Home / Photos
Mahakumbh Mela 2025: ಮಹಾ ಕುಂಭಮೇಳ 2025ರಲ್ಲಿ ಭಾಗಿಯಾದ ವಿಶೇಷ ಬಾಬಾಗಳ ವಿವರ
By Mallika P
ವಿಶ್ವದಲ್ಲೇ ಅತಿ ದೊಡ್ಡ ಧಾರ್ಮಿಕ ಉತ್ಸವವಾಗಿರುವ 12 ವರ್ಷಗಳಿಗೊಮ್ಮೆ ನಡೆಯುವ ಮಹಾ ಕುಂಭಮೇಳ ಉತ್ತರ ಪ್ರದೇಶದ ಪ್ರಯಾಗ್ ರಾಜ್ನಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ.
1/7
Share
ಭಾರತದಲ್ಲಿ ಹಿಂದೂ ಧರ್ಮದಲ್ಲಿ ಅತ್ಯಂತ ದೊಡ್ಡ ಹಾಗೂ ಅತ್ಯಂತ ಪವಿತ್ರವಾದ ಉತ್ಸವಗಳಲ್ಲಿ ಪ್ರಮುಖವಾದ ಮಹಾ ಕುಂಭಮೇಳಕ್ಕೆ ಉತ್ತರ ಪ್ರದೇಶದ ಪ್ರಯಾಗ್ ರಾಜ್ನಲ್ಲಿ ಜನವರಿ 13ರಿಂದ ಚಾಲನೆ ಸಿಕ್ಕಿದ್ದು, ನಾಲ್ಕು ದಿನಗಳನ್ನು ಯಶಸ್ವಿಯಾಗಿ ಮುಗಿಸಿ ಇಂದು ಐದನೇ ದಿನಕ್ಕೆ ಕಾಲಿಟ್ಟಿದೆ.
2/7
Share
ಮಹಾ ಕುಂಭ ಮೇಳ ಆರಂಭವಾದ ಮೊದಲ ದಿನ ಅಂದರೆ ಜನವರಿ 13 ರಂದು 1.75 ಕೋಟಿಯಷ್ಟು ಭಕ್ತರು ಪವಿತ್ರ ಸ್ನಾನ ಮಾಡಿದ್ದು, ಮಕರ ಸಂಕ್ರಾಂತಿಯ ಮಾರನೇ ದಿನ ಜನವರಿ 15 ರಂದು 3.5 ಕೋಟಿ ಭಕ್ತರು ತ್ರಿವೇಣಿ ಸಂಗಮದಲ್ಲಿ ಮಹಾದೇವನ ಸ್ಮರಣೆ ಮಾಡುತ್ತಾ ಕುಂಭ ಸ್ನಾನ ಮಾಡಿದ್ದಾರೆ.
3/7
Share
ಭಾರತೀಯರು, ವಿದೇಶಿಗರು, ಹಿಂದೂಗಳು, ಹಿಂದೂಯೇತರರು, ಆಸ್ತಿಕರು, ನಾಸ್ತಿಕರು, ನಾಗ ಸಾಧುಗಳು, ಸಂತರು ಸೇರಿದಂತೆ ಜಗತ್ತಿನಾದ್ಯಂತದಿಂದ ಸುಮಾರು 40 ಕೋಟಿ ಭಕ್ತರು ಮಹಾ ಕುಂಭ ಮೇಳ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಈ ಬಾರಿ ವಿಶೇಷ ಎಂಬಂತೆ ಅನೇಕ ರೀತಿಯ ನಾಗ ಸಾಧುಗಳು ಭಾಗಿಯಾಗಿದ್ದು, ರುದ್ರಾಕ್ಷಿ ಬಾಬಾ ಕೂಡ ಮಹಾ ಕುಂಭ ಮೇಳದಲ್ಲಿ ಭಾಗಿಯಾಗಿದ್ದಾರೆ.
4/7
Share
ಈ ಬಾರಿಯ ಮಹಾ ಕುಂಭ ಮೇಳದಲ್ಲಿ ಮಹಂತ್ ರಜಪುರಿ ಜಿ ಮಹಾರಾಜ್ ನಾಗ ಸಾಧುವು ತಲೆಯ ಮೇಲೆ ಪಾರಿವಾಳ ಇಟ್ಟುಕೊಂಡು ಕುಂಭ ಮೇಳದಲ್ಲಿ ಭಾಗಿಯಾಗಿದ್ದಾರೆ. ಇನ್ನು ಮಹಂತ್ ರಜಪುರಿ ಜಿ ಮಹಾರಾಜ್ರಂತಹ ಸಾವಿರಾರು ಸಾಧು-ಸಂತರು ನಾಗಾ ಸಾಧುಗಳ ಉಪಸ್ಥಿತಿಯಲ್ಲಿ ಜನವರಿ 29ರಂದು ಮೌನಿ ಅಮಾವಾಸ್ಯೆ ಪುಣ್ಯಸ್ನಾನ ನಡೆಯಲಿದೆ.
5/7
Share
ಮಹಾ ಕುಂಭ ಮೇಳದಲ್ಲಿ ಅನೇಕ ವಿಶೇಷ ಬಾಬಾಗಳು ಭಾಗಿಯಾಗಿದ್ದು, ಈ ಪೈಕಿ ರಾಧೆ ಪುರಿ ಬಾಬಾ ಎಲ್ಲರ ಗಮನ ಸೆಳೆದಿದ್ದಾರೆ. ರಾಧೆ ಪುರಿ ಬಾಬಾ ಕಳೆದ ಹದಿನಾಲ್ಕು ವರ್ಷಗಳಿಂದ ತಮ್ಮ ಒಂದು ಕೈಯನ್ನು ಮೇಲಕೆತ್ತಿ ಹಠ ಯೋಗದ ಮೂಲಕ ಸಮರ್ಪಣೆ ಮತ್ತು ಲೋಕ ಕಲ್ಯಾಣವನ್ನು ತೋರಿಸುತ್ತಿದ್ದಾರೆ.
6/7
Share
ಮಹಾ ಕುಂಭ ಮೇಳದಲ್ಲಿ ಅಥವಾ ಕುಂಭ ಮೇಳಗಳಲ್ಲಿ ನಾಗಾ ಸಾಧುಗಳಿಗೆ ಹೆಚ್ಚಿನ ಗೌರವ ಪ್ರಾಮುಖ್ಯತೆ ನೀಡಲಾಗುತ್ತದೆ. ಈ ಬಾರಿ ಐಐಟಿ ಬಾಂಬೆಯ ಮಾಜಿ ಎರೋಸ್ಪೇಸ್ ಎಂಜಿನಿಯರ್ ವಿದ್ಯಾರ್ಥಿಯಾದ ಐಐಟಿಯನ್ ಬಾಬಾ ಭಾಗಿಯಾಗಿದ್ದಾರೆ. ಐಐಟಿ ಬಾಂಬೆಯ ಏರೋಸ್ಪೇಸ್ ಎಂಜಿನಿಯರಿಂಗ್ ಪದವೀಧರನಾಗಿದ್ದ ಅಭಯ್ ಸಿಂಗ್ ಈಗ ಐಐಟಿಯನ್ ಬಾಬಾ ಆಗಿದ್ದಾರೆ.
7/7
Share
ಆದಿ ಶಂಕರಾಚಾರ್ಯ ಧರ್ಮವನ್ನು ರಕ್ಷಿಸುವ ಸಲುವಾಗಿ ಮೊದಲು ನಾಗಾ ಸಾಧುಗಳ ಗುಂಪನ್ನು ರಚಿಸಿದರು. ಹೀಗಾಗಿ ಕುಂಭ ಮೇಳದಲ್ಲಿ ಧರ್ಮವನ್ನು ರಕ್ಷಿಸುವ ನಾಗಾ ಸಾಧುಗಳನ್ನು ಮೊದಲು ಸ್ನಾನ ಮಾಡಬೇಕು ಎನ್ನುವ ನಂಬಿಕೆಯಾಗಿದೆ. 2025ರ ಈ ಮಹಾ ಕುಂಭ ಮೇಳದಲ್ಲಿ ಲಕ್ಷಾಂತರ ನಾಗಾ ಸಾಧುಗಳು ಭಾಗಿಯಾಗಿದ್ದು, ಅವರ ಬದುಕು ಸಾಮಾನ್ಯ ಭಕ್ತರಿಗೆ ಸೋಜಿಗವಾಗಿದೆ.


Click it and Unblock the Notifications