Home / Photos
ಗುಡ್ಡ ಕುಸಿತದ ಬಳಿಕ ಅಂಕೋಲ ಬಳಿಯ ಶಿರೂರ ಹೇಗಿದೆ?
By Gururaj S
ಜುಲೈ 16ರಂದು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರದಲ್ಲಿ ಗುಡ್ಡ ಕುಸಿತವಾಗಿತ್ತು. ಈ ಸ್ಥಳ ಈಗ ಹೇಗಿದೆ?.
1/6
Share
ಜುಲೈ 16ರಂದು ಭೂ ಕುಸಿತವಾದ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಶಿರೂರ ಗ್ರಾಮದ ಎನ್ಹೆಚ್ 66ರಲ್ಲಿ ಸದ್ಯ ಕಂಡು ಬರುತ್ತಿರುವ ದೃಶ್ಯವಿದು. ಗುಡ್ಡ ಕುಸಿತದಲ್ಲಿ ಕಾಣೆಯಾದ ಮೂವರು ಇನ್ನೂ ನಾಪತ್ತೆಯಾಗಿದ್ದಾರೆ. ಸದ್ಯಕ್ಕೆ ಶೋಧ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ.
2/6
Share
ಉತ್ತರ ಕನ್ನಡ ಜಿಲ್ಲಾ ಪ್ರವಾಸ ಕೈಗೊಂಡಿದ್ದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅಂಕೋಲಾ ತಾಲೂಕಿನ ಶಿರೂರ ರಾಷ್ಟ್ರೀಯ ಹೆದ್ದಾರಿ ಸಮೀಪ ಗುಡ್ಡ ಕುಸಿತಗೊಂಡ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
3/6
Share
ಜುಲೈ 16ರ ಬೆಳಗ್ಗೆ 8.30ರ ಸುಮಾರಿಗೆ ಅಂಕೋಲಾದ ಶಿರೂರ ಗ್ರಾಮದ ಎನ್ಹೆಚ್ 66ರಲ್ಲಿ ಗುಡ್ಡ ಕುಸಿತವಾಗಿತ್ತು. ಎರಡು ಗ್ಯಾಸ್ ಟ್ಯಾಂಕರ್ ಗಂಗಾವಳಿ ನದಿಗೆ ಬಿದ್ದಿದ್ದವು. 10 ಜನರು ನಾಪತ್ತೆಯಾಗಿದ್ದರು. ಇನ್ನೂ ಮೂವರು ಇನ್ನೂ ಪತ್ತೆಯಾಗಿಲ್ಲ.
4/6
Share
ಅಂಕೋಲಾದ ಶಿರೂರ ಗ್ರಾಮದ ಎನ್ಹೆಚ್ 66ರಲ್ಲಿ ಗುಡ್ಡ ಕುಸಿತದಲ್ಲಿ ನಾಪತ್ತೆಯಾದ ಜಗನ್ನಾಥ್ ನಾಯ್ಕ್ ಮನೆಗೆ ಸಚಿವ ಮಧು ಬಂಗಾರಪ್ಪ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ವೈಯಕ್ತಿಕ ಆರ್ಥಿಕ ಸಹಾಯ ಮಾಡಿದ್ದಾರೆ. ಸರ್ಕಾರದಿಂದ ಪರಿಹಾರ ಒದಗಿಸಿ ನೆಲೆ ಕಲ್ಪಿಸಿಕೊಡುವ ಭರವಸೆ ನೀಡಿದ್ದಾರೆ.
5/6
Share
ಅಂಕೋಲಾದ ಶಿರೂರ ಗ್ರಾಮದ ಎನ್ಹೆಚ್ 66ರಲ್ಲಿ ಗುಡ್ಡ ಕುಸಿತವಾದಾಗ ಲಾರಿಯ ಸಮೇತ ಚಾಲಕ ಕೇರಳ ಮೂಲದ ಅರ್ಜುನ ನಾಪತ್ತೆಯಾಗಿದ್ದಾರೆ. ಅವರ ಪತ್ತೆಗಾಗಿ ಹುಡುಕಾಟವನ್ನು ಮತ್ತೆ ಆರಂಭಿಸಬೇಕು ಎಂದು ಕುಟುಂಬದವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
6/6
Share
ಸದ್ಯ ಗುಡ್ಡ ಕುಸಿತ ಎನ್ಹೆಚ್ 66ರಲ್ಲಿ ಮಣ್ಣು ತೆರವುಗೊಳಿಸಿ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಆದರೆ ಗುಡ್ಡ ಕುಸಿತದ ವೇಳೆ ನಾಪತ್ತೆಯಾದ ಮೂವರು ಇನ್ನೂ ಪತ್ತೆಯಾಗಬೇಕಿದೆ.


Click it and Unblock the Notifications