Home / Photos
ದಕ್ಷಿಣ ಕನ್ನಡದಲ್ಲಿ ಕಡಲ್ಕೊರೆತ; ರಸ್ತೆ, ಮನೆ ಸಮುದ್ರದ ಪಾಲು
By Dheeraj K
1/6
Share
ಮಂಗಳೂರು ಹೊರವಲಯದ ಉಳ್ಳಾಲದ ಸೋಮೇಶ್ವರ, ಉಚ್ಚಿಲ, ಬಟ್ಟಪ್ಪಾಡಿ, ಸಿ ಗ್ರೌಂಡ್ ಮುಂತಾದ ಪ್ರದೇಶಗಳಲ್ಲಿ ಕಡಲ ಕೊರೆತ ತೀವ್ರವಾಗಿದೆ. ಹಲವಾರು ರಸ್ತೆ, ಮನೆಗಳು ಸಮುದ್ರ ಪಾಲಾಗುವ ಭೀತಿ ಎದುರಾಗಿದೆ.
2/6
Share
ಕಡಲ್ಕೊರೆತದ ಬಗ್ಗೆ ಉಳ್ಳಾಲ ಶಾಸಕ ಯು. ಟಿ. ಖಾದರ್ ಮಾತನಾಡಿ ಕಡಲ್ಕೊರೆತ ತಡೆಯುವ ಶಾಶ್ವತ ಕಾಮಗಾರಿಗೆ ಸರ್ಕಾರ ಹಣ ಬಿಡುಗಡೆ ಮಾಡುತ್ತಿಲ್ಲಎಂದು ದೂರಿದರು.
3/6
Share
ಗ್ರಾಮ ಪಂಚಾಯತಿಯವರು ಮನೆಯ ಬಳಿ ಆಗಮಿಸಿ ಸ್ಥಳೀಯ ಶಾಲೆಗೆ ಹೋಗುವಂತೆ ಹೇಳಿದ್ದಾರೆ. ಆದರೆ ಮನೆ ಬಿಟ್ಟು ಹೋಗೋದು ಹೇಗೆ? ಮನೆಯ ಸಾಮಾಗ್ರಿಗಳನ್ನು ಸ್ಥಳಾಂತರ ಮಾಡಲು ಅವಕಾಶವಿಲ್ಲ ಎಂದು ಜನರು ಅಸಹಾಯಕತೆ ತೋಡಿಕೊಂಡಿದ್ದಾರೆ.
4/6
Share
ಕಳೆದ ನಾಲ್ಕು ದಿನಗಳಿಂದ ಈ ಭಾಗದಲ್ಲಿ ಕಡಲು ಕೊರೆತ ಜಾಸ್ತಿಯಾಗುತ್ತಿದೆ. ರಕ್ಕಸ ಗಾತ್ರದ ಅಲೆಗಳು ದಿನದಿಂದ ದಿನಕ್ಕೆ ಅತೀ ಹೆಚ್ಚು ಭೂ ಪ್ರದೇಶವನ್ನು ಆಹುತಿ ಪಡೆಯುತ್ತಿದೆ.
5/6
Share
ಬಟ್ಟಪಾಡಿ ಕಡಲ ತೀರದಲ್ಲಿ ಅಲೆಗಳ ಅಬ್ಬರಕ್ಕೆ ರಸ್ತೆ ಸಮುದ್ರಪಾಲಾಗಿದೆ. ರಸ್ತೆ ಸಂಪರ್ಕವೇ ಇಲ್ಲದೇ ಬಟ್ಟಪಾಡಿ ಗ್ರಾಮ ದ್ವೀಪದಂತಾಗಿದೆ. 30ಕ್ಕೂ ಅಧಿಕ ಮನೆಗಳ ನಿವಾಸಿಗಳು ಪರದಾಟ ನಡೆಸುತ್ತಿದ್ದಾರೆ.
6/6
Share
ದಕ್ಷಿಣ ಕನ್ನಡದಲ್ಲಿ ಮಳೆ ಮುಗಿದರೂ ಮಳೆಯ ಅವಾಂತರ ಕಡಿಮೆಯಾಗಿಲ್ಲ. ಅರಬ್ಬೀ ಸಮುದ್ರ ಬೋರ್ಗರೆಯುತ್ತಿದೆ. ಮಂಗಳೂರಿನ ಕಡಲ ಕಿನಾರೆಯಲ್ಲಿ ರಕ್ಕಸ ಗಾತ್ರದ ಅಲೆಗಳು ಕಡಲ್ಕೊರೆತ ಉಂಟು ಮಾಡುತ್ತಿವೆ.


Click it and Unblock the Notifications