Home / Photos
ಮೈಸೂರು ದಸರಾ 2024, ಮಾವುತರು, ಕಾವಾಡಿಗರ ಜೊತೆ ಸಚಿವರ ಉಪಹಾರ
By Gururaj S
ಮೈಸೂರು ದಸರಾ ಆನೆಗಳ ಯೋಗ ಕ್ಷೇಮ ನೋಡಿಕೊಳ್ಳುವ ಮಾವುತರು, ಕವಾಡಿಗರು ಸಚಿವ ಡಾ. ಹೆಚ್. ಸಿ. ಮಹದೇವಪ್ಪ ಜೊತೆ ಶನಿವಾರ ವಿಶೇಷ ಉಪಹಾರ ಸವಿದರು.
1/6
Share
ಸಮಾಜ ಕಲ್ಯಾಣ ಇಲಾಖೆ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್. ಸಿ. ಮಹದೇವಪ್ಪ ಶನಿವಾರ ಮೈಸೂರು ದಸರಾಕ್ಕೆ ಆಗಮಿಸಿರುವ ಆನೆಗಳ ಜೊತೆ ಬಂದಿರುವ ಮಾವುತರು, ಕಾವಾಡಿಗಳ ಜೊತೆ ಉಪಹಾರ ಸೇವಿಸಿದರು. ಮಾವುತರು, ಕಾವಾಡಿಗರು ಮತ್ತು ಅವರ ಕುಟುಂಬ ಸದಸ್ಯರಿಗೆ ಹೋಳಿಗೆಯನ್ನು ಬಡಿಸಿದರು. ಬಳಿಕ ಅವರ ಜೊತೆ ಉಪಹಾರ ಸವಿದರು.
2/6
Share
ಶನಿವಾರ ಮೈಸೂರು ಅರಮನೆ ಆವರಣದಲ್ಲಿ ಮೈಸೂರು ಜಿಲ್ಲಾಡಳಿತ ಮೈಸೂರು ದಸರಾ 2024ಕ್ಕೆ ಆಗಮಿಸಿರುವ ಮಾವುತರು, ಕಾವಾಡಿಗರು ಅವರ ಕುಟುಂಬದವರಿಗೆ ಉಪಹಾರವನ್ನು ಆಯೋಜಿಸಿತ್ತು. ಸಚಿವ ಡಾ. ಎಚ್. ಸಿ. ಮಹದೇವಪ್ಪ ಎಲ್ಲರಿಗೂ ಉಪಹಾರ ಬಡಿಸಿ, ತಾವು ಉಪಹಾರ ಸವಿದರು.
3/6
Share
ನಾಡಹಬ್ಬಕ್ಕೆ ಮೈಸೂರು ದಸರಾದಲ್ಲಿ ಪಾಲ್ಗೊಳ್ಳುವ ಆನೆಗಳ ಯೋಗ ಕ್ಷೇಮ ನೋಡಿಕೊಳ್ಳುವ ಮಾವುತರು, ಕಾವಾಡಿಗೆ ಯೋಗ ಕ್ಷೇಮ ವಿಚಾರಿಸಿದ ಸಚಿವ ಡಾ. ಎಚ್. ಸಿ. ಮಹದೇವಪ್ಪ ಅವರ ಕಾರ್ಯವನ್ನು ಶ್ಲಾಘಿಸಿದರು. ಅವರ ಯೋಗಕ್ಷೇಮವನ್ನು ವಿಚಾರಿಸಿದರು.
4/6
Share
ಸಚಿವ ಡಾ. ಎಚ್. ಸಿ. ಮಹದೇವಪ್ಪ ಮಾವುತರು ಮತ್ತು ಕಾವಾಡಿಗರೊಂದಿಗೆ ಉಪಹಾರವನ್ನು ಸೇವಿಸಿದರು. ಅವರ ಯೋಗಕ್ಷೇಮಕ್ಕಾಗಿ ಜಿಲ್ಲಾಡಳಿತ ವತಿಯಿಂದ ಮಾಡಿರುವ ಸೌಲಭ್ಯಗಳ ಮಾಹಿತಿ ಪಡೆದರು. ಮಾವುತರು, ಕಾವಾಡಿಗರ ಮಕ್ಕಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮವನ್ನು ವೀಕ್ಷಣೆ ಮಾಡಿದರು.
5/6
Share
ಡಾ. ಎಚ್. ಸಿ. ಮಹದೇವಪ್ಪ ಅವರ ಜೊತೆ ಮೈಸೂರು ಜಿಲ್ಲೆಯ ಶಾಸಕ ತನ್ವೀರ್ ಸೇಠ್, ಜಿ. ಟಿ. ದೇವೇಗೌಡ ಹಾಗೂ ವಿಧಾನ ಪರಿಷತ್ ಸದಸ್ಯರಾದ ಡಾ. ಯತೀಂದ್ರ ಸಿದ್ದರಾಮಯ್ಯ ಸೇರಿದಂತೆ ಜಿಲ್ಲೆಯ ಅಧಿಕಾರಿಗಳು ಉಪಸ್ಥಿತರಿದ್ದರು.
6/6
Share
ಈ ಬಾರಿಯ ಮೈಸೂರು ದಸರಾಕ್ಕೆ ಅಕ್ಟೋಬರ್ 3ರಂದು ಚಾಲನೆ ದೊರೆಯಲಿದೆ. ಮೈಸೂರು ಜಿಲ್ಲಾಡಳಿತ ಅದ್ದೂರಿಯಾಗಿ ದಸರಾ ಆಚರಣೆ ಮಾಡಲು ತಯಾರಿ ನಡೆಸುತ್ತಿದೆ. ಮೈಸೂರು ದಸರಾದಲ್ಲಿ ಪಾಲ್ಗೊಳ್ಳಲು ಎರಡು ಬ್ಯಾಚ್ಗಳಲ್ಲಿ ಆನೆಗಳು ನಗರಕ್ಕೆ ಬಂದಿದ್ದು, ಜಂಬೂ ಸವಾರಿ ತಾಲೀಮು ನಡೆಸುತ್ತಿವೆ.


Click it and Unblock the Notifications