Home / Photos
Photos: ಮೈಸೂರು ಚಲೋ ಪಾದಯಾತ್ರೆಯ ವಿಶೇಷ ಫೋಟೋಗಳು ಇಲ್ಲಿದೆ
By Mallika P
ಕಾಂಗ್ರೆಸ್ ಸರ್ಕಾರ ವಿರುದ್ಧ ಹಾಗೂ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಮತ್ತು ಜೆಡಿಎಸ್ ಜಂಟಿಯಾಗಿ ನಡೆಸುತ್ತಿರುವ ಪಾದಯಾತ್ರೆ ದಿನದಿಂದ ದಿನಕ್ಕೆ ಯಶಸ್ವಿಯಾಗಿ ಸಾಗುತ್ತಿದೆ.
1/6
Share
ಮುಡಾ ಹಗರಣ ಹಾಗೂ ವಾಲ್ಮೀಕಿ ಹಗರಣವನ್ನು ಖಂಡಿಸಿ, ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಮತ್ತು ಜೆಡಿಎಸ್ ಜಂಟಿಯಾಗಿ ಪಾದಯಾತ್ರೆಯನ್ನು ಹಮ್ಮಿಕೊಂಡಿದೆ. ಬೆಂಗಳೂರು- ಮೈಸೂರು ಪಾದಯಾತ್ರೆಯಲ್ಲಿ ಎರಡೂ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಉತ್ಸಾಹದಿಂದಲೇ ಹೆಜ್ಜೆ ಹಾಕುತ್ತಿದ್ದಾರೆ.
2/6
Share
ಬೆಂಗಳೂರಿನಿಂದ ಆರಂಭವಾದ ಮೈಸೂರು ಚಲೋ ಪಾದಯಾತ್ರೆ ಆರನೇ ದಿನ ಮಂಡ್ಯ ಜಿಲ್ಲೆಯ ತೂಬಿನ ಕೆರೆಯಿಂದ ಆರಂಭವಾಗಿ ಜನಶಕ್ತಿಯ ವ್ಯಾಪಕ ಬೆಂಬಲದ ಸ್ವರೂಪ ಪಡೆದು ಯಶಸ್ವಿಯಾಗಿ ಸಾಗಿದೆ. ರಾಜ್ಯದ ಕಡು ಭ್ರಷ್ಟ ಹಾಗೂ ದುರಾಡಳಿತದ ಹಣೆಪಟ್ಟಿ ಕಟ್ಟಿಕೊಂಡಿರುವ ಕಾಂಗ್ರೆಸ್ ಸರ್ಕಾರವನ್ನು ತೊಲಗಿಸಲು ಯಾತ್ರೆ ಸಾಗಿದ ಪ್ರತಿ ಹೆಜ್ಜೆಯೂ ಸಂಕಲ್ಪವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದ್ದಾರೆ.
3/6
Share
ದಿನಕ್ಕೊಂದು ಬೆಲೆ ಏರಿಕೆಯ ಬರೆ ಎಳೆಯುತ್ತಾ ಭ್ರಷ್ಟಾಚಾರದಲ್ಲಿ ಮುಳುಗಿರುವ ಕಾಂಗ್ರೆಸ್ ಸರ್ಕಾರ ಹಾಗೂ ಭ್ರಷ್ಟ ಮುಖ್ಯಮಂತ್ರಿಗಳ ರಾಜೀನಾಮೆ ನೀಡುವವರೆಗೂ ನಮ್ಮ ಹೋರಾಟ ಜನಬೆಂಬಲ ದೊಂದಿಗೆ ಮುಂದುವರಿಯಲಿದೆ ಎಂದು ಬಿಜೆಪಿ- ಜೆಡಿಎಸ್ ನಾಯಕರು ಜಂಟಿಯಾಗಿ ಪಾದಯಾತ್ರೆ ನಡೆಸುತ್ತಿದ್ದಾರೆ.
4/6
Share
ಬಡವರ ನಿವೇಶನಗಳನ್ನು ಅಕ್ರಮವಾಗಿ ಕಬಳಿಸಿರುವ ಮುಡಾ ಹಗರಣ, ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಲೂಟಿ ಸೇರಿದಂತೆ ಸರಣಿ ಹಗರಣಗಳು ಹಾಗೂ ಜನವಿರೋಧಿ ರೈತ ವಿರೋಧಿ ನಿಲುವುಗಳನ್ನು ಖಂಡಿಸಿ ಭ್ರಷ್ಟ ಸಿಎಂ ತೊಲಗಿಸುವವರೆಗೂ ವಿರಮಿಸದೇ ಹೋರಾಡುವ ಸಂಕಲ್ಪವನ್ನು ಬಿಜೆಪಿ- ಜೆಡಿಎಸ್ ನಾಯಕರು ಮಾಡಿಕೊಂಡಿದ್ದಾರೆ.
5/6
Share
ಬಿಜೆಪಿ- ಜೆಡಿಎಸ್ ನಾಯಕರು ನಡೆಸುತ್ತಿರುವ ಮೈಸೂರು ಚಲೋ ಪಾದಯಾತ್ರೆಯಲ್ಲಿ ಎರಡು ಪಕ್ಷದ ಕಾರ್ಯಕರ್ತರಲ್ಲದೇ ರಾಜ್ಯದ ಮೂಲೆ ಮೂಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ರೈತರು ಹಾಗೂ ಇತರ ಸಂಘಟನೆಗಳ ಕಾರ್ಯಕರ್ತರು ಭಾಗಿಯಾಗುತ್ತಿರುವುದು ಉಭಯ ಪಕ್ಷಗಳ ನಾಯಕರಿಗೆ ಮತ್ತಷ್ಟು ಶಕ್ತಿ ಬಂದಂತಾಗಿದೆ.
6/6
Share
ಮೈಸೂರು ಚಲೋ ಪಾದಯಾತ್ರೆ ಜನಸಾಮಾನ್ಯರ ಪರವಾದ ಚಳುವಳಿ ಎಂದಿರುವ ಬಿಜೆಪಿ- ಜೆಡಿಎಸ್ ನಾಯಕರು ಶೋಷಿತರಿಗೆ ನ್ಯಾಯ ಒದಗಿಸಲು ಮೈಸೂರು ಚಲೋ ಪಾದಯಾತ್ರೆ, ಜನಸಾಮಾನ್ಯರ ಹಣ ಲೂಟಿ ಮಾಡಿದ ಕಾಂಗ್ರೆಸ್ ತೊಲಗಿಸಲು ಮೈಸೂರು ಚಲೋ ಎಂದು ತಮ್ಮ ವಿವಿಧ ಉದ್ದೇಶ್ಳನ್ನು ಜನರಿಗೆ ತಲುಪಿಸುತ್ತಿದ್ದಾರೆ.


Click it and Unblock the Notifications