Home / Photos
Photos: ಮತ್ತೆ ಮದುವೆಯಾದ ಶಿವರಾಜ್ಕುಮಾರ್ ಗೀತಾ
By Sunitha B
ಸ್ಯಾಂಡಲ್ವುಡ್ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅವರು ಇಂದು ಷಷ್ಟಿಪೂರ್ತಿ ನಿಮಿತ್ತ ದೇವಸ್ಥಾನದಲ್ಲಿ ಪತ್ನಿ ಗೀತಾ ಅವರೊಂದಿಗೆ ಪೂಜೆ ಸಲ್ಲಿಸಿದರು.
1/6
Share
ಸ್ಯಾಂಡಲ್ವುಡ್ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅವರು ಇಂದು ಷಷ್ಟಿಪೂರ್ತಿ ನಿಮಿತ್ತ ದೇವಸ್ಥಾನದಲ್ಲಿ ಪತ್ನಿ ಗೀತಾ ಅವರೊಂದಿಗೆ ಪೂಜೆ ಸಲ್ಲಿಸಿದರು.
2/6
Share
ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿವೆ. ಒಂದು ಸಾವಿರ ವರ್ಷಗಳ ಇತಿಹಾಸ ಇರುವ ಅಭಿರಾಮಿ ಅಮೃತ ಕದೇಶ್ವರರ್ ದೇವಸ್ಥಾನದಲ್ಲಿ ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಅವರ ಷಷ್ಟಿಪೂರ್ತಿ ಕಾರ್ಯಕ್ರಮ ನಡೆದಿದೆ.
3/6
Share
ಬಾಲ್ಯದ ಗೆಳೆಯರ ಕುಟುಂಬದ ಜೊತೆ ಶಿವಣ್ಣ ಹಾಗೂ ಗೀತಾ ಷಷ್ಟಿಪೂರ್ತಿ ಕಾರ್ಯಕ್ರಮದಲ್ಲಿ ಭಾಗಿಯಾದರು. ತಮಿಳುನಾಡಿನಲ್ಲಿ ಪುರಾತನ ಕಾಲದ ದೇವಸ್ಥಾನ ಹಾಗೇ ತಿರುಕ್ಕಡೈಯೂರ್ ಎಂಬ ಹೆಸರಿನಲ್ಲಿ ಈ ದೇವಸ್ಥಾನ ಪ್ರಸಿದ್ದವಾಗಿದೆ.
4/6
Share
ಶಿವಣ್ಣ ಗೀತಾ ಅವರಿಗೆ ಷಷ್ಟಿಪೂರ್ತಿ ಕಾರ್ಯಕ್ರಮದಲ್ಲಿ ತಾಳಿಯನ್ನು ಕಟ್ಟಿದರು. 60 ವರ್ಷ ಪೂರ್ಣಗೊಳಿಸಿದಾಗ ಷಷ್ಠಿಪೂರ್ತಿ ಪೂಜೆ ನೆರೆವೇರಿಸುತ್ತಾರೆ. 60 ವರ್ಷಗಳ ಕಾಲ ಒಟ್ಟಿಗೆ ಬಾಳುವುದು ಷಷ್ಟಿಪೂರ್ತಿ ಪೂಜೆಯ ಉದ್ದೇಶವಾಗಿದೆ.
5/6
Share
ತೆರೆಯ ಮೇಲೆ ಯಂಗ್ ಆಗಿ ಕಾಣುವ ಶಿವರಾಜುಕುಮಾರ್ ಅವರಿಗೆ ಈಗ 62 ವರ್ಷ. ಆಧ್ಯಾತ್ಮಿಕವಾಗಿ ಈ ಷಷ್ಟಿಪೂರ್ತಿಗೆ ವಿಶೇಷ ಮಹತ್ವವಿದೆ. ಈ ಅವಧಿಯಲ್ಲಿ ವಿವಾಹಿತ ದಂಪತಿ ಬ್ರಹ್ಮಚರ್ಯ ಆಚರಿಸುವ ಮೂಲಕ ಒಟ್ಟಿಗೆ ಇರಬೇಕು. ಶಿವಣ್ಣ ಗೀತಾ ದಂಪತಿ ಷಷ್ಟಿಪೂರ್ತಿ ಕಾರ್ಯಕ್ರಮದಲ್ಲಿ ಭಾಗಿಯಾಗಲು ತಮಿಳುನಾಡಿಗೆ ತೆರಳಿದ್ದರು.
6/6
Share
ಈ ಮೂಲಕ ತಮ್ಮ ಜೀವನದ ಧ್ಯೇಯ ಪೂರೈಸಬೇಕು. ಈ ಪೂಜೆ ಅವಧಿ ಎರಡು ದಿನ ಇರುತ್ತದೆ. 'ಯಮುನಾ ಪೂಜೆ' ಮಾಡುವ ಮೂಲಕ ಶುಭ ಅವಧಿಯಲ್ಲಿ ಷಷ್ಟಿ ಪೂಜೆ ಆರಂಭಿಸಲಾಗುತ್ತದೆ.


Click it and Unblock the Notifications