Home / Photos
Varamahalakshmi Vrata 2024: ವರ ನೀಡಲು ತಯಾರಾಗಿರುವ ಲಕ್ಷ್ಮಿಯರ ಚಿತ್ರಗಳು
By Sunitha B
ರಾಜ್ಯದೆಲ್ಲೆಡೆ ವರಮಹಾಲಕ್ಷ್ಮಿ ಹಬ್ಬವನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಣೆ ಮಾಡಲಾಗುತ್ತಿದೆ. ಮನೆ ಹಾಗೂ ಕಚೇರಿಗಳಲ್ಲಿ ದೇವಿಗೆ ಕೆಂಪು ಸೀರೆ, ಮೈತುಂಬ ಒಡುವೆ, ಹಣೆ ತುಂಬ ಕುಂಕುಮ, ಬಳೆ, ಹೂವುಗಳಿಂದ ಅಲಂಕಾರ ಮಾಡಿ ಪೂಜಿಸಲಾಗುತ್ತದೆ. ನಿಮ್ಮ ಮನೆಯ ವರಮಹಾಲಕ್ಷ್ಮಿ ಚಿತ್ರಗಳು ಇಲ್ಲಿದೆ.
1/11
Share
ರಾಜ್ಯದೆಲ್ಲೆಡೆ ವರಮಹಾಲಕ್ಷ್ಮಿ ಹಬ್ಬವನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಣೆ ಮಾಡಲಾಗುತ್ತಿದೆ. ಬೇಡಿದ ವರವನ್ನು ನೀಡುವ ಮಹಾಲಕ್ಷ್ಮಿಗೆ ಇಂದು ವಿಶೇಷ ಪೂಜೆಯನ್ನು ಸಲ್ಲಿಸಲಾಗುತ್ತದೆ. ಮನೆ ಹಾಗೂ ಕಚೇರಿಗಳಲ್ಲಿ ದೇವಿಗೆ ಕೆಂಪು ಸೀರೆ, ಮೈತುಂಬ ಒಡುವೆ, ಹಣೆ ತುಂಬ ಕುಂಕುಮ, ಬಳೆ, ಹೂವುಗಳಿಂದ ಅಲಂಕಾರ ಮಾಡಿ ಪೂಜಿಸಲಾಗುತ್ತದೆ. ನಿಮ್ಮ ಮನೆಯ ವರಮಹಾಲಕ್ಷ್ಮಿಗೆ ನಮ್ಮದೊಂದು ನಮನ...
2/11
Share
ಸಂಪತ್ತು ಮತ್ತು ಸಮೃದ್ಧಿಯ ಅಧಿದೇವತೆಯಾದ ಲಕ್ಷ್ಮಿ ದೇವಿಯನ್ನು ಪೂಜಿಸಲು ವರಲಕ್ಷ್ಮಿ ವ್ರತವು ಅತ್ಯಂತ ಮಂಗಳಕರ ದಿನವಾಗಿದ್ದರಿಂದ ಈ ದಿನ ಲಕ್ಷ್ಮಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ದೇವಸ್ಥಾನ, ಮನೆ ಹಾಗೂ ಹಾಗೂ ಕಚೇರಿಗಳಲ್ಲಿ ತಾಯಿ ದೇವಿಗೆ ಶ್ರದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸಲಾಗುತ್ತದೆ. ನಿಮ್ಮ ಮನೆಯ ವರಮಹಾಲಕ್ಷ್ಮಿಗೆ ನಮ್ಮದೊಂದು ನಮನ...
3/11
Share
ವರಮಹಾಲಕ್ಷ್ಮಿ ಹಬ್ಬದಂದು ಉಪವಾಸ ಮಾಡುವುದರಿಂದ ಸುಖ, ಶಾಂತಿ ಹಾಗೂ ನೆಮ್ಮದಿ ಸಿಗುತ್ತದೆ ಎಂಬುದು ನಂಬಿಕೆ. ಇದರ ಜೊತೆಗೆ ವರಮಹಾಲಕ್ಷ್ಮಿ ಹಬ್ಬದಂದು ಕೆಲವು ವಸ್ತುಗಳನ್ನು ಮನೆಗೆ ತಮದರೆ ಒಳಿತಾಗುತ್ತದೆ ಎಂದು ನಂಬಲಾಗುತ್ತದೆ. ಹೀಗಾಗಿ ಈ ದಿನ ಲಕ್ಷ್ಮಿಯನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸಿ ಹೊಸ ವಸ್ತುಗಳನ್ನು ಖರೀದಿ ಮಾಡುವ ಪ್ರತೀತಿ ಇದೆ. ನಿಮ್ಮ ಮನೆಯ ವರಮಹಾಲಕ್ಷ್ಮಿಗೆ ನಮ್ಮದೊಂದು ನಮನ...
4/11
Share
ಪೌರಾಣಿಕ ನಂಬಿಕೆಗಳ ಪ್ರಕಾರ, ಕ್ಷೀರಸಾಗರದಿಂದ ಜನಿಸಿದ ವರಲಕ್ಷ್ಮಿಯನ್ನು ಪೂಜಿಸುವುದರಿಂದ ಸಮೃದ್ಧಿ ಹೆಚ್ಚಾಗುತ್ತದೆ. ಭಕ್ತರ ಇಷ್ಟಾರ್ಥಗಳು ಈಡೇರುತ್ತವೆ ಎನ್ನುವ ನಂಬಿಕೆ ಇದೆ. ಹೀಗಾಗಿ ಭಕ್ತರು ವರಮಹಾಲಕ್ಷ್ಮಿಯನ್ನು ಮನೆಯಲ್ಲಿ ಕೂರಿಸಿ ವಿಶೇಷವಾಗಿ ಪೂಜೆ ಸಲ್ಲಿಸುತ್ತಾರೆ. ನಿಮ್ಮ ಮನೆಯ ವರಮಹಾಲಕ್ಷ್ಮಿಗೆ ನಮ್ಮದೊಂದು ನಮನ...
5/11
Share
ತಾಯಿ ಲಕ್ಷ್ಮಿಯನ್ನು ಹಿಂದೂ ಧರ್ಮದಲ್ಲಿ ಸಂಪತ್ತು ಮತ್ತು ಸಮೃದ್ಧಿಯ ದೇವತೆ ಎಂದು ಕರೆಯಲಾಗುತ್ತದೆ. ಲಕ್ಷ್ಮಿ ದೇವಿ ನೆಲೆಸಿರುವ ಸ್ಥಳದಲ್ಲಿ ಯಾರೂ ಆರ್ಥಿಕ ಮುಗ್ಗಟ್ಟನ್ನು ಎದುರಿಸುವುದಿಲ್ಲ. ಯಾವುದೇ ಸೌಕರ್ಯಗಳಿಗೆ ಕೊರತೆ ಇರಲ್ಲ ಎಂದು ನಂಬಲಾಗುತ್ತದೆ. ನಿಮ್ಮ ಮನೆಯ ವರಮಹಾಲಕ್ಷ್ಮಿಗೆ ನಮ್ಮದೊಂದು ನಮನ...
6/11
Share
ವರಮಹಾಲಕ್ಷ್ಮಿಯನ್ನು ಮನೆಯಲ್ಲಿ ಮಾತ್ರವಲ್ಲದೆ ಕೆಲಸ ಮಾಡುವ ಸ್ಥಳದಲ್ಲೂ ಪೂಜಿಸುತ್ತಾರೆ. ವರಮಹಾಲಕ್ಷ್ಮಿಗೆ ಈ ದಿನ ಪೂಜೆ ಸಲ್ಲಿಸಿದರೆ ಉದ್ಯೋಗ ಮತ್ತು ವ್ಯವಹಾರದಲ್ಲಿ ಆರ್ಥಿಕ ಪ್ರಗತಿ ಇರುತ್ತದೆ ಅನ್ನೋ ನಂಬಿಕೆ ಇದೆ. ಅಲ್ಲದೆ ಹಿಂದೂ ಧರ್ಮದಲ್ಲಿ ಮಹಿಳೆಯರನ್ನು ಲಕ್ಷ್ಮಿ ದೇವಿಯ ರೂಪವೆಂದು ಪರಿಗಣಿಸಲಾಗುತ್ತದೆ. ನಿಮ್ಮ ಮನೆಯ ವರಮಹಾಲಕ್ಷ್ಮಿಗೆ ನಮ್ಮದೊಂದು ನಮನ...
7/11
Share
ಮನೆಯ ಸೊಸೆ ಹಾಗೂ ಮನೆಯಲ್ಲಿ ಹುಟ್ಟಿದ ಹೆಣ್ಣು ಮಗುವನ್ನು ಲಕ್ಷ್ಮಿಯ ರೂಪವೆಂದು ಪರಿಗಣಿಸಲಾಗುತ್ತದೆ. ತಾಯಿ ಲಕ್ಷ್ಮಿ ಕೇವಲ ಸಂಪತ್ತಿನ ದೇವತೆಯಲ್ಲ. ಬದಲಿಗೆ ಅಪಾರ ಶಕ್ತಿ ಮತ್ತು ಧನಾತ್ಮಕ ಶಕ್ತಿಯ ಉಗ್ರಾಣವನ್ನೇ ಹೊಂದಿದ್ದಾಳೆ. ಲಕ್ಷ್ಮಿ ದೇವಿಯನ್ನು ಬ್ರಹ್ಮಾಂಡದ ಶಕ್ತಿ ಎಂದು ನಂಬಲಾಗಿದೆ. ಆದ್ದರಿಂದ ಹಿಂದೂ ಧರ್ಮದಲ್ಲಿ ಮಹಿಳೆಯರನ್ನು ಲಕ್ಷ್ಮಿಗೆ ಸಮಾನ ಎಂದು ಭಾವಿಸಲಾಗುತ್ತದೆ. ನಿಮ್ಮ ಮನೆಯ ವರಮಹಾಲಕ್ಷ್ಮಿಗೆ ನಮ್ಮದೊಂದು ನಮನ...
8/11
Share
ಜಾತಕದಲ್ಲಿ ರಾಹು, ಕೇತು, ಶುಕ್ರನ ಜೊತೆ ಸೇರಿದರೆ ಅಂತವರು ಈ ವರಲಕ್ಷ್ಮಿ ವ್ರತವನ್ನು ಆಚರಿಸುತ್ತಾರೆ. ಈ ಪೂಜೆಯಿಂದ ವ್ಯಾಪಾರ-ವ್ಯವಹಾರದಲ್ಲಿ ಅಪಾರ ಧನಹಾನಿ, ನಿರಂತರ ನಷ್ಟಗಳಿದ್ದವರು ಹಾಗೂ ಶುಕ್ರನಿಗೆ ಸಂಬಂಧಿಸಿದ ಸಮಸ್ಯೆ ಇರುವವರು ಈ ವ್ರತವನ್ನು ಆಚರಿಸುತ್ತಾರೆ. ಇದರಿಂದ ಉದ್ಯೋಗದಲ್ಲಿ ಅಭಿವೃದ್ಧಿಯೊಂದಿಗೆ ಧನಲಾಭವಾಗಲಿದೆ. ನಿಮ್ಮ ಮನೆಯ ವರಮಹಾಲಕ್ಷ್ಮಿಗೆ ನಮ್ಮದೊಂದು ನಮನ...
9/11
Share
ನಾವು ಕೇಳುವ ಎಲ್ಲ ವರಗಳನ್ನು ಕೊಡುವ ಲಕ್ಷ್ಮಿಯೇ ವರಲಕ್ಷ್ಮಿ. ಜೀವನದಲ್ಲಿ ಕೊನೆಯಿಲ್ಲದ ಕಷ್ಟದಲ್ಲಿರುವವರಿಗೆ ಮಾರ್ಗದರ್ಶಕರಾಗಿ ವಿವಿಧ ವರಗಳನ್ನು ದಯಪಾಲಿಸಿ ಅವರನ್ನು ಸುಭಿಕ್ಷವಾಗಿ ಬಾಳುವಂತೆ ಮಾಡುವವಳು ವರಲಕ್ಷ್ಮಿ. ನಿಮ್ಮ ಮನೆಯ ವರಮಹಾಲಕ್ಷ್ಮಿಗೆ ನಮ್ಮದೊಂದು ನಮನ...


Click it and Unblock the Notifications