Home / Photos
ತುಂಗಭದ್ರಾ ಡ್ಯಾಂ 19ನೇ ಕಸ್ಟ್ ಗೇಟ್ ಚೈನ್ ಲಿಂಕ್ ಮುರಿತ
By Gururaj S
ತುಂಗಭದ್ರಾ ಡ್ಯಾಂನ 19ನೇ ಕ್ರಸ್ಟ್ ಗೇಟ್ನ ಚೈನ್ ಲಿಂಕ್ ಮುರಿದ ಪರಿಣಾಮ 1.50 ಲಕ್ಷ ಕ್ಯುಸೆಕ್ ನೀರು ನದಿಗೆ ಹರಿದು ಹೋಗುತ್ತಿದೆ. ದುರಸ್ತಿ ಕಾರ್ಯಕ್ಕಾಗಿ ತಜ್ಞರ ತಂಡ ಡ್ಯಾಂಗೆ ಆಗಮಿಸಿದೆ.
1/6
Share
ಶನಿವಾರ ರಾತ್ರಿ ಕೊಪ್ಪಳ-ಹೊಸಪೇಟೆ ಗಡಿಯ ಮುನಿರಾಬಾದ್ನಲ್ಲಿರುವ ತುಂಗಭದ್ರಾ ಡ್ಯಾಂನ ಕ್ರೆಸ್ಟ್ ಗೇಟ್ ನಂಬರ್ 19ರ ಚೈನ್ ಲಿಂಕ್ ಮುರಿದು ಹೋಗಿದೆ. ಇದರಿಂದಾಗಿ ಜಲಾಶಯದಲ್ಲಿ ಸಂಗ್ರಹವಾಗಿರುವ ಅಪಾರ ಪ್ರಮಾಣದ ನೀರು ವ್ಯರ್ಥವಾಗಿ ನದಿಗೆ ಹರಿದು ಹೋಗುತ್ತಿದೆ. ನದಿ ಪಾತ್ರದ ಜನರಲ್ಲಿ ನದಿಯ ನೀರಿನ ಮಟ್ಟದ ಬಗ್ಗೆ ಆತಂಕ ಉಂಟಾಗಿದೆ.
2/6
Share
ಉಪ ಮುಖ್ಯಮಂತ್ರಿ, ಜಲಸಂಪನ್ಮೂಲ ಸಚಿವ ಡಿ. ಕೆ. ಶಿವಕುಮಾರ್ ಭಾನುವಾರ ತುಂಗಭದ್ರಾ ಡ್ಯಾಂಗೆ ಭೇಟಿ ನೀಡಿದರು. ಮುರಿದು ಹೋಗಿರುವ ಕ್ರಸ್ಟ್ ಗೇಟ್ ನಂಬರ್ 19ರ ಚೈನ್ ಲಿಂಕ್ ವೀಕ್ಷಣೆ ಮಾಡಿದರು ಮತ್ತು ಅಧಿಕಾರಿಗಳ ಜೊತೆ ನದಿಯ ನೀರಿನ ಹರಿವಿನ ಕುರಿತು ಮಾಹಿತಿ ಪಡೆದರು.
3/6
Share
ಡಿ. ಕೆ. ಶಿವಕುಮಾರ್ ಹೊಸಪೇಟೆಯಲ್ಲಿ ತುಂಗಭದ್ರಾ ಡ್ಯಾಂ ನೀರಿನ ಕುರಿತು ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಜನಪ್ರತಿನಿಧಿಗಳ ಸಭೆಯನ್ನು ನಡೆಸಿದರು. ಡ್ಯಾಂ ದುರಸ್ತಿ ಕಾರ್ಯದ ಕುರಿತು ತಜ್ಞರ ತಂಡ, ಅಧಿಕಾರಿಗಳ ಜೊತೆ ಚರ್ಚಿಸಿದರು.
4/6
Share
ಕೊಪ್ಪಳ ಪ್ರವಾಶದಲ್ಲಿದ್ದ ಬೆಳಗಾವಿ ಸಂಸದ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ತುಂಗಭದ್ರಾ ಡ್ಯಾಂಗೆ ಭೇಟಿ ನೀಡಿದರು. ಕಸ್ಟ್ ಗೇಟ್ 19ರ ಚೈನ್ ಲಿಂಕ್ ಮುರಿದು ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಹೋಗುತ್ತಿರುವುದನ್ನು ವೀಕ್ಷಣೆ ಮಾಡಿದರು.
5/6
Share
ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ತುಂಗಾಭದ್ರಾ ಜಲಾಶಯಕ್ಕೆ ಭೇಟಿ ನೀಡಿ ಕ್ರಸ್ಟ್ ಗೇಟ್ನ ಚೈನ್ ಮುರಿದಿರುವುದನ್ನು ವೀಕ್ಷಿಸಿ, ಅಧಿಕಾರಿಗಳಿಂದ ಮಾಹಿತಿ ಪಡೆದರು. ರೈತರು ಆತಂಕ ಪಡುವ ಅಗತ್ಯವಿಲ್ಲ, ನದಿಗೆ ಹರಿಯುತ್ತಿರುವ ನೀರನ್ನು 4 ದಿನಗಳ ಒಳಗಾಗಿ ನಿಯಂತ್ರಣ ಮಾಡಲು ಸರ್ಕಾರ ಪ್ರಯತ್ನ ನಡೆಸಿದೆ ಎಂದರು.
6/6
Share
ಉಪ ಮುಖ್ಯಮಂತ್ರಿ, ಜಲಸಂಪನ್ಮೂಲ ಸಚಿವ ಡಿ. ಕೆ. ಶಿವಕುಮಾರ್ ತುಂಗಭದ್ರಾ ಡ್ಯಾಂನಲ್ಲಿ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದರು. ಗೇಟ್ ದುರಸ್ತಿ, ತಜ್ಞರ ತಂಡದ ಅಭಿಪ್ರಾಯ ನದಿಗೆ ಹರಿಯುತ್ತಿರುವ ನೀರಿನ ಕುರಿತು ವಿವರಣೆಯನ್ನು ಪಡೆದರು.


Click it and Unblock the Notifications