Home / Photos
100 ವರ್ಷ ಹಳೆಯ ಹೋಟೆಲ್ನಲ್ಲಿ ಸಿಗುತ್ತೆ ಸ್ವಾದಿಷ್ಟಭರಿತ ತುಪ್ಪದ ಮೈಸೂರು ಪಾಕ್
ರೇಷ್ಮೆನಗರಿ ರಾಮನಗರದಲ್ಲಿರುವ 100 ವರ್ಷ ಹಳೆಯ ಮೈಸೂರು ಪಾಕ್ ಹೋಟೆಲ್ ವಿಶೇಷತೆ ಏನು, ಇದನ್ನು ನಡೆಸುತ್ತಿರುವವರ ಹಿನ್ನೆಲೆ ಏನು ಅನ್ನುವ ವಿವರವನ್ನು ಫೋಟೋ ಸಹಿತ ಇಲ್ಲಿ ನೀಡಲಾಗಿದೆ ಗಮನಿಸಿ.
1/8
Share
ರೇಷ್ಮೆನಾಡು ಖ್ಯಾತಿಯ ರಾಮನಗರ ಶ್ರೀ ಜನಾರ್ದನ ಹೋಟೆಲ್ನಲ್ಲಿ ತಯಾರಾಗುವ ಸ್ವಾದಿಷ್ಟಭರಿತ ತುಪ್ಪದ ಮೈಸೂರು ಪಾಕು ತನ್ನ ಖ್ಯಾತಿಯನ್ನು ದೇಶ, ಹೊರದೇಶಗಳಿಗೂ ಪಸರಿಸಿದೆ. ನಾಡಿನ ಖ್ಯಾತ ನಾಮರ ಮನಸೂರೆಗೊಂಡ ಶ್ರೀ ಜನಾರ್ಧನ ಹೋಟೆಲ್ನ ಮೈಸೂರು ಪಾಕ್ಗೆ ಇದೀಗ 97 ವರ್ಷದ ಸಂಭ್ರಮ.
2/8
Share
ಇಲ್ಲಿ ಮೈಸೂರು ಪಾಕ್ ಪ್ರಿಯರಿಂದ ಜಗತ್ತಿನ ನಾನಾ ದೇಶಗಳಲ್ಲಿ ನೆಲಸಿರುವ ತಮ್ಮ ಬಂಧುಗಳಿಗೂ ಮೈಸೂರು ಪಾಕ್ ರವಾನಿಸುತ್ತಾರೆ. ಅಲ್ಲದೇ ಮೈಸೂರಿಗೆ ಭೇಟಿ ನೀಡುವ ಪ್ರವಾಸಿಗರು ಹೋಟೆಲ್ಗೆ ಭೇಟಿ ನೀಡಿ ಸವಿದು ತಮ್ಮವರಿಗಾಗಿ ಪಾರ್ಸೆಲ್ ತೆಗೆದುಕೊಂಡು ಹೋಗುತ್ತಾರೆ.
3/8
Share
ಜನಾರ್ದನಯ್ಯ ಅವರು 1962ರವರೆಗೆ ಹೋಟೆಲ್ ನಡೆಸಿಕೊಂಡು ಬಂದಿದ್ದರು. ನಂತರ ಅವರ ಮಗ ಪರಮೇಶ್ವರಯ್ಯ 2000ರವರೆಗೆ ಹೊಟೇಲ್ ಉದ್ಯಮ ಮುಂದುವರೆಸಿದರು. ನಂತರ ಮೂರನೇ ತಲೆಮಾರಿನ ಮೊಮ್ಮಗ ಜಿ.ಪಿ.ಪ್ರಶಾಂತ್ ಮುನ್ನಡೆಸುತ್ತಿದ್ದಾರೆ.
4/8
Share
ಇನ್ನೂ ಸಕ್ಕರೆ, ಕಡ್ಲೆಹಿಟ್ಟು ಬೆಲೆ ಏರಿಕೆಯಾದಗಲೂ ಮೈಸೂರು ಪಾಕ್ ಬೆಲೆ ಸ್ಥಿರವಾಗಿರುತ್ತದೆ. ಅದರೆ ತುಪ್ಪದ ಬೆಲೆ ಏರಿಕೆಯಾದಗ ಮಾತ್ರ ಮೈಸೂರು ಪಾಕ್ ಬೆಲೆ ಹೆಚ್ಚು ಮಾಡುತ್ತೇವೆ ಎನ್ನುತ್ತಾರೆ ಮಾಲೀಕ ಪ್ರಶಾಂತ್.
5/8
Share
1926ರಲ್ಲಿ ಒಂದು ಆಣೆ ರೂಪಾಯಿಗೆ ಒಂದು ಸೇರ್ ಲೆಕ್ಕದಲ್ಲಿ ಮಾರಾಟವಾಗುತ್ತಿದ್ದ ತುಪ್ಪದ ಮೈಸೂರು ಪಾಕು ಹಂತ ಹಂತವಾಗಿ ಪರಿಷ್ಕರಣೆಯಾಗಿ ಪ್ರಸ್ತುತ k.g.920. ಬೆಲೆಯಿದ್ದು, ಹೋಟೆಲ್ 105 ಗ್ರಾಂ ಮೈಸೂರು ಪಾಕ್ 100 ರೂಪಾಯಿಗೆ ನೀಡುತ್ತಿದ್ದಾರೆ.
6/8
Share
ಮೂರು ತಲೆಮಾರು ಸವೆಸಿದರೂ ತನ್ನ ರುಚಿ ಹಾಗೂ ಸ್ವಾದದಲ್ಲಿ ವ್ಯತ್ಯಾಸವಾಗದಂತೆ ಜಾಗ್ರತೆ ವಹಿಸಿದ್ದಾರೆ. ಹಾಗಾಗಿ ಇಲ್ಲಿನ ಮೈಸೂರು ಪಾಕ್ಗೆ ಈಗಲೂ ಬಹುಬೇಡಿಕೆ ಹೆಚ್ಚಿದೆ.
7/8
Share
ರೆಬಲ್ ಸ್ಟಾರ್ ಅಂಬರೀಶ್ ಸೇರಿದಂತೆ ಹಲವು ಸಿನಿ ದಿಗ್ಗಜರ ಪ್ರಸಂಶೆ ಪಡೆದಿರುವ ಶ್ರೀಜನಾರ್ಧನ ಹೋಟೆಲ್ ತುಪ್ಪದ ಮೈಸೂರು ಪಾಕ್, ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಹಾದಿಯಾಗಿ ಹಲವು ರಾಜಕಾರಣಿಗಳಿಗೂ ಅಚ್ಚುಮೆಚ್ಚು.
8/8
Share
ಸೌತ್ ಕೆನರಾ ಭಾಗದಿಂದ ಹಳೆ ಮೈಸೂರು ಭಾಗಕ್ಕೆ ವಲಸೆ ಬಂದ ಜನಾರ್ಧನಯ್ಯ ಎಂಬುವರು 1926ರಲ್ಲಿ ರಾಮನಗರದಲ್ಲಿ ಮೈಸೂರು ಪಾಕ್ ಮಾರಟ ಪ್ರಾರಂಭಿಸಿದರು. ಸ್ವತಂತ್ರ ಪೂರ್ವದಲ್ಲಿ ಪ್ರಾರಂಭವಾದ ಮೈಸೂರು ಪಾಕ್ ಹೋಟೆಲ್ ಅನ್ನು ಪ್ರಸ್ತುತ ಮೂರನೇ ತಲೆಮಾರಿನ ಪ್ರಶಾಂತ್ ಮುನ್ನೆಡೆಸುತ್ತಿದ್ದಾರೆ.


Click it and Unblock the Notifications