜನಿಸಿದ ವೀರೇಂದ್ರ ಹೆಗ್ಗಡೆ ಧರ್ಮಸ್ಥಳ ಧರ್ಮಾಧಿಕಾರಿಯಾಗುತ್ತಿರುವ ಪೇರ್ಗಡೆ ವಂಶದ 21ನೆಯ ತಲೆಮಾರಿನವರು.
3/7
Share
ವೀರೇಂದ್ರ ಹೆಗ್ಗಡೆ ಅವರು ಜೈನ ಧರ್ಮೀಯರು, ಬಂಟ ಸಮುದಾಯದವರು. ಅವರದ್ದು ತುಳು ಮಾತೃಭಾಷಿಕ ಪೇರ್ಗಡೆ ವಂಶ.
4/7
Share
ಆರೋಗ್ಯ, ಶಿಕ್ಷಣ ಮತ್ತು ಸಂಸ್ಕೃತಿ ಕ್ಷೇತ್ರದಲ್ಲಿ ಅವರು ಮಾಡುತ್ತಿರುವ ಶ್ರೇಷ್ಠ ಕಾರ್ಯವನ್ನು ನೋಡುವ ಅವಕಾಶವೂ ಸಿಕ್ಕಿತು. ಸಂಸದೀಯ ಕಲಾಪಗಳಿಗೆ ಅವರಿಂದ ಇನ್ನಷ್ಟು ಮೆರಗು ಸಿಗುತ್ತದೆ" ಎಂದು ಪ್ರಧಾನಿಗಳು ಶ್ಲಾಘಿಸಿದ್ದಾರೆ.
5/7
Share
ಪ್ರಧಾನಿ ನರೇಂದ್ರ ಮೋದಿ ಅವರು ಈ ನಾಲ್ವರನ್ನು ಅಭಿನಂದಿಸಿ ಟ್ವೀಟ್ ಮಾಡಿದ್ದಾರೆ. ಧರ್ಮಸ್ಥಳ ಧರ್ಮಾಧಿಕಾರಿ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ, "ವೀರೇಂದ್ರ ಹೆಗ್ಗಡೆ ಅವರು ಸಮುದಾಯ ಸೇವೆಯಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದರು.
6/7
Share
ಬಹುತೇಕ ಭಕ್ತರಿಗೆ ಧರ್ಮಸ್ಥಳದ ಮಂಜುನಾಥ ಎಂದರೆ ಗಾಢವಾದ ಭಕ್ತಿ ಮತ್ತು ನಂಬಿಕೆ. ಹಾಗೆಯೇ, ಧರ್ಮಾಧಿಕಾರಿ ವೀರಂದ್ರ ಹೆಗ್ಗಡೆ ಎಂದರೆ ಅಷ್ಟೇ ಗೌರವ.
7/7
Share
ಐವತ್ತು ವರ್ಷಗಳಿಗೂ ಹೆಚ್ಚು ಕಾಲದಿಂದ ಧರ್ಮಸ್ಥಳ ಶ್ರೀ ಕ್ಷೇತ್ರದಲ್ಲಿ ಧರ್ಮಾಧಿಕಾರಿಯಾಗಿರುವ ಡಾ. ಡಿ ವೀರೇಂದ್ರ ಹೆಗ್ಗಡೆ ತಮ್ಮ ಭಕ್ತಿ, ಧರ್ಮಸೇವೆ ಮತ್ತು ಸಮಾಜಸೇವೆಗಳಿಂದ ಜನಜನಿತವಾಗಿದ್ದಾರೆ.


Click it and Unblock the Notifications