Home / Photos
Mahakumbh Mela 2025: ಪ್ರಯಾಗ್ರಾಜ್ ಮಹಾ ಕುಂಭಮೇಳ ಆರಂಭದ ವಿಶೇಷ ಕ್ಷಣದ ಫೋಟೋಗಳು
By Mallika P
ಉತ್ತರ ಪ್ರದೇಶದ ಪ್ರಯಾಗ್ ರಾಜ್ನಲ್ಲಿ 12 ವರ್ಷಕ್ಕೊಮ್ಮೆ ನಡೆಯುವ ಮಹಾ ಕುಂಭಮೇಳ ನಡೆಯಲಿದ್ದು, ಈಗಾಗಲೇ ಸಿದ್ಧತೆ ಜೋರಾಗಿ ನಡೆಯುತ್ತಿದೆ.
1/7
Share
ಉತ್ತರ ಪ್ರದೇಶದ ಪ್ರಯಾಗ್ ರಾಜ್ನಲ್ಲಿರುವ ಗಂಗಾ, ಯಮುನಾ ಹಾಗೂ ಸರಸ್ವತಿ ನದಿಗಳ ಸಂಗಮ ಕ್ಷೇತ್ರವಾದ ತ್ರಿವೇಣಿ ಸಂಗಮದಲ್ಲಿ 2025ರ ಜನವರಿ 13ರಿಂದ ಫೆಬ್ರವರಿ 26ರವರೆಗೆ 12 ವರ್ಷಕ್ಕೊಮ್ಮೆ ನಡೆಯುವ ಮಹಾ ಕುಂಭಮೇಳ ನಡೆಯಲಿದೆ. ಸಾಧು-ಸಂತರು, ನಾಗ ಸಾಧುಗಳು, ಪಂಡಿತರು ಸೇರಿದಂತೆ ಕೋಟ್ಯಂತರ ಭಕ್ತರು ಮಹಾ ಕುಂಭಮೇಳದಲ್ಲಿ ಭಾಗಿಯಾಗಲು ಆಗಮಿಸುತ್ತಿದ್ದಾರೆ.
2/7
Share
ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿರುವ ಸಂಗಮದಲ್ಲಿ ಹೊಸ ವರ್ಷದ ಮೊದಲ ದಿನ ಅಂದರೆ ಜನವರಿ 1, 2025 ಬುಧವಾರದಂದು ಪುರೋಹಿತರೊಂದಿಗೆ 'ಮಹಿಳಾ ಬಟುಕ್' ಗಂಗಾ ಆರತಿ ಮಾಡಿದ್ದಾರೆ.
3/7
Share
ಪ್ರಯಾಗ ರಾಜ್ಗೆ ಈಗಾಗಲೇ ಸಾವಿರಾರು ನಾಗ ಸಾಧುಗಳು ಆಗಮಿಸಿದ್ದು, ತಮಗೆ ನಿಗದಿ ಮಾಡಲಾದ ಶಿಬಿರಗಳಲ್ಲಿ ಹೋಮ-ಹವನಗಳನ್ನು ನಡೆಸುತ್ತಿದ್ದಾರೆ. ನಾಗ ಸಾಧುಗಳು ಮಂತ್ರ ಪಠಣ ಹಾಗೂ ಧ್ಯಾನದಲ್ಲಿ ನಿರತರಾಗಿದ್ದು, ಮಹಾ ಕುಂಭ ಮೇಳದ ಪೂಜೆ ಸಜ್ಜಾಗುತ್ತಿದ್ದಾರೆ.
4/7
Share
ಶ್ರೀ ಪಂಚದಶನಂ ಆವಾಹನ್ ಅಖಾರವು ಮಹಾ ಕುಂಭಮೇಳಕ್ಕಾಗಿ ಕ್ಷೇತ್ರಕ್ಕೆ ಆಗಮಿಸಿದ ಸಂತರರನ್ನು ಸ್ವಾಗತಿಸಲು 'ಛಾವ್ನಿ ಪ್ರವೇಶ' ಮೆರವಣಿಗೆಯನ್ನು ನಡೆಸಿದ್ದು, ಅಪಾರ ಸಂಖ್ಯೆಯ ಭಕ್ತರು ಹಾಗೂ ಮಹಾಕುಂಭದ ಆಡಳಿತ ವರ್ಗವು ಅವರನ್ನು ಅದ್ಧೂರಿಯಾಗಿ ಸ್ವಾಗತಿಸಿಕೊಂಡರು.
5/7
Share
ಹೊಸ ವರ್ಷದ ಮೊದಲ ದಿನ ಪ್ರಯಾಗರಾಜ್ನಲ್ಲಿರುವ ಸಂಗಮದಲ್ಲಿ ಮಹಾಕುಂಭದ ಮುಂದೆ 'ಛಾವ್ನಿ ಪ್ರವೇಶ' ಅಥವಾ ರಾಜಮನೆತನದ ಪ್ರವೇಶ ಮೆರವಣಿಗೆಯಲ್ಲಿ ಶ್ರೀಪಂಚಾಯತ್ ಅಟಲ್ ಅಖಾಡದ ಟ್ಯಾಬ್ಲೋ ಹಾದು ಹೋಗಿದೆ.
6/7
Share
ಶ್ರೀ ಪಂಚಾಯತಿ ಅಟಲ್ ಅಖಾಡದ ನಾಗಾ ಸಾಧುಗಳು ಪ್ರಯಾಗ್ ರಾಜ್ನಲ್ಲಿರುವ ಸಂಗಮದಲ್ಲಿ ಮಹಾಕುಂಭದ ಪೂರ್ವಭಾವಿಯಾಗಿ ನಡೆದ 'ಛಾವ್ನಿ ಪ್ರವೇಶ' ಅಥವಾ ರಾಜಮನೆತನದ ಪ್ರವೇಶ ಮೆರವಣಿಗೆಯಲ್ಲಿ ಭಾಗಿಯಾಗಿದ್ದಾರೆ.
7/7
Share
ನಮ್ಮ ದೇಶ ಮಾತ್ರವಲ್ಲದೇ ವಿಶ್ವದಲ್ಲೇ ಅತಿ ದೊಡ್ಡ ಧಾರ್ಮಿಕ ಉತ್ಸವ ಎಂದರೆ ಅದು ಕುಂಭ ಮೇಳ. ಈ ಕುಂಭ ಮೇಳದಲ್ಲಿ ಭಕ್ತರು, ಸಾಧು-ಸಂತರು, ನಾಗಸಾಧುಗಳು, ಪಂಡಿತರು ಸೇರಿದಂತೆ ಕೋಟ್ಯಂತರ ಜನರು ಭಾಗಿಯಾಗುತ್ತಾರೆ. ಈ ಬಾರಿ ಉತ್ತರ ಪ್ರದೇಶದ ಪ್ರಯಾಗರಾಜ್ನಲ್ಲಿ ಅತಿದೊಡ್ಡ ಮಹಾ ಕುಂಭಮೇಳ ನಡೆಯುತ್ತಿದ್ದು, ಈಗಾಗಲೇ ಸಕಲ ಸಿದ್ಧತೆಯೊಂದಿಗೆ ಪ್ರಯಾಗರಾಜ್ ಸಜ್ಜಾಗಿದೆ.


Click it and Unblock the Notifications