Home / Photos
Photos: ಮಹಾ ಕುಂಭಮೇಳಕ್ಕೆ ಪ್ರಯಾಗ್ರಾಜ್ ಸಿದ್ಧ: ದೇಶ ವಿದೇಶದಿಂದ ಜನಾಗಮನ
By Sunitha B
ಮಹಾ ಕುಂಭಮೇಳಕ್ಕೆ ಉತ್ತರಪ್ರದೇಶದ ಪ್ರಯಾಗ್ರಾಜ್ ಸಿದ್ಧವಾಗುತ್ತಿದೆ. ದೇಶ ವಿದೇಶದಿಂದ ಜನ ಆಗಮಿಸುತ್ತಿದ್ದಾರೆ. ಈ ಮಹಾಕುಂಭಮೇಳ 12 ವರ್ಷಗಳಿಗೊಮ್ಮೆ ನಡೆಯುತ್ತದೆ. ಆದ್ದರಿಂದ ಮಹಾಕುಂಭದ ಮಹತ್ವವು ಇನ್ನಷ್ಟು ಹೆಚ್ಚಾಗುತ್ತದೆ. ಪ್ರಸ್ತುತ ಪ್ರಯಾಗರಾಜ್ನ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿವೆ.
1/7
Photo Credit: PTI
Share
ಪ್ರಯಾಗ್ರಾಜ್: ಹಿಂದೂ ಧರ್ಮದಲ್ಲಿ ಮಹಾಕುಂಭಮೇಳಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. 2025ರಲ್ಲಿ ಪ್ರಯಾಗರಾಜ್ನಲ್ಲಿ ಕುಂಭಮೇಳವನ್ನು ಆಯೋಜಿಸಲಾಗುತ್ತಿದೆ. ಈ ಮಹಾಕುಂಭಮೇಳ 12 ವರ್ಷಗಳಿಗೊಮ್ಮೆ ನಡೆಯುತ್ತದೆ. ಆದ್ದರಿಂದ ಮಹಾಕುಂಭದ ಮಹತ್ವವು ಇನ್ನಷ್ಟು ಹೆಚ್ಚಾಗುತ್ತದೆ. ಪ್ರಯಾಗರಾಜ್ಗೆ ಈಗಾಗಲೇ ಭಕ್ತರ ದಂಡು ಆಗಮಿಸುತ್ತಿದ್ದು ಸ್ವಯಂಸೇವಕರು ಭಕ್ತರಿಗೆ ಆಹಾರವನ್ನು ತಯಾರಿಸುತ್ತಿರುವುದು ಕಂಡು ಬಂದಿದೆ. (ಡಿಸೆಂಬರ್ 31, 2024)
2/7
Photo Credit: PTI
Share
ಪ್ರಯಾಗರಾಜ್: ಮಹಾಕುಂಭದಲ್ಲಿ ಸ್ನಾನ ಮಾಡುವುದರಿಂದ ಭಕ್ತರು ಪುಣ್ಯ ಫಲವನ್ನು ಪಡೆಯುತ್ತಾರೆ. ತನ್ನ ಜೀವಿತಾವಧಿಯಲ್ಲಿ ಮಹಾ ಕುಂಭಮೇಳದಲ್ಲಿ ಸ್ನಾನ ಮಾಡುವವನು ಮೋಕ್ಷವನ್ನು ಪಡೆಯುತ್ತಾನೆ ಎಂದು ನಂಬಲಾಗಿದೆ. ತಂಪಾದ ಚಳಿಗಾಲದ ಬೆಳಿಗ್ಗೆ ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಮಾಡಿದ ನಂತರ ಭಕ್ತರೊಬ್ಬರು 'ಗಂಗಾ ಆರತಿ' ಮಾಡುತ್ತಿರುವ ದೃಶ್ಯ ಕಂಡು ಬಂದಿದೆ. (ಡಿಸೆಂಬರ್ 31, 2024)
3/7
Photo Credit: PTI
Share
ಪ್ರಯಾಗ್ರಾಜ್: ಕುಂಭವು ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತದ ಪ್ರಮುಖ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ಕುಂಭಮೇಳದಲ್ಲಿ ಸ್ನಾನ ಮಾಡಲು ಕೋಟಿಗಟ್ಟಲೆ ಜನ ಬರುತ್ತಾರೆ. 2025ರ ಮಹಾ ಕುಂಭಮೇಳಕ್ಕೆ ಮುಂಚಿತವಾಗಿ ಗಂಗಾ ನದಿಯಲ್ಲಿ ಭಕ್ತರು ಪವಿತ್ರ ಸ್ನಾನ ಮಾಡಿ ದೇವರ ಪ್ರಾರ್ಥನೆ ಹಾಗೂ ಆರಾಧನೆಯಲ್ಲಿ ಮುಳುಗಿದ್ದಾರೆ. (ಡಿಸೆಂಬರ್ 31, 2024)
4/7
Photo Credit: PTI
Share
ಪ್ರಯಾಗ್ರಾಜ್: ಮಹಾಕುಂಭವನ್ನು ಧಾರ್ಮಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ವಿಶ್ವದ ಅತಿದೊಡ್ಡ ಮೇಳ ಎಂದು ಹೇಳಲಾಗುತ್ತದೆ. ಈ ಮಹಾಕುಂಭ ಮೇಳ ಭಾರತದಲ್ಲಿ ಪ್ರಯಾಗರಾಜ್, ಹರಿದ್ವಾರ, ನಾಸಿಕ್ ಮತ್ತು ಉಜ್ಜಯಿನಿಯಲ್ಲಿ 4 ಸ್ಥಳಗಳಲ್ಲಿ ಮಾತ್ರ ನಡೆಯುತ್ತದೆ. ಮಹಾ ಕುಂಭಮೇಳದ ತಯಾರಿಯ ಭಾಗವಾಗಿ ಸಂಗಮ್ ದಂಡೆಯಲ್ಲಿ ಭೂಮಿಯನ್ನು ಸಮತಟ್ಟು ಮಾಡಲು ಟ್ರ್ಯಾಕ್ಟರ್ ಅನ್ನು ಬಳಸಲಾಗುತ್ತಿದೆ. (ಡಿಸೆಂಬರ್ 30, 2024)
5/7
Photo Credit: PTI
Share
ಪ್ರಯಾಗ್ರಾಜ್: ಮಹಾಕುಂಭದ ಸಮಯದಲ್ಲಿ ನಾಗಾ ಸಾಧುಗಳು ಮೊದಲು ಸ್ನಾನ ಮಾಡುತ್ತಾರೆ. ಮಹಾಕುಂಭದಲ್ಲಿ ಸ್ನಾನ ಮಾಡಿದ ನಂತರ ವ್ಯಕ್ತಿಯ ಎಲ್ಲಾ ಪಾಪಗಳು ತೊಳೆದುಹೋಗುತ್ತವೆ ಎಂದು ನಂಬಲಾಗುತ್ತದೆ. ಮಹಾ ಕುಂಭಮೇಳ 2025ರ ಪೂರ್ವದಲ್ಲಿ ಸೋಮವಾರದಂದು ಶ್ರೀ ಪಂಚಾಯತ್ ಅಖಾರ ನಿರಂಜನಿಯ 'ಧರ್ಮ ಧ್ವಜ ಪೂಜೆ' ಸಮಾರಂಭದಲ್ಲಿ 'ಸಾಧುಗಳು' ಭಾಗಿಯಾದರು. (ಡಿ. 30, 2024)
6/7
Photo Credit: PTI
Share
ಪ್ರಯಾಗರಾಜ್: ಕುಂಭವು ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತದ ಪ್ರಮುಖ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ಕುಂಭಮೇಳದಲ್ಲಿ ಸ್ನಾನ ಮಾಡಲು ಕೋಟಿಗಟ್ಟಲೆ ಜನ ಬರುತ್ತಾರೆ. ಶ್ರೀ ಪಂಚಾಯತ್ ಅಖಾರ ನಿರಂಜನಿಯ 'ಧರ್ಮ ಧ್ವಜ ಪೂಜೆ' ಸಮಾರಂಭದಲ್ಲಿ 'ಸಾಧುಗಳು' ಭಾಗಿಯಾದರು.(ಡಿ. 30, 2024)
7/7
Photo Credit: PTI
Share
ಪ್ರಯಾಗ್ರಾಜ್: ಒಂದೇ ದಿನದಲ್ಲಿ ಮಹಾ ಕುಂಭಮೇಳದಲ್ಲಿ ಪಾಲ್ಗೊಳ್ಳುವ ಭಕ್ತಾದಿಗಳ ಸಂಖ್ಯೆ ಬೇರೆ ಯಾವುದೇ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಕಂಡುಬರುವುದಕ್ಕಿಂತ ಹೆಚ್ಚಾಗಿರುತ್ತದೆ. ಸೂರ್ಯ, ಗುರು ಮತ್ತು ಚಂದ್ರನ ಸ್ಥಾನಗಳನ್ನು ನೋಡಿ ಮಹಾಕುಂಭದ ಸ್ಥಳವನ್ನು ಆಯ್ಕೆ ಮಾಡಲಾಗುತ್ತದೆ. ನೂರಾರು ವರ್ಷಗಳಿಂದ ಮಹಾಕುಂಭ ಜಾತ್ರೆ ನಿರಂತರವಾಗಿ ನಡೆಯುತ್ತಿದೆ.(ಡಿ. 30, 2024)


Click it and Unblock the Notifications