Home / Photos
Photos: ರಾಮ ನವಮಿಯಿಂದ ರಾಮಮಯವಾದ ಅಯೋಧ್ಯೆ: ರಾಮಲಲ್ಲಾನ ಹಣೆಗೆ ಸೂರ್ಯನಿಂದ ತಿಲಕ
By Sunitha B
ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮನವಮಿಯನ್ನು ಅತ್ಯಂತ ಸಡಗರ ಸಂಭ್ರದಿಂದ ಆಚರಿಸಲಾಗುತ್ತಿದೆ. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಯೋಧ್ಯೆಗೆ ಆಗಮಿಸಿದ್ದು ರಾಮನ ಹಣೆಗೆ ಸೂರ್ಯನ ಕಿರಣಗಳು ಬೀಳಲಿದೆ. ಲೈವ್ ವೀಕ್ಷಿಸಿ
1/6
Share
ರಾಮ ನವಮಿಯನ್ನು ದೇಶದಾದ್ಯಂತ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಈ ದಿನದಂದು ಶ್ರೀರಾಮನಿಗೆ ವಿಶೇಷ ಪೂಜೆಯನ್ನು ಮಾಡಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಭಗವಾನ್ ಶ್ರೀರಾಮನ ಕೃಪೆಯಿಂದ ವ್ಯಕ್ತಿಯ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ. ಧಾರ್ಮಿಕ ಪುರಾಣಗಳ ಪ್ರಕಾರ, ಭಗವಾನ್ ರಾಮನು ಚೈತ್ರ ಶುಕ್ಲ ಪಕ್ಷದ ಒಂಬತ್ತನೇ ದಿನದಂದು ತಾಯಿ ಕೌಶಲ್ಯೆಯ ಗರ್ಭದಿಂದ ಜನಿಸಿದನು. ಈ ವರ್ಷ ರಾಮ ನವಮಿಯ ಹಬ್ಬ ವಿಶೇಷವಾಗಿದೆ. ಈ ವರ್ಷ ಅಯೋಧ್ಯೆಯಲ್ಲೂ ರಾಮಲಲ್ಲಾನಿಗೆ ವಿಶೇಷ ಪೂಜೆ ನಡೆಯಲಿದೆ.
2/6
Share
ಅಯೋಧ್ಯೆ ಸಂಪೂರ್ಣ ರಾಮಮಯವಾಗಿದೆ. ರಾಮ ನವಮಿಯ ಹಬ್ಬವನ್ನು ಆಚರಿಸಲು ರಾಮನಗರಿ ಸಿದ್ಧವಾಗಿದೆ. ಈ ದಿನ ರಾಮಲಲ್ಲಾನ ಹಣೆಗೆ ಸೂರ್ಯನ ಕಿರಣಗಳು ಸ್ಪರ್ಶ ನಡೆಯಿತು. ರಾಮನವಮಿ ಪ್ರಯುಕ್ತ ರಾಮಲಲ್ಲಾ ಮಾತ್ರವಲ್ಲದೆ ರಾಮ ಮಂದಿರವನ್ನೂ ವಿಶೇಷವಾಗಿ ಅಲಂಕರಿಸಲಾಗಿದೆ. ಅಯೋಧ್ಯೆಗೆ ಆಗಮಿಸಿದ ಭಕ್ತರು ರಾಮಮಂದಿರದ ವಿಶೇಷ ಅಲಂಕಾರವನ್ನು ನೋಡಲು ಉತ್ಸುಕರಾಗಿದ್ದಾರೆ. ರಾಮನವಮಿ ನಿಮಿತ್ತ ನಿನ್ನೆ ರಾತ್ರಿ ಇಡೀ ರಾಮಮಂದಿರವನ್ನು ದೀಪಾಲಂಕಾರ ಮಾಡಲಾಗಿತ್ತು. ದೀಪ ಅಲಂಕಾರಗಳಿಂದ ಅಯೋಧ್ಯೆ ಕಂಗೊಳಿಸುತ್ತಿದೆ.
3/6
Share
ಸೂರ್ಯ ಅಭಿಷೇಕ ಸಮಯದಲ್ಲಿ ಸ್ವಲ್ಪ ಬದಲಾವಣೆ ಮಾಡಲಾಗಿದ್ದು, ಮಧ್ಯಾಹ್ನ 12.16ಕ್ಕೆ ಸೂರ್ಯ ಸ್ಪರ್ಶ ಸಮಯ ನಿಗದಿಯಾಗಿದೆ. ಈ ಸಮಯದಲ್ಲಿ ಸೂರ್ಯನ ಕಿರಣಗಳು ರಾಮಲಲ್ಲಾ ವಿಗ್ರಹದ ಮೇಲೆ ಸುಮಾರು 4 ರಿಂದ 6 ನಿಮಿಷಗಳ ಕಾಲ ಬೀಳಲಿದೆ. ಅಂದರೆ ಸೂರ್ಯ ರಾಮಲಲ್ಲಾನ ಹಣೆಗೆ ತಿಲಕವನ್ನು ಇಡಲಿದ್ದಾನೆ.
4/6
Share
ರಾಮನವಮಿಯಂದು ದರ್ಶನಕ್ಕೆ ಬರುವ ಭಕ್ತರಿಗೆ ಪ್ರಸಾದ ನೀಡಲಾಗುತ್ತಿದೆ. ಇದಲ್ಲದೇ 15 ಲಕ್ಷ ವಿಶೇಷ ಪ್ರಸಾದ ಪ್ಯಾಕೆಟ್ಗಳನ್ನು ವಿತರಿಸಲಾಗುವುದು. ದರ್ಶನ್ ಮಾರ್ಗದಲ್ಲಿ ನೆರಳು ನೀಡಲು ಜರ್ಮನ್ ಹ್ಯಾಂಗರ್ಗಳನ್ನು ಅಳವಡಿಸಲಾಗಿದೆ. ಬಿಸಿಲಿಗೆ ಕಾಲು ಸುಟ್ಟು ಹೋಗದಂತೆ ಚಾಪೆಗಳನ್ನು ಹಾಕಲಾಗಿದೆ. ದರ್ಶನ ಮಾರ್ಗದಲ್ಲಿ ಕುಡಿಯುವ ನೀರು ಮತ್ತು ಶೌಚಾಲಯಕ್ಕೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಪ್ರಸಾದಕ್ಕೆ ಸಾಕಷ್ಟು ವ್ಯವಸ್ಥೆ ಮಾಡಲಾಗಿದೆ.
5/6
Share
ರಾಮಲಲ್ಲಾ ಹಣೆಗೆ ಸೂರ್ಯನ ಕಿರಣಗಳು ಸ್ಪರ್ಶ ಮಾಡುವ ಸಮಯದಲ್ಲಿ ಅದು ಇನ್ನಷ್ಟು ಹೊಳೆಯುವಂತೆ ಮಾಡಲು ಕುಂಕುಮ ಹಾಗೂ ಶ್ರೀಗಂಧದ ಬದಲಿಗೆ, ವಜ್ರ, ನೀಲಮಣಿ ಮತ್ತು ಮಾಣಿಕ್ಯದ ಮಿಶ್ರಣದ ತಿಲಕವನ್ನು ರಾಮನ ಹಣೆಯ ಮೇಲೆ ಲೇಪಿಸಲಾಗಿದೆ. ಇಂದು ಮಧ್ಯಾಹ್ನ ಸರಿಯಾಗಿ 12.15ಕ್ಕೆ ರಾಮಲಲ್ಲಾನ ಹಣೆಗೆ ಸೂರ್ಯ ಅಭಿಷೇಕ ನಡೆಯಲಿದೆ. ರಾತ್ರಿ 11ರವರೆಗೆ ಏಳು ಸಾಲುಗಳಲ್ಲಿ ಈ ದರ್ಶನ ನಿರಂತರವಾಗಿ ನಡೆಯಲಿದೆ. ಇದೇ ವೇಳೆ ಶ್ರೀರಾಮನಿಗೆ 56 ಭೋಗ್ ಕೂಡ ನೀಡಲಾಗುವುದು. ದಿನವಿಡೀ ಅವರ ಆರತಿ ಮತ್ತು ಭೋಗ್ ಸಮಯದಲ್ಲಿ ದರ್ಶನಕ್ಕೆ ಕೆಲವು ನಿಮಿಷಗಳ ಕಾಲ ಅಡ್ಡಿಯಾಗುತ್ತದೆ, ಆದರೆ ಭಕ್ತರನ್ನು ನಿಲ್ಲಿಸಲಾಗುವುದಿಲ್ಲ.
6/6
Share
ಅಯೋಧ್ಯೆಯ ರಾಮಮಂದಿರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಅವರು, ಉತ್ಸವದ ಎಲ್ಲಾ ವ್ಯವಸ್ಥೆಗಳನ್ನು ಟ್ರಸ್ಟ್ ನೋಡಿಕೊಳ್ಳುತ್ತದೆ ಎಂದು ಹೇಳಿದ್ದಾರೆ. ದೇವಸ್ಥಾನ ಮತ್ತು ರಾಮನ ವಿಗ್ರಹವನ್ನು ಈ ಸಂದರ್ಭಕ್ಕಾಗಿ ವಿಶೇಷವಾಗಿ ಅಲಂಕರಿಸಲಾಗಿದೆ. ದೇವರಿಗೆ ಹಳದಿ ವಸ್ತ್ರವನ್ನು ಹಾಕಲಾಗಿದೆ. ಆಚರಣೆಯ ಭಾಗವಾಗಿ, ವಿಗ್ರಹವನ್ನು ಪಂಚಾಮೃತದಿಂದ ಸ್ನಾನ ಮಾಡಿಸಲಾಗಿದೆ. ನಂತರ ವಿವಿಧ ಭಕ್ಷ್ಯಗಳು ಮತ್ತು 56 ವಿವಿಧ ರೀತಿಯ ಪ್ರಸಾದವನ್ನು ಭಗವಂತನಿಗೆ ಅರ್ಪಿಸಲಾಗಿದೆ.


Click it and Unblock the Notifications