Home / Photos
ಕೊಪ್ಪಳದ ತುಂಗಭದ್ರಾ ಡ್ಯಾಂ 19ನೇ ಗೇಟ್ ದುರಸ್ತಿ ಕಾರ್ಯ
By Gururaj S
ಕೊಪ್ಪಳ ಜಿಲ್ಲೆ ಮುನಿರಾಬಾದ್ನಲ್ಲಿರುವ ತುಂಗಭದ್ರಾ ಡ್ಯಾಂನ 19ನೇ ಕ್ರಸ್ಟ್ಗೇಟ್ ಸ್ಥಳದಲ್ಲಿ 2ನೇ ಎಲಿಮೆಂಟ್ ಆಳವಡಿಕೆ ಶನಿವಾರ ಯಶಸ್ವಿಯಾಗಿದೆ. ಒಟ್ಟು 5 ಎಲಿಮೆಂಟ್ ಅಳವಡಿಸಬೇಕಿದೆ.
1/6
Share
ಕೊಪ್ಪಳ ಜಿಲ್ಲೆಯ ಮುನಿರಾಬಾದ್ನಲ್ಲಿರುವ ತುಂಗಭದ್ರಾ ಡ್ಯಾಂನ 19ನೇ ಕ್ರಸ್ಟ್ಗೇಟ್ ಸ್ಥಳದಲ್ಲಿ 2ನೇ ಎಲಿಮೆಂಟ್ ಆಳವಡಿಕೆ ಕಾರ್ಯ ಶನಿವಾರ ಯಶಸ್ವಿಯಾಗಿದೆ. ಶುಕ್ರವಾರ ರಾತ್ರಿ ಮೊದಲ ಎಲಿಮೆಂಟ್ ಆಳವಡಿಕೆ ಮಾಡಲಾಗಿತ್ತು. ರಭಸವಾಗಿ ಹರಿಯುವ ನೀರಿನ ನಡುವೆಯೇ 2ನೇ ಎಲಿಮೆಂಟ್ ಯಶಸ್ವಿಯಾಗಿ ಅಳವಡಿಸಲಾಗಿದೆ.
2/6
Share
ತುಂಗಭದ್ರಾ ಜಲಾಶಯದ ಕ್ರಸ್ಟ್ಗೇಟ್ ಸಂಖ್ಯೆ 19ರ ದುರಸ್ತಿ ಕಾರ್ಯಕ್ಕಾಗಿ ಗೇಟ್ಗಳನ್ನು ಸಿದ್ಧಪಡಿಸಿ ದೊಡ್ಡ ದೊಡ್ಡ ಲಾರಿಗಳಲ್ಲಿ ಅವುಗಳನ್ನು ಡ್ಯಾಂಗೆ ತರಲಾಗಿದೆ. ಬಳಿಕ ಬೃಹತ್ ಕ್ರೇನ್ಗಳ ಸಹಾಯದಿಂದ ಅವುಗಳನ್ನು ಕ್ರಸ್ಟ್ಗೇಟ್ ಕೊಚ್ಚಿ ಹೋದ 19ನೇ ನಂಬರ್ ಗೇಟ್ನಲ್ಲಿ ಅಳವಡಿಕೆ ಮಾಡಲಾಗುತ್ತಿದೆ.
3/6
Share
ಕ್ರಸ್ಟ್ಗೇಟ್ಗೆ 4 ಅಡಿ ಎತ್ತರದ ಒಟ್ಟು 5 ಎಲಿಮೆಂಟ್ ಅಳವಡಿಕೆ ಮಾಡಲಾಗುತ್ತದೆ. ಡ್ಯಾಂನ ಗೇಟ್ ಸುರಕ್ಷತಾ ತಜ್ಞ ಕನ್ನಯ್ಯನಾಯ್ಡು ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯುತ್ತಿದ್ದು, ಈಗಾಗಲೇ 2 ಎಲಿಮೆಂಟ್ ಯಶಸ್ವಿಯಾಗಿ ಅಳವಡಿಕೆ ಮಾಡಲಾಗಿದೆ. ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ.
4/6
Share
ವಿಜಯನಗರ ಜಿಲ್ಲಾಧಿಕಾರಿ ಎಂ. ಎಸ್. ದಿವಾಕರ ಶನಿವಾರ ಬೆಳಿಗ್ಗೆ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ತುಂಗಭದ್ರಾ ಜಲಾಶಯದ ಕ್ರಸ್ಟ್ಗೇಟ್ ಸಂಖ್ಯೆ 19ರ ದುರಸ್ತಿ ಕಾರ್ಯದ ಸ್ಥಿತಿಗತಿಗಳ ಬಗ್ಗೆ ಪರಿಶೀಲನೆ ಮಾಡಿದರು. ದುರಸ್ತಿ ಕಾರ್ಯ ಕೈಗೊಂಡಿರುವ ಕಾರ್ಮಿಕರ ಜೊತೆ ಮಾತುಕತೆ ನಡೆಸಿದರು.
5/6
Share
ವಿಜಯನಗರ ಜಿಲ್ಲಾಧಿಕಾರಿ ಎಂ. ಎಸ್. ದಿವಾಕರ ತುಂಗಭದ್ರಾ ಡ್ಯಾಂ ಕ್ರಸ್ಟ್ಗೇಟ್ ನಂಬರ್ 19ರ ದುರಸ್ತಿ ಕುರಿತು ತಜ್ಞರೊಂದಿಗೆ ದುರಸ್ಥಿ ಚರ್ಚಿಸಿದರು, ಕಾಮಗಾರಿ ಪ್ರಗತಿ ಬಗ್ಗೆ ಪರಿಶೀಲನೆ ನಡೆಸಿದರು. ಎರಡು ದಿನದಲ್ಲಿ ಒಟ್ಟು ಎರಡು ಎಲಿಮೆಂಟ್ಗಳನ್ನು ಯಶಸ್ವಿಯಾಗಿ ಅಳವಡಿಕೆ ಮಾಡಲಾಗಿದೆ.
6/6
Share
ಎರಡು ಬೃಹತ್ ಕ್ರೇನ್ಗಳ ಸಹಾಯದಿಂದ ಶನಿವಾರ ಮಧ್ಯಾಹ್ನ 1.50ರ ಸುಮಾರಿಗೆ 2ನೇ ಎಲಿಮೆಂಟ್ ಅಳವಡಿಕೆ ಕಾರ್ಯ ಆರಂಭವಾಯಿತು. 3.10ರ ಸುಮಾರಿಗೆ ಮುಕ್ತಾಯಗೊಂಡಿತು. ಇನ್ನೂ ಮೂರು ಎಲಿಮೆಂಟ್ ಅಳವಡಿಕೆ ಕಾರ್ಯ ಬಾಕಿ ಇದೆ.


Click it and Unblock the Notifications