Home / Photos
ಜಿ-20 ರಾಷ್ಟ್ರಗಳ ಪ್ರತಿನಿಧಿಗಳಿಂದ ಹಂಪಿ ಸ್ಮಾರಕ ವೀಕ್ಷಣೆ
By Mallika P
ಜಿ-20 ಸಾಂಸ್ಕೃತಿಕ ಕಾರ್ಯಕಾರಿ ಸಭೆಗಾಗಿ ಹಂಪಿಗೆ ಆಗಮಿಸಿದ ಅತಿಥಿ ರಾಷ್ಟ್ರಗಳ ಪ್ರತಿನಿಧಿಗಳು
1/6
Share
ವಿಶ್ವಪಾರಂಪರಿಕ ತಾಣ ಹಂಪಿಯಲ್ಲಿ ಜಿ-20 ಸಾಂಸ್ಕೃತಿಕ ಕಾರ್ಯಕಾರಿ ಸಭೆಗೆ ಆಗಮಿಸಿದ ಅತಿಥಿ ರಾಷ್ಟ್ರಗಳ ಪ್ರತಿನಿಧಿಗಳು ಐತಿಹಾಸಿಕ ತುಂಗಭದ್ರಾ ನದಿಯಲ್ಲಿ ಹರಿಗೋಲು ಸವಾರಿ (ಕೊರಾಕಲ್ ರೈಡ್) ಮಾಡಿದರು.
2/6
Share
ಹಂಪಿಯ ರಾಣಿ ಸ್ನಾನ ಗೃಹದ ಬಳಿ ಸಸಿಗಳನ್ನು ನೆಟ್ಟು ಪರಿಸರ ಉಳಿಸುವ ಅಭಿಯಾನ ಆರಂಭಿಸಿದರು.
3/6
Share
ಹಂಪಿಗೆ ಆಗಮಿಸಿದ ಪ್ರತಿನಿಧಿಗಳು ಹಂಪಿಯ ಚಕ್ರತೀರ್ಥದ ತುಂಗಭದ್ರಾ ನದಿಯಲ್ಲಿ ಹರಿಗೋಲು ಸವಾರಿ ಕೈಗೊಂಡು ಹಂಪಿಯ ಕಲ್ಲುಬಂಡೆ, ನದಿಯ ಪ್ರಾಕೃತಿಕ ಸೌಂದರ್ಯ ಸವಿದರು.
4/6
Share
ವಿಶ್ವಪಾರಂಪರಿಕ ತಾಣ ಹಂಪಿಯ ಸೌಂದರ್ಯಕ್ಕೆ ಅತಿಥಿ ರಾಷ್ಟ್ರಗಳ ಪ್ರತಿನಿಧಿಗಳು ಮನಸೋತಿದ್ದಾರೆ.
5/6
Share
ಜಿ-20 ರಾಷ್ಟ್ರಗಳ ಪ್ರತಿನಿಧಿಗಳು ಬ್ಯಾಟರಿ ಚಾಲಿತ ವಾಹನಗಳಲ್ಲಿ ಸುತ್ತಾಡಿ ಹಂಪಿಯ ಸ್ಮಾರಕಗಳನ್ನು ವೀಕ್ಷಣೆ ಮಾಡಿದರು.
6/6
Share
ಮಹಾನವಮಿ ದಿಬ್ಬ ಸ್ಮಾರಕ ವೀಕ್ಷಣೆ ಮಾಡಿದ ಜಿ-20 ರಾಷ್ಟ್ರಗಳ ಪ್ರತಿನಿಧಿಗಳು, ನವರಾತ್ರಿ ಸಮಯದಲ್ಲಿ ವಿಜಯನಗರದ ಅರಸರು ಒಂಬತ್ತು ದಿನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಈ ಸ್ಥಳದಲ್ಲಿ ನಡೆಸುತ್ತಿದ್ದರು ಎಂಬ ಚರಿತ್ರೆಯನ್ನು ತಿಳಿದುಕೊಂಡರು.


Click it and Unblock the Notifications