Home / Photos
Karwar bridge collpase; ಕಾರವಾರದಲ್ಲಿ ಕುಸಿದು ಬಿದ್ದ ಕಾಳಿ ನದಿ ಸೇತುವೆ
By Gururaj S
ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕೋಡಿಬಾಗ್ನಲ್ಲಿ ಕಾಳಿ ನದಿಗೆ 41 ವರ್ಷಗಳ ಹಿಂದೆ ನಿರ್ಮಾಣ ಮಾಡಲಾಗಿದ್ದ ಸೇತುವೆ ಕುಸಿದು ಬಿದ್ದಿದೆ.
1/6
Share
ಉತ್ತರ ಕನ್ನಡ ಜಿಲ್ಲೆಯಲ್ಲಿ ಮತ್ತೊಂದು ದುರಂತ ನಡೆದಿದೆ. ಕಾರವಾರ-ಗೋವಾ ಸಂಪರ್ಕಿಸಲು ಕಾಳಿ ನದಿಗೆ ನಿರ್ಮಾಣ ಮಾಡಲಾಗಿದ್ದ ಹಳೆಯ ಸೇತುವೆ ಬುಧವಾರ ಮುಂಜಾನೆ 1.30ರ ಸುಮಾರಿಗೆ ಕುಸಿದು ಬಿದ್ದಿದೆ. ಖಾಲಿ ಲಾರಿಯೊಂದು ಸೇತುವೆ ಮೇಲೆ ಹೋಗುವಾಗಲೇ ಈ ಘಟನೆ ನಡೆದಿದ್ದು, ಚಾಲಕನನ್ನು ರಕ್ಷಿಸಲಾಗಿದೆ.
2/6
Share
ಕಾರವಾರದ ಕೋಡಿಬಾಗ್ ಪ್ರದೇಶದಲ್ಲಿ 41 ವರ್ಷಗಳ ಹಿಂದೆ ಕಾಳಿ ನದಿಗೆ ಸೇತುವೆ ನಿರ್ಮಾಣ ಮಾಡಲಾಗಿತ್ತು. ಲಾರಿ ಸಮೇತ ಸೇತುವೆ ಕುಸಿದು ಬಿದ್ದ ಕಾರಣ ತಮಿಳುನಾಡಿನ ಧರ್ಮಪುರಿಯ 37 ವರ್ಷದ ಬಾಲಮುರುಗನ್ ಎಂಬ ಚಾಲಕ ನದಿಗೆ ಬಿದ್ದಿದ್ದಾರೆ. ಪೊಲೀಸರು, ಸ್ಥಳೀಯ ಮೀನುಗಾರರು ಅವರನ್ನು ರಕ್ಷಣೆ ಮಾಡಿದರು.
3/6
Share
ಕಾಳಿ ನದಿಗೆ ನಿರ್ಮಾಣ ಮಾಡಲಾಗಿದ್ದ ಈ ಸೇತುವೆ ಗೋವಾ-ಕಾರವಾರ ಸಂಪರ್ಕಿಸುತ್ತಿತ್ತು. ಒಟ್ಟು ಮೂರು ಕಡೆ ಸೇತುವೆ ಕುಸಿತವಾಗಿದ್ದು, ಸೇತುವೆ ಅವಶೇಷಗಳು ತುಂಬಿ ಹರಿಯುವ ಕಾಳಿ ನದಿಗೆ ಬಿದ್ದಿವೆ. ಘಟನೆಯಲ್ಲಿ ಲಾರಿ ಚಾಲಕ ಬಾಲಮುರುಗನ್ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
4/6
Share
ಉತ್ತರ ಕನ್ನಡ ಜಿಲ್ಲಾಡಳಿತ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ತೆಗೆದುಕೊಳ್ಳಲು ಮತ್ತು ಸಾಧ್ಯವಾದರೆ ಈ ಪ್ರದೇಶವನ್ನು ತಪ್ಪಿಸಲು ನಾವು ವಿನಂತಿಸುತ್ತೇವೆ. ತಕ್ಷಣ ಕಾರ್ಯಚರಣೆಗಾಗಿ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ಹೇಳಿದೆ.
5/6
Share
ಕಾಳಿ ನದಿಗೆ ಹೊಸ ಮತ್ತು ಹಳೆಯ ಎರಡು ಸೇತುವೆ ಇದೆ. ಒಂದು ಮಾರ್ಗಕ್ಕಾಗಿ ಹಳೆಯ ಸೇತುವೆಯನ್ನು ಬಳಕೆ ಮಾಡಲಾಗುತ್ತಿತ್ತು. ಈಗ ಹೊಸ ಸೇತುವೆ ಮೇಲೆ ಹೆಚ್ಚುವರಿ ಹೊರೆ ಬೀಳಲಿದೆ. ಸೇತುವೆಯ ಪರಿಶೀಲನೆಗಾಗಿ ಮತ್ತು ಪ್ರದೇಶದಲ್ಲಿನ ಎಲ್ಲಾ ಸೇತುವೆಗಳ ಸುರಕ್ಷತೆಯನ್ನು ಖಚಿತಪಡಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಜಿಲ್ಲಾಡಳಿತ ಸೂಚನೆ ನೀಡಿದೆ.
6/6
Share
ಕಾರವಾರ-ಗೋವಾ ಸಂಪರ್ಕಿಸಲು ಕಾಳಿ ನದಿಗೆ ನಿರ್ಮಾಣ ಮಾಡಲಾಗಿದ್ದ ಹಳೆಯ ಸೇತುವೆ ಮಧ್ಯರಾತ್ರಿ ಕುಸಿದು ಬಿದ್ದಿದೆ. ಹಗಲು ಹೊತ್ತಿನಲ್ಲಿ ಸೇತುವೆ ಮೇಲೆ ಹಲವು ವಾಹನಗಳ ಸಂಚಾರ ಇರುತ್ತದೆ. ಆಗ ಕುಸಿದಿದ್ದರೆ ದೊಡ್ಡ ದುರಂತ ನಡೆಯುತ್ತಿತ್ತು. ಮುಂಗಾರು ಮಳೆಯ ಆರ್ಭಟದ ಕಾರಣ ಕಾಳಿ ನದಿ ಸಹ ತುಂಬಿ ಹರಿಯುತ್ತಿದೆ.


Click it and Unblock the Notifications