Home / Photos
ಮೇಲುಕೋಟೆ ಚಲುವನಾರಾಯಣಸ್ವಾಮಿ ತೊಟ್ಟಿಲಮಡು ಜಾತ್ರಾ ಮಹೋತ್ಸವ ಸಂಪನ್ನ
By Mallika P
ಮೇಲುಕೋಟೆ ಶ್ರೀ ಚಲುವನಾರಾಯಣ ಸ್ವಾಮಿ ದೇವಸ್ಥಾನದಲ್ಲಿ ತೊಟ್ಟಿಲಮಡುಜಾತ್ರೆ ಸಂಪನ್ನಗೊಂಡಿದೆ.
1/6
Share
ದಂಪತಿಗಳು ಪಂಚಕಲ್ಯಾಣಿ ಮತ್ತು ವೈಕುಂಠಗಂಗೆಯಲ್ಲಿ ಹರಕೆಯ ಸ್ನಾನಮಾಡಿ ಸ್ವಾಮಿಗೆ ಪ್ರಾರ್ಥನೆ ಸಲ್ಲಿಸಿದರೆ ಇಷ್ಠಾರ್ಥ ಸಿದ್ಧಿಯಾಗುತ್ತದೆ ಎನ್ನುವ ನಂಬಿಕೆ ಇದೆ.
2/6
Share
ಕಾರ್ತಿಕ ಮಾಸದ ಬ್ರಹ್ಮೋತ್ಸವದ 4ನೇ ತಿರುನಾಳ್ ಅಂಗವಾಗಿ ಮೇಲುಕೋಟೆ ಶ್ರೀಚೆಲುವನಾರಾಯಣಸ್ವಾಮಿಗೆ ರಾಜಮುಡಿ ಕಿರೀಟಧಾರಣ ಮಹೋತ್ಸವ ವೈಭವದಿಂದ ನೆರವೇರಿದೆ.
3/6
Share
ಮದುವೆಯಾಗಿ ಬಹುಕಾಲ ಮಕ್ಕಳಾಗದ ದಂಪತಿಗಳು ಮತ್ತು ಆರೋಗ್ಯಕರ ಕಂದಮ್ಮ ಅಪೇಕ್ಷಿಸುವ ನವದಂಪತಿಗಳು ಹರಕೆ ಕಟ್ಟಿಕೊಂಡು ಮಡಿಲು ತುಂಬಿ ತೊಟ್ಟಿಲಮಡು ಜಾತ್ರೆಯ ಮಹೋತ್ಸವದಲ್ಲಿ ಭಾಗಿಯಾಗಿದ್ದಾರೆ.
4/6
Share
ಹರಕೆ ಸಲ್ಲಿಸಲು ಬರುವ ದಂಪತಿಗಳು ಮಡಿಲುತುಂಬಿ ಚೆಲುವನಾರಾಯಣಸ್ವಾಮಿಯ ಪಾದುಕೆಯ ಪಲ್ಲಕ್ಕಿಯೋಡನೆ ಸಾಗಿ ಗಿರಿಶಿಖರಗಳ ಮಧ್ಯೆ ಇರುವ ಔಷದೀಯ ಗುಣವಿರುವ ತೀರ್ಥಗಳಲ್ಲಿ ಸ್ನಾನ ಮಾಡಬೇಕು.
5/6
Share
ಮಕ್ಕಳಭಾಗ್ಯ ಕರುಣಿಸುವ ಚೆಲುವನಾರಾಯಣಸ್ವಾಮಿಯ ‘ತೊಟ್ಟಿಲಮಡು ಜಾತ್ರೆ’ ಎಂದೇ ಪ್ರಖ್ಯಾತವಾದ ಮೇಲುಕೋಟೆ ಅಷ್ಠತೀರ್ಥೋತ್ಸವ ಅದ್ಧೂರಿಯಾಗಿ ಸಂಪನ್ನಗೊಂಡಿದೆ.
6/6
Share
ಮೈಸೂರು ದೊರೆ ರಾಜಒಡೆಯರ್ ಭಕ್ತಿಪೂರ್ವಕವಾಗಿ ಸಮರ್ಪಿಸಿದ ಅಮೂಲ್ಯವಾದ ಕೆಂಪು ಮತ್ತು ಗುಲಾಬಿ ಬಣ್ಣದ ವಜ್ರಗಳಿಂದ ಕೂಡಿದ ರಾಜಮುಡಿ ಕಿರೀಟವನ್ನು ಶ್ರೀದೇವಿಭೂದೇವಿ ಸಮೇತನಾದ ಶ್ರೀಚೆಲುವನಾರಾಯಣಸ್ವಾಮಿಗೆ ತೊಡಿಸಲಾಗಿದೆ.


Click it and Unblock the Notifications