Home / Photos
ಬಜೆಟ್ 2026: ಬೆಲೆ ಇಳಿಕೆಯಾದ ಪ್ರಮುಖ ವಸ್ತುಗಳ ಸಂಪೂರ್ಣ ಪಟ್ಟಿ ಇಲ್ಲಿದೆ
By Reshma P
ಸರ್ಕಾರದ ತೆರಿಗೆ ಕಡಿತದಿಂದಾಗಿ ಕ್ಯಾನ್ಸರ್ ಔಷಧಿಗಳು, ವಿದೇಶಿ ಶಿಕ್ಷಣ, ಸ್ಮಾರ್ಟ್ಫೋನ್, ಇವಿ ಬ್ಯಾಟರಿ ಮತ್ತು ಸೌರ ಫಲಕಗಳ ಬೆಲೆ ಇಳಿಕೆಯಾಗಿದೆ, ಇದರಿಂದ ಸಾರ್ವಜನಿಕರಿಗೆ ಹೆಚ್ಚಿನ ಲಾಭ ಸಿಗಲಿದೆ.
1/11
Share
ವಿದೇಶ ಪ್ರವಾಸ ಪ್ಯಾಕೇಜ್: ಪ್ರವಾಸೋದ್ಯಮವನ್ನು ಉತ್ತೇಜಿಸಲು ಕೆಲವು ವಿದೇಶಿ ಪ್ರವಾಸ ಪ್ಯಾಕೇಜ್ಗಳ ಮೇಲಿನ ತೆರಿಗೆ ದರಗಳಲ್ಲಿ ಬದಲಾವಣೆ ಮಾಡಲಾಗಿದೆ.
2/11
Share
ಕ್ರೀಡಾ ಉಪಕರಣಗಳು: ಕ್ರೀಡೆಗೆ ಉತ್ತೇಜನ ನೀಡಲು ವಿದೇಶದಿಂದ ಆಮದು ಮಾಡಿಕೊಳ್ಳುವ ಗುಣಮಟ್ಟದ ಕ್ರೀಡಾ ಸಾಮಗ್ರಿಗಳ ದರ ಇಳಿಕೆಯಾಗಿದೆ.
3/11
Share
ವಿದೇಶ ಶಿಕ್ಷಣ: ಶೈಕ್ಷಣಿಕ ಸಾಲ ಮತ್ತು ವಿದೇಶಿ ಹಣ ಸಂಬಂಧಿಸಿದ ನಿಯಮಗಳ ಸಡಿಲಿಕೆಯಿಂದ ವಿದೇಶಿ ವ್ಯಾಸಂಗದ ಹೊರೆ ಸ್ವಲ್ಪ ತಗ್ಗಿದೆ.
4/11
Share
ಮೈಕ್ರೋವೇವ್ ಓವನ್: ಎಲೆಕ್ಟ್ರಾನಿಕ್ ಬಿಡಿಭಾಗಗಳ ಮೇಲಿನ ಆಮದು ಸುಂಕ ಕಡಿತದಿಂದ ಮೈಕ್ರೋವೇವ್ ಓವನ್ ಬೆಲೆ ಕಡಿಮೆಯಾಗಿದೆ.
5/11
Share
ಲಿಥೀಯಂ ಬ್ಯಾಟರಿ: ಎಲೆಕ್ಟ್ರಾನಿಕ್ ವಾಹನಗಳಲ್ಲಿ (EV) ಬಳಸುವ ಲಿಥೀಯಂ ಅಯಾನ್ ಬ್ಯಾಟರಿಗಳ ಮೇಲಿನ ಕಸ್ಟಮ್ಸ್ ಸುಂಕ ಕಡಿತವಾಗಿರುವುದರಿಂದ ಎಲೆಕ್ಟ್ರಾನಿಕ್ ವಾಹನಗಳ ಬೆಲೆಯು ಕಡಿಮೆಯಾಗುವ ಸಾಧ್ಯತೆಯಿದೆ.
6/11
Share
ಸೌರ ಫಲಕ: ನವೀಕರಿಸಬಹುದಾದ ಇಂಧನಕ್ಕೆ ಒತ್ತು ನೀಡಲು ಸೋಲಾರ್ ಪ್ಯಾನಲ್ ಮತ್ತು ಅವುಗಳ ಬಿಡಿಭಾಗಗಳ ದರ ಇಳಿಸಲಾಗಿದೆ.
7/11
Share
ಕ್ಯಾನ್ಸರ್ ಮತ್ತು ಸಕ್ಕರೆ ಕಾಯಿಲೆ ಔಷಧಿ: ಜೀವ ಉಳಿಸುವ 17 ಪ್ರಮುಖ ಔಷಧಿಗಳ ಮೇಲಿನ ಜಿಎಸ್ಟಿ ಅಥವಾ ಆಮದು ಸುಂಕ ಇಳಿಸಿರುವುದರಿಂದ ರೋಗಿಗಳಿಗೆ ದೊಡ್ಡ ರಿಲೀಫ್ ಸಿಕ್ಕಿದೆ.
8/11
Share
ಸ್ಮಾರ್ಟ್ಫೋನ್ ಮತ್ತು ಟ್ಯಾಬ್ಲೆಟ್: ಮೊಬೈಲ್ ಫೋನ್ ಬಿಡಿಭಾಗಗಳು ಮತ್ತು ಟ್ಯಾಬ್ಲೆಟ್ಗಳ ಮೇಲಿನ ಕಸ್ಟಮ್ಸ್ ಸುಂಕ ಇಳಿಕೆಯಾಗಿರುವುದು ಗ್ರಾಹಕರಿಗೆ ಲಾಭ ತಂದಿದೆ.
9/11
Share
ಅಮೂಲ್ಯ ಖನಿಜ: ಕೈಗಾರಿಕೆಗಳಲ್ಲಿ ಬಳಸುವ ತಾಮ್ರ, ಲಿಥಿಯಂನಂತಹ ಪ್ರಮುಖ ಖನಿಜಗಳ ಆಮದು ವೆಚ್ಚ ಕಡಿಮೆಯಾಗಿದೆ.


Click it and Unblock the Notifications