Home / Photos
ವಿಷ ಜಂತು ಕಚ್ಚಿದವರು ಈ ಬಾವಿ ನೀರು ಕುಡಿದರೆ ದೇಹದಲ್ಲಿ ವಿಷವೇ ಇರಲ್ಲ..!
By Mallika P
ಮಂಗಳೂರು ಶಿಬರೂರು ಶ್ರೀ ಕೊಡಮಣಿತ್ತಾಯ ದೈವಸ್ಥಾನದ ಪವಿತ್ರ ಬಾವಿಯ ನೀರಿನ ವಿಶೇಷತೆ ಬಗ್ಗೆ ಇಲ್ಲಿದೆ ಮಾಹಿತಿ
1/6
Share
ಮಂಗಳೂರಿನ ಕಟೀಲು ಸಮೀಪದ ಶಿಬರೂರು ಎಂಬಲ್ಲಿರುವ ಶ್ರೀ ಕೊಡಮಣಿತ್ತಾಯ ದೈವಸ್ಥಾನದ ಪವಿತ್ರ ಬಾವಿ ಇದ್ದು, ಈ ಬಾವಿಯಲ್ಲಿ ಸಿಗುವುದು ಮಾಮೂಲಿ ನೀರಲ್ಲ. ಬದಲಾಗಿ ಜೀವ ಉಳಿಸುವ ಸಂಜೀವಿನಿ.
2/6
Share
ಜಾತ್ರಾ ಮಹೋತ್ಸವದ 8 ದಿನದಲ್ಲಿ ಈ ದೈವಸ್ಥಾನಕ್ಕೆ ಲಕ್ಷಾಂತರ ಭಕ್ತರು ಬಂದು, ಈ ಪವಿತ್ರ ನೀರನ್ನು ಕೊಂಡೊಯ್ಯತ್ತಾರೆ. ಈ ನೀರನ್ನು ಕುಡಿಯುವುದರಿಂದ ವರ್ಷವಿಡೀ ದೇಹದಲ್ಲಿದ್ದ ವಿಷಕಾರಿ ಅಂಶಗಳು ಹೋಗುತ್ತದೆ.
3/6
Share
ಯಾವುದೇ ರೀತಿಯ ವಿಷ ಜಂತುಗಳು ಕಡಿದರೆ ಈ ಪವಿತ್ರ ಬಾವಿಯ ನೀರನ್ನು ಕುಡಿದು, ಅಲ್ಲಿನ ಮಣ್ಣನ್ನು ಹಾಕಿಕೊಂಡರೆ ವಿಷವೆಲ್ಲಾ ಇಳಿಯುತ್ತದೆ ಎನ್ನುವ ನಂಬಿಕೆ ಇದೆ.
4/6
Share
ನಾನಾ ಊರುಗಳಿಂದ ಬರುವ ಭಕ್ತರು ಈ ಆಧುನಿಕ ಯುಗದಲ್ಲೂ ಈ ನಂಬಿಕೆಯನ್ನು ಇಟ್ಟು ನೀರು ಹಾಗೂ ಮಣ್ಣನ್ನು ಕೊಂಡೊಯ್ಯಲು ಮುಗಿ ಬೀಳುತ್ತಾರೆ.
5/6
Share
ಶ್ರೀ ಕೊಡಮಣಿತ್ತಾಯ ದೈವಸ್ಥಾನದಲ್ಲಿ ವರ್ಷಕ್ಕೊಂದು ಬಾರಿ ನಡೆಯುವ ಇಲ್ಲಿನ ವಾರ್ಷಿಕ ಜಾತ್ರಾ ಮಹೋತ್ಸವದ ಎಂಟು ದಿನಗಳ ಕಾಲ ಈ ಬಾವಿಯ ನೀರನ್ನು ಅತೀ ಹೆಚ್ಚು ಭಕ್ತರಿಗೆ ತೆಗೆದು ನೀಡಲಾಗುತ್ತದೆ.
6/6
Share
ಹಳ್ಳಿ ಪ್ರದೇಶದ ಜನ ವಿಷ ಜಂತುಗಳ ಕಡಿತಕ್ಕೊಳಗಾದರೆ, ಈ ನೀರು ಹಾಗೂ ಮಣ್ಣಿನ ಮೊರೆ ಹೋಗುತ್ತಾರೆಯೇ ಹೊರತು ಆಸ್ಪತ್ರೆಗೆ ಹೋಗುವುದಿಲ್ಲ.


Click it and Unblock the Notifications