Home / Photos
ವಿದ್ಯುತ್ ದೀಪದಲ್ಲಿ ಕಂಗೊಳಿಸುತ್ತಿದೆ ಕಾರ್ಕಳದ ಆನೆಕೆರೆ ಬಸದಿ
By Gururaj S
ಉಡುಪಿ ಜಿಲ್ಲೆಯ ಕಾರ್ಕಳದ ಪ್ರಸಿದ್ಧ ಪ್ರವಾಸಿ ತಾಣ ಆನೆಕೆರೆ ಬಸದಿಯನ್ನು ಜೀರ್ಣೋದ್ಧಾರ ಮಾಡಲಾಗಿದೆ. 5 ಶತಮಾನದಷ್ಟು ಹಳೆಯ ಬಸದಿಯಲ್ಲಿ ಶಾಶ್ವತ ವಿದ್ಯುತ್ ದೀಪಾಲಂಕಾರದ ವ್ಯವಸ್ಥೆ ಮಾಡಲಾಗಿದೆ.
1/6
Share
ಇತಿಹಾಸ ಪ್ರಸಿದ್ಧ ಉಡುಪಿ ಜಿಲ್ಲೆಯ ಕಾರ್ಕಳ ನಗರದ ಹೃದಯ ಭಾಗದಲ್ಲಿರುವ ಆನೆಕೆರೆ ಬಸದಿಯ ಪಂಚಕಲ್ಯಾಣ ಮಹೋತ್ಸವ ಜನವರಿ 18ರಂದು ನಡೆಯಲಿದೆ. ಈ ಮಹೋತ್ಸವದ ಪ್ರಯುಕ್ತ ಬಸದಿಗೆ ಶಾಶ್ವತ ವಿದ್ಯುತ್ ದೀಪಾಲಂಕಾರದ ವ್ಯವಸ್ಥೆ ಮಾಡಲಾಗಿದೆ.
2/6
Share
ಸುಮಾರು 5 ಶತಮಾನಗಳಷ್ಟು ಪ್ರಾಚೀನವಾದ ಆನೆಕೆರೆ ಬಸದಿ ಐವರು ತೀರ್ಥಂಕರರ ಭವ್ಯ ಬಿಂಬಗಳಿಂದ ಕೂಡಿದೆ. 2020ರಲ್ಲಿ ಈ ಆನೆಕೆರೆ ಬಸದಿ ಜೀರ್ಣೋದ್ಧಾರ ಕಾರ್ಯವನ್ನು ಆರಂಭಿಸಲಾಗಿತ್ತು. ಈಗ ಅದು ಪೂರ್ಣಗೊಂಡಿದೆ. ಗುರುವಾರ ನಡೆಯುವ ಉದ್ಘಾಟನಾ ಕಾರ್ಯಕ್ರಮದಲ್ಲಿ ರಾಜ್ಯಪಾಲರು ಪಾಲ್ಗೊಳ್ಳಲಿದ್ದಾರೆ.
3/6
Share
ಕಾರ್ಕಳದಲ್ಲಿ ಸುಮಾರು 24.66 ಎಕರೆ ವಿಸ್ತೀರ್ಣದ ಆನೆಕೆರೆ ಸರೋವರದ ನಡುವೆ ಇರುವ ಬಸದಿ ಸರ್ವಧರ್ಮೀಯರ ಪುಣ್ಯಕ್ಷೇತ್ರ. ಪ್ರಸಿದ್ಧ ಪ್ರವಾಸಿ ತಾಣ ಸಹ ಹೌದು. ಚತುರ್ಮುಖ ಬಸದಿಯ ವಾಸ್ತು ಶೈಲಿಯನ್ನು ಹೊಂದಿರುವ ಕೆರೆ ಬಸದಿಯನ್ನು ಭೈರವ ಅರಸು ವಂಶದ ಪಾಂಡ್ಯೆಪ್ಪೆಡೆಯ ಕಟ್ಟಿಸಿದ ಎನ್ನುತ್ತದೆ ಇತಿಹಾಸ.
4/6
Share
ಕಾರ್ಕಳದ ಐತಿಹಾಸಿಕ ಆನೆಕೆರೆ ಚತುರ್ಮುಖ ಕೆರೆಬಸದಿಯ ಪಂಚಕಲ್ಯಾಣ ಮಹೋತ್ಸವದ ಉದ್ಘಾಟನಾ ಸಮಾರಂಭಕ್ಕೆ ಗುರುವಾರ ರಾಜ್ಯಪಾಲ ಡಾ. ಥಾವರ್ ಚಂದ್ ಗೆಹ್ಲೋಟ್ ಆಗಮಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಕಾರ್ಕಳ ಶಾಸಕ ಸುನಿಲ್ ಕುಮಾರ್ ಪೂರ್ವಭಾವಿ ಸಿದ್ಧತೆಗಳನ್ನು ಪರಿಶೀಲಿಸಿದರು.
5/6
Share
ಈ ಬಸದಿಯನ್ನು 1545ರಲ್ಲಿ ನಿರ್ಮಾಣ ಮಾಡಲಾಗಿದೆ ಎನ್ನುತ್ತದೆ ಇತಿಹಾಸ. ಬಸದಿಯಲ್ಲಿ ಪೂರ್ವಾಭಿಮುಖವಾಗಿ ಭಗವಾನ್ ಶ್ರೀ ಆದಿನಾಥ ಸ್ವಾಮಿ, ಪಶ್ಚಿಮಾಭಿಮುಖವಾಗಿ ಶ್ರೀ ಶಾಂತಿನಾಥ ಸ್ವಾಮಿ ಪ್ರತಿಮೆಗಳನ್ನು ನಿರ್ಮಾಣ ಮಾಡಲಾಗಿದೆ. ಪ್ರತಿದಿನ ನೂರಾರು ಇಲ್ಲಿಗೆ ಭೇಟಿ ನೀಡುತ್ತಾರೆ.
6/6
Share
ಅರಮನೆ ಆನೆಗಳಿಗೆ ನೀರು ಕುಡಿಸಲು ಮತ್ತು ಸ್ನಾನ ಮಾಡಿಸಲು ಕೆರೆಯನ್ನು ನಿರ್ಮಾಣ ಮಾಡಿದ ಕಾರಣ ಇದಕ್ಕೆ ಆನೆಕೆರೆ ಎಂದು ಕರೆಯುತ್ತಾರೆ ಎಂಬ ಮಾಹಿತಿ ಇದೆ. ಕೆರೆಯಲ್ಲಿ ಬೋಟಿಂಗ್ ವ್ಯವಸ್ಥೆ ಮಾಡಿ ಪ್ರವಾಸಿಗರನ್ನು ಸಹ ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯಬೇಕು ಎಂದು ಯೋಜನೆ ರೂಪಿಸಲಾಗಿದೆ.


Click it and Unblock the Notifications