Home / Photos
Tharun Sudhir Sonal Monteria: ತರುಣ್-ಸೋನಲ್ ಪ್ರೀವೆಡ್ಡಿಂಗ್ ಫೋಟೊ; ಮದುವೆ ದಿನಾಂಕ ಘೋಷಣೆ
ರಾಬರ್ಟ್, ಕಾಟೇರ ಯಶಸ್ವಿ ಸಿನಿಮಾಗಳ ನಿರ್ದೇಶಕ ತರುಣ್ ಸುಧೀರ್ ಮದುವೆಯಾಗಲು ಸಜ್ಜಾಗಿದ್ದಾರೆ. ನಟಿ ಸೋನಲ್ ಮೊಂತೆರೊ ಅವರನ್ನು ವರಿಸಲು ಸಜ್ಜಾಗಿದ್ದು, ಮದುವೆ ದಿನಾಂಕವನ್ನು ಘೋಷಣೆ ಮಾಡಿದ್ದಾರೆ.
1/8
Share
ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಲ್ ಮೊಂತೆರೊ ಅವರ ಮದುವೆ ದಿನಾಂಕ ಘೋಷಣೆಯಾಗಿದೆ. ವಿಶೇಷ ವಿಡಿಯೋ ಹಂಚಿಕೊಂಡಿರುವ ಜೋಡಿಗಳು ಮದುವೆ ದಿನಾಂಕವನ್ನು ಬಹಿರಂಗಪಡಿಸಿದ್ದಾರೆ.
2/8
Share
ಇಬ್ಬರದ್ದು ಕೂಡ ಪ್ರೇಮ ವಿವಾಹವಾಗಿದ್ದು, ಮನೆಯವರು ಕೂಡ ಮದುವೆಗೆ ಒಪ್ಪಿಗೆ ಕೊಟ್ಟಿದ್ದಾರೆ. ಎರಡೂ ಕುಟುಂಬಗಳ ಒಪ್ಪಿಗೆ ಪಡೆದು ಈ ಜೋಡಿ ಹಸೆಮಣೆ ಏರಲು ಸಜ್ಜಾಗಿದೆ.
3/8
Share
ಮದುವೆ ದಿನಾಂಕ ಘೋಷಣೆ ಮಾಡಲು ವಿಶೇಷ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಸಿನಿಮಾರಂಗದವರ ದೇವಸ್ಥಾನವೆಂದೇ ಪರಿಗಣಿಸಲಾಗುವ ಚಿತ್ರಮಂದಿರದಲ್ಲಿ ಇಬ್ಬರ ಪ್ರೀವೆಡ್ಡಿಂಗ್ ಫೋಟೊ ಶೂಟ್ ಮಾಡಲಾಗಿದೆ.
4/8
Share
ಬೆಂಗಳೂರಿನ ನವರಂಗ್ ಚಿತ್ರಮಂದಿರದಲ್ಲಿ ಪ್ರೀವೆಡ್ಡಿಂಗ್ ವಿಡಿಯೋ ಚಿತ್ರೀಕರಣ ಮಾಡಲಾಗಿದ್ದು, ಆಗಸ್ಟ್ 11ರಂದು ಇಬ್ಬರು ಮದುವೆಯಾಗುವುದಾಗಿ ಘೋಷಣೆ ಮಾಡಿದ್ದಾರೆ.
5/8
Share
ಇಬ್ಬರ ಮದುವೆ ಬಗ್ಗೆ ಹಲವು ದಿನಗಳಿಂದ ಸುದ್ದಿ ಇತ್ತಾದರೂ, ಇಬ್ಬರೂ ಕೂಡ ಹೆಚ್ಚಿನ ಮಾಹಿತಿ ಬಿಟ್ಟುಕೊಟ್ಟಿರಲಿಲ್ಲ, ಮದುವೆಗೆ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದು, ಅದ್ದೂರಿಯಾಗಿ ವಿವಾಹವಾಗಲು ಸಜ್ಜಾಗಿದ್ದಾರೆ.
6/8
Share
ತರುಣ್ ಸುಧೀರ್ ನಿರ್ದೇಶನದ ದರ್ಶನ್ ಅಭಿಯನದ ರಾಬರ್ಟ್ ಸಿನಿಮಾದಲ್ಲಿ ಸೋನೆಲ್ ಮೊಂತೆರೋ ನಟಿಸಿದ್ದರು. ಈ ಸಂದರ್ಭದಲ್ಲಿ ಇಬ್ಬರ ನಡುವೆ ಪರಿಚಯವಾಗಿದ್ದು ಬಳಿಕ ಅದು ಪ್ರೀತಿಯಾಗಿ ಬದಲಾಗಿದೆ, ಮನೆಯವರ ಒಪ್ಪಿಗೆ ಪಡೆದು ಮದುವೆಯಾಗುತ್ತಿರುವುದಾಗಿ ತರುಣ್ ಸುಧೀರ್ ಹೇಳಿದ್ದಾರೆ.
7/8
Share
ಮದುವೆಗೆ ಜೈಲಿನಲ್ಲಿರುವ ನಟ ದರ್ಶನ್ ಅವರನ್ನು ಕೂಡ ಆಹ್ವಾನಿಸಲಾಗಿದೆ. ದರ್ಶನ್ಗೆ ಜಾಮೀನು ಸಿಕ್ಕಿದ ನಂತರ ಮದುವೆಯಾಗಲು ನಿರ್ಧಾರ ಮಾಡಿದ್ದರೂ, ದರ್ಶನ್ ಮದುವೆ ಮುಂದೂಡದಂತೆ ಮನವಿ ಮಾಡಿದ್ದರು ಎನ್ನಲಾಗಿದೆ.
8/8
Share
ಬೆಂಗಳೂರಿನ ಕೆಂಗೇರಿ ಬಳಿ ಇರುವ ಪೂರ್ಣಿಮಾ ಕನ್ವೆಷನ್ ಹಾಲ್ನಲ್ಲಿ ಈ ಮದುವೆ ನಡೆಯಲಿದ್ದು, ಆಗಸ್ಟ್ 10ರಂದು ಆರತಕ್ಷತೆ ಹಾಗೂ ಆಗಸ್ಟ್ 11ರಂದು ಮುಹೂರ್ತ ನಡೆಯಲಿದೆ.


Click it and Unblock the Notifications