Home / Photos
Jerusha: ವೀರ ಮದಕರಿಯ ಪುಟ್ಟ ಬಾಲಕಿ ಜೆರುಶಾ ಈಗ ನಾಯಕ ನಟಿ!
By Mamatha M
ನಟ ಸುದೀಪ್ ಮತ್ತು ರಾಗಿಣಿ ದ್ವಿವೇದಿ ನಟನೆಯ ವೀರ ಮದಕರಿ ಸಿನಿಮಾದಲ್ಲಿ ಪುಟ್ಟ ಹುಡುಗಿಯ ಪಾತ್ರ ಮಾಡಿದ್ದ ಬಾಲಕಿ ಜೆರುಶಾ ಈಗ ಚಿತ್ರರಂಗದಲ್ಲಿ ನಾಯಕ ನಟಿಯಾಗಲಿದ್ದಾರೆ.
1/7
Photo Credit: @instagram
Share
ವೀರ ಮದಕರಿ ಸಿನಿಮಾ ನೋಡಿದವರಿಗೆ ನಟ ಸುದೀಪ್ ಮತ್ತು ರಾಗಿಣಿ ದ್ವಿವೇದಿ ಅವರಷ್ಟೇ ಚೆನ್ನಾಗಿ ನೆನಪಿರುವ ಮುಖ ಸುದೀಪ್ ಮಗಳ ಪಾತ್ರ ಮಾಡಿದ್ದ ಬಾಲ ನಟಿ ಜೆರುಶಾ. ಗುಂಗರು ಕೂದಲಿನ, ಯಾವಾಗಲು ತಾಯಿಯ ಲಾಲಿ ಹಾಡು ಕೇಳುತ್ತಾ ಅಪ್ಪನ ಜೊತೆಗೆ ಓಡಾಡಿಕೊಂಡಿರುವ ಮುದ್ದು ಮುಖ ನೆನಪಾಗುತ್ತದೆ.
2/7
Photo Credit: @instagram
Share
ವೀರ ಮದಕರಿ ಸಿನಿಮಾ ಬಳಿಕ ಕನ್ನಡ ಸಿನಿಮಾಕ್ಕೆ ನಾಯಕ ನಟಿಯಾಗಿ ಎಂಟ್ರಿ ಕೊಡುತ್ತಿದ್ದಾರೆ. ಮಹೇಶ್ ಬಾಬು ಕನ್ನಡ ಚಿತ್ರರಂಗದ ಸ್ಟಾರ್ ನಿರ್ದೇಶಕ. ಆಕಾಶ್, ಅರಸು, ಪರಮೇಶ ಪಾನ್ ವಾಲ ಮುಂತಾದ ಸ್ಟಾರ್ ಸಿನಿಮಾಗಳನ್ನು ಮಾಡಿರುವ ಮಹೇಶ್ ಬಾಬು ಅವರು ಜೆರುಶಾರನ್ನು ಲಾಂಚ್ ಮಾಡುತ್ತಿದ್ದಾರೆ.
3/7
Photo Credit: @instagram
Share
ಮಹೇಶ್ ಬಾಬು ಹಾಗೂ ಸ್ಮೈಲ್ ಗುರು ರಕ್ಷಿತ್ ಹೊಸ ಸಿನಿಮಾ ಈಗಾಗಲೇ ಅನೌನ್ಸ್ ಆಗಿದೆ. ಈ ಚಿತ್ರದ ಮೂಲಕ ಮತ್ತೊಬ್ಬ ಯುವ ನಟಿ ಜೆರುಶಾರನ್ನು ನಾಯಕಿಯಾಗಿ ಲಾಂಚ್ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಅಪರೂಪ ಎಂಬ ಸಿನಿಮಾ ಮೂಲಕ ಯುವ ಪ್ರತಿಭೆಗಳನ್ನು ಪರಿಚಯಿಸಿದ್ದ ನಿರ್ದೇಶಕ ಮತ್ತೊಂದು ಸಾಹಸಕ್ಕೆ ಕೈ ಹಾಕಿದ್ದಾರೆ.
4/7
Photo Credit: @instagram
Share
ನಟಿ ಜೆರುಶಾ ಕ್ಯಾಮೆರಾ ಹೊಸದೇನಲ್ಲ. ಈಗಾಗಲೇ ಸುದೀಪ್ ಅಭಿನಯದ ವೀರ ಮದಕರಿ ಚಿತ್ರದಲ್ಲಿ ಬಾಲ ಕಲಾವಿದೆಯಾಗಿ ಪ್ರೇಕ್ಷಕರ ಗಮನ ಸೆಳೆದಿದ್ದರು. ಜಾಹೀರಾತುಗಳು ಮತ್ತು ರಂಗಭೂಮಿ ಹಿನ್ನೆಲೆ ಹೊಂದಿರುವ ಜೆರುಶಾ ಇದೀಗ ಮಹೇಶ್ ಬಾಬು ನಿರ್ದೇಶನದ ಚಿತ್ರದ ಮೂಲಕ ಬೆಳ್ಳಿತೆರೆಗೆ ಪದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ.
5/7
Photo Credit: @instagram
Share
ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಳ್ಳಲು ಹೆಸರಾಗಿರುವ ಸ್ಮೈಲ್ ಗುರು ರಕ್ಷಿತ್ಗೆ ಜೋಡಿಯಾಗಿ ಜೆರುಶಾ ಮಿಂಚಲಿದ್ದಾರೆ. ಮಹೇಶ್ ಬಾಬು ಅವರು ಪ್ರಮುಖ ಪಾತ್ರವೊಂದಕ್ಕೆ ಮತ್ತೊಬ್ಬ ಪ್ರತಿಭಾವಂತ ನಟಿ ಆಯ್ಕೆಯಲ್ಲಿ ತೊಡಗಿದ್ದು, ಅದರ ವಿವರಗಳನ್ನು ಶೀಘ್ರದಲ್ಲೇ ಅನಾವರಣಗೊಳಿಸಲಾಗುವುದು.
6/7
Photo Credit: @instagram
Share
ಮಹೇಶ್ ಬಾಬು ಹೊಸ ಕಥೆಗೆ ಸದ್ಯ ಶೀರ್ಷಿಕೆ ಫೈನಲ್ ಆಗಿಲ್ಲ. ಯೂತ್ಫುಲ್ ಎಂಟರ್ ಟೈನರ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಚೇತನ್ ಮತ್ತು ಅನುರಾಗ್ ಬಂಡವಾಳ ಹೂಡಲಿದ್ದಾರೆ. ಚಿತ್ರಕ್ಕೆ ಅನೂಪ್ ಸೀಳಿನ್ ಅವರ ಸಂಗೀತ ಸಂಯೋಜನೆ ಮತ್ತು ಸತ್ಯ ಛಾಯಾಗ್ರಾಹಣವಿರಲಿದೆ. ಮೇ ತಿಂಗಳಿನಿಂದ ಚಿತ್ರೀಕರಣ ಪ್ರಾರಂಭವಾಗಲಿದೆ.
7/7
Photo Credit: @instagram
Share
ಈ ಹಿಂದೆ ನಟಿ ಜೆರುಶಾ ಲೂಸಿಯಾ ನಿರ್ದೇಶಕ ಪವನ್ ಕುಮಾರ್ ಅವರ ಮಹತ್ವಾಕಾಂಕ್ಷೆಯ ಕನ್ನಡ, ಮಲಯಾಳಂ ದ್ವಿಭಾಷಾ ಪ್ರಾಜೆಕ್ಟ್ ಧೂಮಮ್ನಲ್ಲಿ ನಟಿದ್ದರು. ಮಲಯಾಳಂ ನಟ ಫಹಾದ್ ಫಾಸಿಲ್ ನಟನೆಯ ಸಿನಿಮಾದಲ್ಲಿ ಸಣ್ಣ ಪಾತ್ರವನ್ನು ನಿರ್ವಹಿಸಿದ್ದರು.


Click it and Unblock the Notifications